ಕರಾವಳಿ

71 ದಿನಗಳ ಬಳಿಕ ಹೆಝಲ್ ಮೃತದೇಹ ಉಡುಪಿಗೆ: ಶಿರ್ವದಲ್ಲಿ ಅಂತ್ಯಕ್ರಿಯೆ

Pinterest LinkedIn Tumblr

ಉಡುಪಿ: ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಆಸ್ಪತ್ರೆ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿರ್ವ ಸಮೀಪದ ಕುತ್ಯಾರಿನ ಹೆಝಲ್ ಜೋತ್ನ್ಸಾ ಕ್ವಾಡ್ರಸ್ ಮೃತದೇಹ ಬರೋಬ್ಬರಿ 71 ದಿನಗಳ ಬಳಿಕ ಉಡುಪಿ ತಲುಪಿದ್ದು ಆಕೆಯ ಪತಿ, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

ಹೆಝಲ್‌ ಮೃತದೇಹ 2 ತಿಂಗಳು 11 ದಿನಗಳ ಬಳಿಕ ಗುರುವಾರ ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿತು. ಅಲ್ಲಿಂದ ಶವವನ್ನು ಆಂಬುಲೆನ್ಸ್‌ ಮೂಲಕ ಊರಿಗೆ ತರಲಾಗಿದ್ದು, ಮಣಿಪಾಲದ ಶವಾಗಾರದಲ್ಲಿ ಇರಿಸಿ ಶುಕ್ರವಾರ ಮಧ್ಯಾಹ್ನ ಮೃತದೇಹ ವನ್ನು ಕುತ್ಯಾರು ಅಗರ್‌ದಂಡೆಯಲ್ಲಿರುವ ತವರು ಮನೆಗೆ ಕೊಂಡೊಯ್ದು, ಬಳಿಕ ಪತಿ ಅಶ್ವಿ‌ನ್‌ ಮಥಾಯಸ್‌ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗಿತ್ತು.

ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಅಂತಿಮ ಸಂಸ್ಕಾರ ಸಂಜೆ 4 ಗಂಟೆಗೆ ನೆರವೇರಿತು.

Comments are closed.