ಕರಾವಳಿ

ಸ್ವಚ್ಚತೆ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಮುಲ್ಯ : ಅಮಲ ಭಾರತ” ಸ್ವಚ್ಚತಾ ಅಭಿಯಾನ ಉದ್ಘಾಟಿಸಿ ಡಾ. ಸವಿತಾ.ಬಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್.02 : ಶ್ರೀ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ವಿಶೇಷ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಮಂಗಳವಾರ ಉಡುಪಿ ಹಾಗೂ ದ.ಕ.ಜಿಲ್ಲೆಯ ವಿವಿದೆಡೆಗಳಲ್ಲಿ ಏಕಕಾಲದಲ್ಲಿ ನಡೆಯಿತು.

ಮಂಗಳವಾರ ಬೆಳಗ್ಗೆ ನಗರದ ಲೇಡಿಘೋಶನ್ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಪರಿಕಲ್ಪನೆಯ “ಅಮಲ ಭಾರತ” ಸ್ವಚ್ಚತಾ ಜನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಲೇಡಿಘೋಶನ್ ಸರಕಾರಿ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸವಿತಾ.ಬಿ ಇವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರ ಸ್ಚಚ್ಚವಾಗಿದ್ದರೆ ನಾವು ಹಲವು ರೀತಿಯ ರೋಗರುಜಿನಗಳಿಂದ ದೂರವಿರ ಬಹುದು, ಸ್ವಚ್ಚತೆ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತೀ ಅಮುಲ್ಯವಾಗಿದ್ದು, ಪ್ರತೀ ವಿದ್ಯಾರ್ಥಿಗಳು ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪ್ರಮುಖರಾದ ಡಾ.ಜೀವರಾಜ್ ಸೊರಕೆ, ಡಾ. ದೇವದಾಸ್, ಮಾದವ ಸುವರ್ಣ, ಸುರೇಶ್ ಅಮೀನ್, ಯಶವಂತ ಮರೋಳಿ, ಹರಿದಾಸ್,ಎಸ್.ಎಮ್., ವೆಂಕಟೇಶ್ ಮಯ್ಯ, ರವಿ ಉಚ್ಚಿಲ, ಶ್ರೀನಿವಾಸ್ ಶೆಟ್ಟಿಗಾರ್, ಕಾರ್‌ಸ್ಟ್ರೀಟ್ ದಯನಂದ್ ಪೈ ಹಾಗೂ ಸತೀಶ್ ಪೈ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕ ಮಹೇಶ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ ಮತ್ತು ಸಂಗಾತಿ ವಿ.ಕೆ.ಜಿ.ಜೀ. ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಸಂಘದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಒ‌ಎನ್‌ಜಿಸಿ ಎಮ್‌ಆರ್‌ಪಿ‌ಎಲ್ ಸಂಸ್ಥೆಯ ಪ್ರಯೋಜಕ್ತದಲ್ಲಿ ನಡೆದ ಈ ಕಾರ್ಯಕರ್ಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ನಿ), ಸಂಗಾತಿ ವಿ.ಕೆ.ಜಿ.ಜೀ. ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) , ನಗರದ ಕಾರ್‌ಸ್ಟ್ರೀಟ್ ದಯನಂದ್ ಪೈ ಹಾಗೂ ಸತೀಶ್ ಪೈ ಸರಕಾರಿ ಪಿಯು ಕಾಲೇಜು ಹಾಗೂ ಇಂಡಿಯಾನ್ ರೆಡ್‌ಕ್ರಾಸ್ ಸಂಸ್ಥೆ ಸಹಕಾರ ನೀಡಿತು.

ಕಾರ್‌ಸ್ಟ್ರೀಟ್ ದಯನಂದ್ ಪೈ ಹಾಗೂ ಸತೀಶ್ ಪೈ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Comments are closed.