ಕರಾವಳಿ

ಗರ್ಭದಲ್ಲಿ ಬೆಳೆಯುತ್ತಿರುವ ಮುದ್ದು ಕಂದಮ್ಮನಿಗೆ ಈ 10 ಅಂಶಗಳು ಅತಿವಿಷಕಾರಕ

Pinterest LinkedIn Tumblr

ಗರ್ಭಧಾರಣೆಯೆನ್ನುವುದು ಕಡುಬಯಕೆಗಳ ಸಮಯ. ಆ ಬಯಕೆಗಳನ್ನು ಯಾವುದಾದರೂ ರೂಪದಲ್ಲಿ ಇಡೇರಿಸಿಕೊಳ್ಳಲು ಹಂಬಲಿಸುತ್ತಿರುತ್ತೀರ , ಯಾರಾದರು ಅದನ್ನು ನಿರ್ಬಂಧಿಸಿದರೆ ಎದೆಯೊಡದಂತೆ ಭಾಸವಾಗುತ್ತದೆ. ದುರದೃಷ್ಟವಶಾತ್, ಹಲವು ವಿಷಯಗಳು ನಿಮ್ಮ ಉದರದಲ್ಲಿ ಬೆಳೆಯುತ್ತಿರುವ ಮುದ್ದು ಕಂದಮ್ಮನಿಗೆ ಅತಿವಿಷಕಾರಕವಾಗಿ ಪರಿಣಮಿಸುತ್ತದೆ.

ಅದಕ್ಕಾಗಿ, ನಿಮ್ಮ ಮುದ್ದು ಕಂದಮ್ಮನ ಉತ್ತಮ ಬೆಳೆವಣಿಗೆಗಾಗಿ ಇಲ್ಲಿ ನೀಡಿರುವ ಪ್ರಮುಖ ೧೦ ಅಂಶಗಳಿಂದ ನೀವು ದೂರವಿರುವುದು ಒಳ್ಳೆಯದು.

೧.ಮದ್ಯಪಾನ
ನಿಮ್ಮ ಮಗುವಿಗೆ ವಿಷಕಾರಕವಾಗಿ ಕಾಡುವ ಪಟ್ಟಿಯಲ್ಲಿ ಮೊದಲಿಗೆ ನಿಲ್ಲುವುದು ಮದ್ಯಪಾನ. ಇದರ ಸೇವನೆ ನಿಮ್ಮ ನವಜಾತ ಶಿಶುವಿಗೆ ಅತ್ಯಂತ ಹಾನಿಕಾರಕ. ಗರ್ಭಿಣಿಯು ಮದ್ಯಸಾರ ಪಾನೀಯ ಸೇವನೆ ಮಾಡುವ ನಿರೀಕ್ಷೆಯಲ್ಲಿದ್ದರೆ ಅವಳಿಗೆ ಅದರಿಂದ ದೂರವಿರಿಸುವುದು ಒಳಿತು. ನೀವು ಕುಡಿಯುವ ದ್ರವ್ಯವು ನಿಮ್ಮ ರಕ್ತನಾಳದಿಂದ ಭ್ರುಣಕ್ಕೆ ತಲುಪುತ್ತದೆ. ಇದರಿಂದ ಶಿಶುವು ಅತ್ಯಂತ ಕಠಿಣ ಸಮಸ್ಯೆಗಳಿಗೆ ತುತ್ತಾಗುತ್ತದೆ. ಇದು ನಿಮ್ಮ ಶಿಶುವಿನ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ.

