ಕರಾವಳಿ

ಒಂದೆರಡು ದಿನಗಳಲ್ಲಿ ಶಿರಾಢಿ ಘಾಟ್‌ನಲ್ಲಿ ಪ್ರಯಾಣಿಕ ವಾಹನಗಳಿಗೆ ಅನುಮತಿ : ಸಚಿವ ಖಾದರ್

Pinterest LinkedIn Tumblr

ಮಂಗಳೂರು : ಶಿರಾಡಿ ಘಾಟಿ ಮಾರ್ಗವಾಗಿ ಪ್ರಯಾಣಕ್ಕೆ ಪ್ರಯಾಣಿಕ ವಾಹನಗಳಿಗೆ ಒಂದೆರಡು ದಿನಗಳ ಒಳಗಾಗಿ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ತಿಳಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ದ. ಕ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯವಾದ ಕ್ರಮಗಳನ್ನು ಕೈಗೊಂಡು ಜನಪರ ನಿರ್ಣಯ ಕೈಗೊಳ್ಳಲು ಹೇಳಿದರು.

ಇದೇ ರೀತಿ ಸುಳ್ಯ ಸಂಪಾಜೆ ಮಡಿಕೇರಿ ರಸ್ತೆ ನಿರ್ಮಾಣ ಮುಂದಿನ 15 ದಿನಗಳೂಳಗಾಗಿ ಮುಗಿಸಲು ಕಾಮಗಾರಿ ಯನ್ನ ನಡೆಸಲು ಅಗತ್ಯವಾದ ಕ್ರಮಗಳನ್ನು ಕೈಗೊಂಡಿರುವುದಾಗಿ ಸಚಿವರು ಹೇಳಿದರು.

ಶಿರಾಡಿ ಬಸ್ ಸಂಚಾರ : ಡಿಸಿಗಳ ಸಭೆ ಬಳಿಕ ನಿರ್ಧಾರ 

ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್ ಮತ್ತು ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಲು, ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಹಾಸನ ಡಿಸಿಯವರೊಂದಿಗೆ ಚರ್ಚಿಸಿದ ಬಳಿಕ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Comments are closed.