ಕರಾವಳಿ

ಉಡುಪಿಯಲ್ಲಿ ಸಿಕ್ಕ 80 ವರ್ಷದ ವೃದ್ಧೆಯ ವಾರಸುದಾರರು ಎಲ್ಲಿದ್ದಾರೆ?

Pinterest LinkedIn Tumblr

ಉಡುಪಿ: ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಅಸಹಾಯಕರಾಗಿದ್ದ ಸುಮಾರು 80 ವರ್ಷದ ವೃದ್ಧೆಯನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ರಕ್ಷಿಸಿ ಉಡುಪಿ ಕೃಷ್ಣಮಠದ ಪಲಿಮಾರು ಮಠದಲ್ಲಿ ಆಶ್ರಯ ಒದಗಿಸಿರುತ್ತಾರೆ. ವೃದ್ಧೆಯು ಬ್ರಾಹ್ಮಣ ಸಮಾಜದವರಾಗಿದ್ದು, ಹೆಸರು ಜಯಮ್ಮ ಎಂದು ತಿಳಿಸಿರುತ್ತಾರೆ.

ವೃದ್ಧೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ದೂರವಾಣಿ ಸಂಖ್ಯೆ; 0820-2526394 ಅನ್ನು ಸಂಪರ್ಕಿಸುವಂತೆ ಸಹಾಯವಾಣಿಯ ಪ್ರಕಟಣೆ ತಿಳಿಸಿದೆ.

Comments are closed.