ಕರಾವಳಿ

ಲಂಚ ಸ್ವೀಕಾರದ ಆರೋಪ ಹೊತ್ತಿದ್ದ ಗ್ರಾಮಕರಣಿಕ ದೋಷಮುಕ್ತಿ

Pinterest LinkedIn Tumblr

ಕುಂದಾಪುರ: ಖಾತೆ ಬದಲಾವಣೆಗಾಗಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಬೀಜಾಡಿ ಗ್ರಾಮದ ಗ್ರಾಮಕರಣಿಕರಾಗಿದ್ದ ಅಬ್ದುಲ್ ರೆಹಮಾನ್ ಬ್ಯಾರಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶಿಸಿದೆ. ಇಲ್ಲಿನ ನ್ಯಾಯಾಧೀಶ ಪ್ರಕಾಶ ಖಂಡೇರಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿದ್ದಾರೆ. ಆರೋಪಿಯ ಪರವಾಗಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.

ಬೀಜಾಡಿ ಗ್ರಾಮಕರಣಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮಾನ್ ಅವರು ಲಂಚ ಸ್ವೀಕರಿಸಿರುವುದಾಗಿ ಆರೋಪಿಸಿ ಲಂಚ ವಿರೋಧ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಲೋಕಾಯುಕ್ತ ನಿರೀಕ್ಷಕರಾಗಿದ್ದ ಬಿಪಿ ದಿನೇಶ್ ಕುಮಾರ್ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಅಂದಿನ ಲೋಕಾಯುಕ್ತ ನಿರೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅಲ್ಲದೇ ಕುಂದಾಪುರದ ಅಂದಿನ ತಹಶೀಲ್ದಾರ್ ರಾಜು ಮೊಗವೀರ ಹಾಗೂ ಉಡುಪಿಯ ಜಿಲ್ಲಾಧಿಕಾರಿ ಹೇಮಲತಾ ಸಹಿತ ಒಟ್ಟು 8 ಮಂದಿ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದರು. ಆರೋಪಿ ಲಂಚ ಕೇಳಿದ ಬಗ್ಗೆ ಧ್ವನಿ ಸುರುಳಿಯನ್ನು ಹಾಜರುಪಡಿಸಿದ್ದರು.

Comments are closed.