೨.ಧೂಮಪಾನ
ಇದು ನಿಮ್ಮ ಮತ್ತು ನಿಮ್ಮ ಮಗುವಿನ ಮೇಲೆ ಗಂಭೀರ ಪರಿಣಾಮವನ್ನು ಮಾಡುತ್ತದೆ. ನೀವು ಧೂಮಪಾನ ಮಾಡಿದಾಗ ಅದರಲ್ಲಿರುವ ನಿಕೋಟಿನ್, ಇಂಗಾಲದ ಮಾನಾಕ್ಸೈಡ್ ಮತ್ತು ಹಲವು ರಾಸಾಯನಿಕಗಳು ನಿಮ್ಮ ಮೂಲಕ ನಿಮ್ಮ ಶಿಶುವನ್ನು ಪ್ರವೇಶಿಸುತ್ತವೆ. ಇದರಿಂದ ಅಕಾಲಿಕ ಜನನ, ಗರ್ಭಪಾತ, ಜರಾಯು ಬಾಷ್ಪಿಕರಣ, ಹೆರಿಗೆಗೆ ಮೊದಲೇ ಭ್ರೂಣ ಸಾಯುವಂತಹ ಹಲವು ತೊಂದರೆಗಳನ್ನು ಎದುರಿಸಬೇಕಾದಿತು. ನಿಮ್ಮ ಅಕ್ಕಪಕ್ಕದಲ್ಲಿ ಧೂಮಪಾನ ಮಾಡಿದಾಗ ಬರುವ ಹೊಗೆಯನ್ನು ನೀವು ಉಸಿರಿಸಿದಾಗ ಅದು ಕೂಡ ನಿಮ್ಮ ಮತ್ತು ನಿಮ್ಮ ಮಗುವಿನ ಅಷ್ಟೇ ಪರಿಣಾಮ ಬೀರುತ್ತದೆ.

೩. ಔಷಧ
ನೀವು ಗರ್ಭಿಣಿಯಾದಾಗ ಅಕ್ರಮ ಮತ್ತು ವೈದ್ಯರ ಸಲಹೆ ಇಲ್ಲದ ಔಷಧಗಳನ್ನು ತೆಗೆದುಕೊಳ್ಳಬಾರದು. ಔಷಧಗಳು ಹೆರಿಗೆ ಸಮಯದಲ್ಲಿ ನಿಮ್ಮ ಮಗುವಿಗೆ ಮತ್ತು ದಾದಿಯರಿಗೆ ತೊಂದರೆ ಮಾಡುತ್ತವೆ. ಇದರಿಂದ ಅಕಾಲಿಕ ಜನನ, ಗರ್ಭಪಾತವಲ್ಲದೆ ಶಿಶುವಿನ ದೇಹದಲ್ಲಿ ಅಥವಾ ಆರೋಗ್ಯದಲ್ಲಿ ಏರುಪೇರಾಗಬಹುದು.

೪.ಒತ್ತಡ
ನಿಮ್ಮ ಗರ್ಭದಲ್ಲಿ ನಿಮ್ಮ ಮುದ್ದು ಕಂದಮ್ಮನನ್ನು ಹೊತ್ತಿಕೊಂಡಿರುವಾಗ ಅದರ ರಕ್ಷಣೆ ಮಾಡುವುದು ನಿಮ್ಮ ಜವಬ್ದಾರಿಯಾದಾಗ ನಿಮಗೆ ಒತ್ತಡವಾಗುವುದು ಸಾಮಾನ್ಯ. ಒತ್ತಡದಿಂದ ಮಗುವಿಗೆ ದುಷ್ಪರಿಣಾಮ ಆಗುವ ಸಂಭವವಿರುತ್ತದೆ , ಇದರಿಂದ ಹೊರಬರಲು ಧ್ಯಾನ ಮಾಡಿರಿ ಮತ್ತು ಶಾಂತಿಯಿಂದ ಇರಲು ಪ್ರಯತ್ನಿಸಿ. ನಿದ್ರಾಹೀನತೆ, ಮಲಬದ್ದತೆಯಂತ ಲಕ್ಷಣಗಳು ಗರ್ಭಿಣಿ ದಿನಗಳನ್ನು ಕಷ್ಟಕರವಾಗಿಸಬಹುದು. ದೇಹದಲ್ಲಿ ಹಾರ್ಮೋನುಗಳು ಬದಲಾಗುವುದು ಕೂಡ ಒತ್ತಡಕ್ಕೆ ಕಾರಣವಾಗಬಹುದು.

