ಕರಾವಳಿ

ಮೊಸರಿಗೆ ಬೆಲ್ಲ ಸೇರಿಸಿ ತಿಂದರೆ ಅಗುವ ಪ್ರಯೋಜನ ಬಲ್ಲಿರಾ..!

Pinterest LinkedIn Tumblr

ದಿನಕ್ಕೆ 250-600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವಮಾನ ಪೂರ್ತಿ ಆರೋಗ್ಯವಂತನಾಗಿ, ಉತ್ಸಾಹಭರಿತನಾಗಿರುತ್ತಾನೆ ಇದು ಮುದುಕಕಾಗುವುದನ್ನೂ ನಿಧಾನಿಸುತ್ತದೆ ರಕ್ತದ ಕೊಲೆಸ್ಟರಾಲ್ ತಗ್ಗಿಸುವುದು, ಹೃದಯ ಮತ್ತು ರಕ್ತನಾಳ ವ್ಯವಸ್ಥೆಯನ್ನು ದೃಢವಾಗಿ ಸಬಲ್ಲದು ಎಂದು ಅಧ್ಯಯನಗಳು ಹೇಳುತ್ತವೆ, ಮೊಸರಿಗೆ ಅನ್ನ, ಬೆಲ್ಲ ಸೇರಿಸಿ, ಊಟ ಮಾಡುವುದರಿಂದ ಮೂಲವ್ಯಾಧಿ ನಿವಾರಣೆ ಯಾಗುತ್ತದೆ.

ನಿತ್ಯವೂ ಮೊಸರು ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಸಿಹಿ ಮೊಸರಿಗೆ ಕಾಳು ಮೆಣಸಿನ ಪುಡಿ ಮತ್ತು ಬೆಲ್ಲ ಅನ್ನದೊಂದಿಗೆ ಸೇರಿಸಿ ಸೇವಿಸಿದರೆ ಉರಿ ಮೂತ್ರದಿಂದಾದ ಉರಿ ಶಮನವಾಗುತ್ತದೆ.

ಸಿಹಿ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸಿದರೆ ತೂಕ ವರ್ಧಿಸುತ್ತದೆ.

ಮೊಸರು, ಅರಶಿನ, ಬೆಲ್ಲ ಸೇರಿಸಿ ಸೇವಿಸಿದರೆ ಮೂಗಿನ ತೊಂದರೆ ಕಡಿಮೆಯಾಗುತ್ತದೆ.

ಅರಶಿನ ಕೊಂಬನ್ನು ತೇಯ್ದು, ಮೊಸರಿನೊಂದಿಗೆ ಸೇರಿಸಿ, ಬಾರಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ದತೆ ನಿವಾರಣೆಯಾಗುತ್ತದೆ.

ಒಂದು ಚಮಚ ಮೆಂತ್ಯೆ ಕಾಳನ್ನು ಮೊಸರಿನಲ್ಲಿ ಸೇರಿಸಿ, ನುಂಗುವುದರಿಂದಲೂ ಮಲಬದ್ದತೆ ಪರಿಹಾರವಾಗುತ್ತದೆ.

ಮೊಸರಿಗೆ ಅರಶಿನ ಬೆರೆಸಿ ಲೇಪಿಸುವುದರಿಂದ ತುರಿಕೆ, ಇಸುಬು, ನೀರುಗುಳ್ಳೆ ಇತ್ಯಾದಿ ಚರ್ಮ ರೋಗಗಳಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.

Comments are closed.