ಕರಾವಳಿ

ದ.ಕ.ಜಿಲ್ಲಾ : ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಅಕ್ಟೋಬರ್ 01 : ಪ್ರತೀ ವರ್ಷವೂ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿಕೊಂಡು ಬರಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಅನುಪಮ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 1 ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ನೀಡಿ ಗೌರವಿಸಿಕೊಂಡು ಬರುವ ಪದ್ಧತಿ ಜಿಲ್ಲಾಡಳಿತದಿಂದ ಇರುತ್ತದೆ.

ಅಂತೆಯೇ 2018ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ನೀಡುವ ಜಿಲ್ಲಾ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತಕಲೆಗಳು, ಸಮಾಜಸೇವೆ, ಜಾನಪದ, ಪರಿಸರ-ವಿಜ್ಞಾನ, ವೈದ್ಯಕೀಯ, ಸಂಶೋಧನೆ, ಪತ್ರಿಕೋದ್ಯಮ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಗುರುತರವಾದ ಸಾಧನೆಗೈದ ಗಣ್ಯರು ಅರ್ಜಿಯನ್ನು ತಮ್ಮ ಸೇವೆ/ಸಾಧನೆಯ ಕ್ಷೇತ್ರ ಹಾಗೂ ಸಂಕ್ಷಿಪ್ತ ದಾಖಲೆ, ವಿವರಗಳೊಂದಿಗೆ ಅಕ್ಟೋಬರ್ 17 ರಂದು ಸಾಯಂಕಾಲ 5 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಗೆ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.