೫.ಸಾಕುಪ್ರಾಣಿಗಳು
ನೀವು ಸಾಕಿರುವ ನಿಮ್ಮ ಮುಗ್ದ ಸಾಕುಪ್ರಾಣಿಗಳಿಂದ ನಿಮ್ಮ ಮಗುವಿಗೆ ತೊಂದರೆಯಾಗುತ್ತಿದೆ ಎಂದು ಬೇಸರಗೊಂಡಿದ್ದರೆ, ಅದಕ್ಕಾಗಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಿ. ನಿಮ್ಮ ಬೆಕ್ಕು ನೇರವಾಗಿ ತೊಂದರೆ ಮಾಡದಿದ್ದರೂ ಅದು ಮಾಡಿದ ಕೊಳಕಿನಿಂದ ಆಗಬಹುದು. ಟೊಕ್ಸೊಪ್ಲಾಸ್ಮಾಸಿಸ್ ಎಂಬುದು ಬೆಕ್ಕುಗಳಿಂದ ಬರುವ ಒಂದು ಸೋಂಕು ರೋಗ. ಸರೀಸೃಪಗಳು ಮತ್ತು ಉಭಯಚರಗಳು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾದ ಅಪಾಯಗಳನ್ನು ಹೊಂದಿವೆ. ಕ್ಯಾಂಪಿಲೋಬ್ಯಾಕ್ಟರ್, ಕ್ಲಮೈಡೋಸಿಸ್, ಪ್ರೋಟೋಸೋವನ್ ಮತ್ತು ಸಾಲ್ಮೊನೆಲ್ಲಾ ಮುಂತಾದ ರೀತಿಯ ಸೋಂಕುಗಳನ್ನು ಪಕ್ಷಿಗಳು ಹರಡಬಹುದು.

೬.ಕೀಟನಾಶಕಗಳು
ಸೊಳ್ಳೆ ಇಂದ ಬರುವಂತಹ ಡೆಂಗ್ಯು, ಮಲೇರಿಯಾ ರೋಗಗಳಿಂದ ತಪ್ಪಿಸಿಕೊಳ್ಳಲು ಕೀಟನಾಶಕಗಳನ್ನು ಬಳಸುವಿರಿ, ಆದರೆ ಆ ಕೀಟನಾಶಕಗಳಿಂದ ನಿಮಗೂ ಮತ್ತು ನಿಮ್ಮ ಮಗುವಿಗೂ ಆಗುವ ತೊಂದರೆಯ ಬಗ್ಗೆ ಯೋಚಿಸಿದ್ದೀರ?. ಬಹುಶಃ ನಿಮ್ಮ ದೇಹದ ಎಲ್ಲಾ ಭಾಗಗಳನ್ನು ನಿಯಂತ್ರಿಸುವ ಕೇಂದ್ರ ನರಮಂಡಲದ ಮೇಲೆ ಅದು ಪರಿಣಾಮ ಬೀರಬಹುದು. ಅದ್ದರಿಂದ ಕೀಟಗಳಿಂದ ದೂರರವಿರುವಂತೆ ಕೀಟನಾಶಕಗಳಿಂದಲೂ ದೂರವಿರುವುದು ಒಳ್ಳೆಯದು.

Pregnant mixed race woman power walking in park

೭.ಓಡುವುದು
ನಿಮಗೆ ಮೊದಲಿನಿಂದಲೂ ಓಡುವ ಅಭ್ಯಾಸವಿದ್ದರೆ, ನಿಮ್ಮ ಮೊದಲ ತ್ರೈಮಾಸಿಕದವರೆಗೂ ನೀವು ಓಡುವುದನ್ನು ಮುಂದುವರಿಯಿಸಬಹುದು. ತದನಂತರದ ದಿನಗಳಿಂದ ನೀವು ಈ ಅಭ್ಯಾಸವನ್ನು ನಿಲ್ಲಿಸುವುದು ಒಳ್ಳೆಯದು, ಇಲ್ಲದಿದ್ದರೆ ಇದರಿಂದ ನಿಮ್ಮ ಮಗುವಿಗೆ ತೊದರೆಯಾಗಬಹುದು ಅಥವಾ ಮಗುವು ಕೆಳಗೆ ಜಾರಬಹುದು ಮತ್ತು ನಿಮಗೆ ತೊಂದರೆಯಾಗಬಹುದು. ಆದ್ದರಿಂದ ಅವಕಾಶ ತೆಗೆದುಕೊಳ್ಳದೆ ವಿಶ್ರಾಂತಿ ಮಾಡುವುದು ಒಳ್ಳೆಯದು.

