ಕರಾವಳಿ

ಕೋಳಿ ಮೊಟ್ಟೆಯನ್ನು ಹಸಿಯಾಗಿ ಕುಡಿಯಬಾರದೇ..ಕುಡಿಯಬೇಕೇ.ತಿಳಿಯಿರಿ ?

Pinterest LinkedIn Tumblr

ಕೋಳಿಮೊಟ್ಟೆಯಿಂದ ನಾವು ನಾನಾ ರೀತಿಯ ಅಡುಗೆಗಳನ್ನು ಮಾಡಿಕೊಳ್ಳುತ್ತೇವೆ. ಕೋಳಿಮೊಟ್ಟೆ ಟೊಮೇಟೋ…ಕೋಳಿಮೊಟ್ಟೆ ಆಮ್ಲೆಟ್..! ಈ ರೀತಿ ಅಲ್ಲದೆ ಮೊಟ್ಟೆಯನ್ನು ಬೇಯಿಸಿ ಸಹ ತಿನ್ನುತ್ತೇವೆ. ಆದರೆ ಇದ್ಯಾವುದೂ ಅಲ್ಲದೆ ಕೆಲವರು ಮೊಟ್ಟೆಯನ್ನು ಹಾಗೆಯೇ ಹೊಡೆದು ಹಸಿಯಾಗಿ ಕುಡಿಯುತ್ತಾರೆ. ಇದು ಕೆಲವರಿಗೆ ಇಷ್ಟವಾಗಲ್ಲ. ಆದರೂ ಅವರವರ ಇಷ್ಟವನ್ನು ನಾವು ಬೇಡ ಎನ್ನಲು ಆಗಲ್ಲ ಅಲ್ಲವೇ. ಆ ರೀತಿ ಮೊಟ್ಟೆಯನ್ನು ಹಸಿಯಾಗಿ ತಿಂದರೆ ಏನಾಗುವುದಿಲ್ಲವೇ..? ಅದರಿಂದ ತೊಂದರೆ ಏನು ಇರಲ್ಲವೇ..? ಏನಾದರೂ ಅನಾರೋಗ್ಯ ಸಮಸ್ಯೆ ಬಂದರೆ ಹೇಗೆ..? ಇಷ್ಟಕ್ಕೂ ಮೊಟ್ಟೆಯನ್ನು ಆ ರೀತಿ ಕುಡಿಯಬಹುದೆ..? ಎಂದರೆ…ಅದಕ್ಕೆ ಎಸ್.. ಕುಡಿಯಬಹುದು…ಎಂದು ಉತ್ತರ ನೀಡಬಹುದು..! ಹೌದು ನೀವು ಕೇಳಿದ್ದು ಕರೆಕ್ಟ್..! ಆದರೆ..! ಅದರಲ್ಲಿ ಪರಿಶೀಲಿಸಬೇಕಾದ ಮತ್ತೊಂದು ಸಂಗತಿ ಇದೆ..! ಅದೇನೆಂದರೆ..!

ಕೋಳಿಮೊಟ್ಟೆಯನ್ನು ಆ ರೀತಿ ಹೊಡೆದು ಹಸಿಯಾಗಿ ಕುಡಿಯಬಹುದು. ಇದರಿಂದ ಯಾವುದೇ ಸಮಸ್ಯೆ ಇರಲ್ಲ. ಅದು ಕುಡಿಯುವವರ ಇಷ್ಟ. ಆದರೆ….ಹಸಿಕೋಳಿ ಮೊಟ್ಟೆಯಲ್ಲಿ ಸಾಲ್ಮೋನೆಲ್ಲಾ ಎಂಬ ಒಂದು ವಿಧವಾದ ಬ್ಯಾಕ್ಟೀರಿಯಾ ಇರುತ್ತದೆ. ಇದು ಯಾವುದೇ ಮೊಟ್ಟೆಯಲ್ಲಾದರೂ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಮೊಟ್ಟೆಯನ್ನು ಬೇಯಿಸಿ, ಅಥವಾ ಪಲ್ಯ ಮಾಡಿಕೊಂಡು ತಿಂದರೆ ಓಕೆ. ಆ ಬ್ಯಾಕ್ಟೀರಿಯಾ ಸಾಯುತ್ತದೆ. ಅದರಿಂದ ನಮಗೆ ಯಾವುದೇ ತೊಂದರೆಯಾಗಲ್ಲ. ಆದರೆ ಮೊಟ್ಟೆಯನ್ನು ಹಾಗೆಯೇ ಹಸಿಯಾಗಿ ಕುಡಿದರೆ…ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ನಮ್ಮ ದೇಹದೊಳಕ್ಕೆ ಪ್ರವೇಶಿಸುತ್ತದೆ.

ಆ ಬ್ಯಾಕ್ಟೀರಿಯಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಆದ್ದರಿಂದ ನಮಗೇನೂ ಆಗಲ್ಲ. ಆದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ತೊಂದರೆಯಾಗುತ್ತದೆ. ಅಂತಹವರು ಹಸಿ ಮೊಟ್ಟೆಯನ್ನು ಕುಡಿಯಬಾರದು. ಸೋಂಕು, ಜ್ವರ ಬರುತ್ತದೆ. ಇನ್ನು ಮೊಟ್ಟೆಯನ್ನು ಹಸಿಯಾಗಿ ಕುಡಿಯುವವರು ಅಷ್ಟೇ ಅವನ್ನು ಆ ರೀತಿ ರೆಗ್ಯುಲರ್ ಆಗಿ ಕುಡಿಯಬಾರದಂತೆ. ಯಾಕೆಂದರೆ ಅವರಲ್ಲಿ ಬಯೋಟಿನ್ ಎಂಬ ಪೋಷಕ ಪದಾರ್ಥದ ಲೋಪ ಸಂಭವಿಸುತ್ತದೆ. ಇದರಿಂದ ಚರ್ಮದ ಮೇಲೆ ತುರಿಕೆ, ಕೂದಲು ಉದುರುವುದು, ನರಗಳ ದೌರ್ಬಲ್ಯದಂತಹ ಸಮಸ್ಯೆಗಳು ಉಂಟಾಗುತ್ತವೆ. ಈಗ ತಿಳಿಯಿತಲ್ಲವೇ. ಮೊಟ್ಟೆಯನ್ನು ಹಸಿಯಾಗಿ ಕುಡಿಬೇಕೆ, ಕುಡಿಯಬಾರದೆ ಅಂತ..!

Comments are closed.