ಕರಾವಳಿ

ಬುದ್ಧಿವಂತ ಮಗುವಿಗೆ ಜನ್ಮ ನೀಡಬೇಕೆ? ಹಾಗದರೆ, ಗರ್ಭಿಣಿಯರು ಈ ಪಟ್ಟಿಯನ್ನು ಪ್ರತಿನಿತ್ಯ ಅನುಸರಿಸಿ

Pinterest LinkedIn Tumblr

ಮಕ್ಕಳು ತಾಯಿಯ ಅತ್ಯುತ್ತಮ ಗೆಳೆಯ/ಗೆಳತಿ ಎಂದರೆ ತಪ್ಪಾಗುವುದಿಲ್ಲ. ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದ ಕ್ಷಣದಿಂದಲೇ, ತಾಯಿಯು ತನ್ನ ಮಗುವಿನ ಆರೋಗ್ಯದ ಬಗ್ಗೆ ಚಿಂತಿಸತೊಡಗುತ್ತಾಳೆ. ತನ್ನ ಕೂಸು ಹುಟ್ಟುವ ಮೊದಲೇ ಸಾವಿರಾರು ಕನಸು, ಆಸೆ ಆಕಾಂಕ್ಷೆಯನ್ನು ಹೊಂದಿರುತ್ತಾಳೆ. ಮಗುವಿಗೆ ಯಾವ ಹೆಸರಿಡಬೇಕು, ಹೇಗೆ ಬೆಳಸಬೇಕು, ಮುಂದೆ ದೊಡ್ಡ ವಿಜ್ಞಾನಿಯನ್ನಾಗಿ ಮಾಡಬೇಕು ಎಂದು ಮನಸ್ಸಿನೊಳಗೆಯೇ ಗಾಳಿಯ ಗೋಪುರವೊಂದನ್ನು ನಿರ್ಮಿಸುತ್ತಾಳೆ. ಯಾವ ತಾಯಿಗೆ ತಾನೇ, ತನ್ನ ಮಗು ಎಲ್ಲರಿಗಿಂತ ಬುದ್ಧಿವಂತನಾಗಬೇಕು ಎಂಬ ಹಂಬಲವಿರುವುದಿಲ್ಲ ಹೇಳಿ? ಹಾಗಾದರೆ, ಗರ್ಭದಲ್ಲಿರುವ ನಿಮ್ಮ ಕಂದಮ್ಮಗಳ, ಬುದ್ಧಿ ಚುರುಕಾಗಿಸಲು ನೀವು ಏನು ಮಾಡಬೇಕು ಎಂಬುದರ ಪಟ್ಟಿ ಇಲ್ಲಿದೆ. ಓದಿ ಇದರ ಪ್ರಯೋಜನ ಪಡೆಯಿರಿ.

೧. ಉತ್ತಮ ಸಂಗೀತವನ್ನು ಆಲಿಸಿ
ಇದು ಹೇಗೆ ನಿಮ್ಮ ಗರ್ಭದಲ್ಲಿರುವ ಮಗುವನ್ನು ಚುರುಕುಗೊಳಿಸುತ್ತದೆ ಎಂದು ನೀವು ಯೋಚಿಸುತ್ತಿದ್ದೀರಾ? ನಿಮ್ಮ ಮೆದುಳಿನೊಳಗಿರುವ “ಸೆರೋಟೋನಿನ್” ಎಂಬ ಸಂತೋಷದ ಹಾರ್ಮೋನ್ ಬಿಡುಗಡೆಯಾಗಿ, ನಿಮ್ಮ ಮನಸ್ಸಿನ ಒತ್ತಡವನ್ನು ಹೋಗಲಾಡಿಸುತ್ತದೆ. ನೀವು ಖುಷಿಯಾಗಿದ್ದರೆ, ನಿಮ್ಮ ಮಗುವಿನ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಗೆ ಯಾವುದೇ ರೀತಿಯ ದುಷ್ಪರಿಣಾಮಗಳಾಗದೆ, ಹುಟ್ಟಿದ ನಂತರ ನಿಮ್ಮ ಮಗು ಚಟುವಟಿಕೆಯಿಂದ ಕೂಡಿರುತ್ತದೆ.