೮.ಮನೋರಂಜನಾ ತಾಣಗಳಲ್ಲಿ ಸವಾರಿ
ಖುಷಿ, ಮೋಜಿಗಾಗಿ ಮನೋರಂಜನಾ ತಾಣಗಳಲ್ಲಿ ಸವಾರಿ ಮಾಡುವುದು ಅಪಾಯಕಾರಿಯಾಗಿದೆ. ನಿಮ್ಮನ್ನು ಪ್ರಚೋದಿಸಿದರು ನೀವು ಸವಾರಿ ಮಾಡಲು ಹೋಗದೇ ಇರುವುದು ಒಳ್ಳೆಯದು. ಇಳಿಜಾರಿನಲ್ಲಿ ಬಲವಂತ್ತವಾಗಿ ಹೆಜ್ಜೆ ಇಡುವುದು ಮತ್ತು ಅನಿರೀಕ್ಷಿತ ಜಲಪಾತಗಳು ನಿಮ್ಮ ಮಗುವಿಗೆ ಹಾನಿಯಾಗಬಹುದು ಮತ್ತು ಅಕಾಲಿಕ ಜನ್ಮಕ್ಕೆ ಕಾರಣವಾಗಬಹುದು.

೯. ಭಾರ ಎತ್ತುವುದು
ನೀವು ಈ ಸಮಯದಲ್ಲಿ ಸಾಧ್ಯವಾದಷ್ಟು ಭಾರ ಎತ್ತುವುದನ್ನು ಕಡಿಮೆ ಮಾಡುವುದು ಒಳ್ಳೆಯದು, ನಿಮ್ಮ ಸಾಮಾಗ್ರಿ ಚೀಲವು ಭಾರ ಇದ್ದರೆ ಅದನ್ನೂ ಮುಟ್ಟದೆ ಇರುವುದು ಒಳ್ಳೆಯದು. ನೀವು ಅತಿಯಾದ ಭಾರ ಎತ್ತುವುದರಿಂದ ನಿಮಗೆ ತೊಂದರೆಯಾಗಬಹುದು, ಅದು ಮಗುವಿನ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ನಿಮ್ಮ ಭಾರ ಎತ್ತುವ ಎಲ್ಲಾ ಕೆಲಸಗಳನ್ನು ನಿಮ್ಮ ಪತಿ ಅಥವಾ ಸಂಬಂಧಿಕರಿಂದ ಮಾಡಿಸುವುದು ಒಳ್ಳೆಯದು.

೧೦.ಮೀನು

ಕಡಲ ಮೀನು ಒಮೆಗಾ -3 ಕೊಬ್ಬಿನಾಮ್ಲ ಮತ್ತು ಇತರ ಪೋಷಕಾಂಶಗಳ ಉತ್ತಮ ಮೂಲವಾಗಿರುವುದರಿಂದ ಅದು ನಿಮಗೆ ಮತ್ತು ನಿಮ್ಮ ಮಗುವಿಗೆ ಅಗತ್ಯವಾಗಿದೆ. ಆದರೆ ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ, ನೀವು ೩೪೦ ಗ್ರಾಮಿಗಿಂತ ಹೆಚ್ಚಿನ ಮೀನುಗಳನ್ನು ಅಥವಾ ವಾರದಲ್ಲಿ ಯಾವುದೇ ಸಮುದ್ರಾಹಾರವನ್ನು ಸೇವಿಸಿಲ್ಲ ಎಂದು. ಅವು ಹೆಚ್ಚಿನ ಪಾದರಸವನ್ನು ಹೊಂದಿದ್ದು ನಿಮ್ಮ ಮಗುವಿಗೆ ಹಾನಿಕಾರಕವಾಗಬಹುದು. ಬದಲಿಗೆ, ನೀವು ಸ್ಯಾಲಮನ್ ಮತ್ತು ಟ್ಯೂನದಂತಹ ಮೀನುಗಳನ್ನು ಆಯ್ಕೆ ಮಾಡಬಹುದು, ಇದರಲ್ಲಿ ಕಡಿಮೆ ಮಟ್ಟದ ಪಾದರಸ ಇರುವುದರಿಂದ ಇವು ಸುರಕ್ಷಿತವಾಗಿವೆ.

Comments are closed.