೨. ನಿಮ್ಮ ಹೊಟ್ಟೆಯ ಮೇಲೆ ಕೈಯ್ಯಾಡಿಸಿ
ಹೌದು, ಸಂಶೋಧನೆಗಳು ತಿಳಿಸುವಂತೆ, ಗರ್ಭಾವಸ್ಥೆಯಲ್ಲಿ ತಾಯಿಯು ತನ್ನ ಹೊಟ್ಟೆಯ ಮೇಲೆ ಕೈಯಾಡಿಸುವುದರಿಂದ, ಮಗುವಿಗೆ ತಾಯಿಯು ತನ್ನನ್ನು ಮುಟ್ಟುತ್ತಿದ್ದಾಳೆ ಎಂದು ಅನುಭವವಾಗುತ್ತದೆ. ಇದರಿಂದ ಮಗುವಿನ ದೇಹದೊಳಗೆ ಸುಗಮವಾಗಿ ರಕ್ತ ಸಂಚಾರವಾಗುತ್ತದೆ ಹಾಗು ಬೇಕಾಗಿರುವ ಪೋಷಕಾಂಶಗಳು ದೊರೆತು ನಿಮ್ಮ ಕಂದಮ್ಮಗಳು ಚೂಟಿಯಾಗುತ್ತದೆ.

 

 

 

 

 

 

 

೩. ಪ್ರತಿನಿತ್ಯ ವ್ಯಾಯಾಮ

ಗರ್ಭಿಣಿಯರಿಗೆಂದೇ ಹೇಳಿರುವ ಸುಲಭ ವ್ಯಾಯಾಮಗಳ್ಳನ್ನು, ಪ್ರತಿನಿತ್ಯ ತಪ್ಪದೆ ಅಭ್ಯಸಿಸಿ. ಇದರಿಂದ ಗರ್ಭಾವಸ್ಥೆಯಲ್ಲಾಗುವ ಮಲಬದ್ದತೆ, ಮಧುಮೇಹ, ಆಯಾಸ, ಪ್ರಸವದ ಭಯವೆಲ್ಲಾ ಹೋಗಿ, ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳ್ಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದಲ್ಲದೆ ಎಂದೋರ್ಫಿನ್ ಎಂಬ ಹಾರ್ಮೋನ್ ಕೂಡ ದೇಹದಿಂದ ಸ್ರವಿಸಿ, ನಿಮ್ಮ ಮಗುವಿನ ಮೆದುಳಿನೊಳಗೆ ಸೇರುವುದರಿಂದ ಮಕ್ಕಳು ಬುದ್ಧಿವಂತರಾಗುತ್ತಾರೆ.

೪. ಬಿಸಿಲಿಗೆ ಹೋಗಿ
ಮೂಳೆಗಳ ರೋಗಗಳು ಹುಟ್ಟುವ ಮಕ್ಕಳ್ಳಲ್ಲಿ ಬಾರದ ಹಾಗೆ ಮಾಡಬೇಕಾದರೆ, ಗರ್ಭಿಣಿಯರು ಪ್ರತಿನಿತ್ಯ, ಕೆಲ ಸಮಯ ಬಿಸಿಲಿಗೆ ಹೋಗಬೇಕು. ಜಾಸ್ತಿ ಸಮಯ ಬಿಸಿಲಿನ್ನಲ್ಲಿ ನಿಲ್ಲಬೇಡಿ, ಕೇವಲ 15-20 ನಿಮಿಷಗಳ ಕಾಲ ಹೊರಗೆ ಹೋಗಿ.

೫. ಗರ್ಭದಲ್ಲಿರುವ ನಿಮ್ಮ ಮಗುವಿನೊಂದಿಗೆ ಮಾತನಾಡಿ
ಏನಿದು ಹುಚ್ಚುತನವೆಂದು ನಗಬೇಡಿ. ಗರ್ಭದಲ್ಲಿರುವ ನಿಮ್ಮ ಮಗುವಿನೊಂದಿಗೆ ನೀವು ಮಾತನಾಡುವಾಗ, ಮಗುವು ಒಳಗಿನಿಂದ ಪ್ರತಿಕ್ರಿಯಿಸುತ್ತದೆ ಎಂದು ಅಮೇರಿಕಾದ ವಿಜ್ಞಾನಿಗಳು ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೀಗೆ ಮಾಡುವುದರಿಂದ ಮಕ್ಕಳ ಮನೋವಿಕಾಸವಾಗಿ, ಬುದ್ಧಿವಂತರಾಗುತ್ತಾರೆ ಎಂದು ವೈದ್ಯರು ಕೂಡ ತಿಳಿಸುತ್ತಾರೆ.

ಹಾಗಾದರೆ, ಇನ್ನೇಕೆ ತಡ? ಗರ್ಭಿಣಿಯರೇ ನಾವು ಹೇಳಿರುವ ಪಟ್ಟಿಯನ್ನು ಪ್ರತಿನಿತ್ಯ ಅನುಸರಿಸಿ, ಬುದ್ಧಿವಂತ ಮಗು ನಿಮ್ಮದಾಗಿಸಿ..

Comments are closed.