ಕರಾವಳಿ

ಪಿಡಿಓ ವರ್ಗಾವಣೆ ಮಾಡಿದ್ರೆ ಉಘ್ರ ಹೋರಾಟ; ಗುಜ್ಜಾಡಿ ಗ್ರಾ.ಪಂ ಪಿಡಿ‌ಓ ಪರ ನಿಂತ ಡಿ.ಎಸ್.ಎಸ್ ಅಂಬೇಡ್ಕರ್ ವಾದ

Pinterest LinkedIn Tumblr

ಕುಂದಾಪುರ: ಸರ್ಕಾರದಿಂದ ಬರುವಂಥಹ ಎಲ್ಲಾ ಅನುದಾನಗಳನ್ನು ಗುಜ್ಜಾಡಿ ಗ್ರಾಮಪಂಚಾಯತ್ ಪಿಡಿ‌ಓ ದಲಿತ ಕುಟುಂಬಗಳಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದಾರೆ. ಪಿಡಿ‌ಓ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅಮಾನತುಗೊಳಿಸಬೇಕೆಂದು ಆಗ್ರಹಿಸಿರುವುದು ಖಂಡನೀಯ. ಅವರು ಹೊರಿಸಿರುವ ಆರೋಪದ ಬಗ್ಗೆ ತನಿಖೆ ಮಾಡದೆ ಏಕಾ‌ಏಕಿಯಾಗಿ ಪಿಡಿ‌ಓ ಕುಮಾರಿ ಅನಿತಾ ವಿರುದ್ದ ಕ್ರಮ ಕೈಗೊಂಡರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ದಲಿತ ಮುಖಂಡ ಮಂಜುನಾಥ ಗುಜ್ಜಾಡಿ ಹೇಳಿದರು.

ಅವರು ಗುಜ್ಜಾಡಿ ಪಿಡಿ‌ಓ ಅವರನ್ನು ಅಮಾನತುಗೊಳಿಸಬೇಕೆಂದು ಇತ್ತೀಚೆಗೆ ಪ್ರತಿಭಟನೆ ನಡೆದ ಹಿನ್ನೆಲೆ ಪಿ.ಡಿ.ಓ ಪರವಾಗಿ ನಿಂತು ಯಾವುದೇ ಕಾರಣಕ್ಕೂ ವರ್ಗಾವಣೆ ಸಲ್ಲದು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗುಜ್ಜಾಡಿ ಘಟಕದ ವತಿಯಿಂದ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದಲಿತರ ಶಿಕ್ಷಣಕ್ಕೆ ನೀಡಿರುವ ಶೇಕಡಾ ೨೫ರ ನಿಧಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಚರ್ಚಿಸಲು ದಲಿತರ ಸಮ್ಮುಖದಲ್ಲೇ ಸಭೆ ನಡೆಸಲಾಗಿತ್ತು. ಅಲ್ಲಿ ನಾವೆಲ್ಲರೂ ಸಲಹೆ ನೀಡಿದ್ದೆವು. ನಮ್ಮ ಸಲಹೆಯಂತೆ ದಲಿತ ಕುಟುಂಬಗಳಿಗೆ ಅತ್ಯುತ್ತಮ ಗುಣಮಟ್ಟದ ನೀರಿನ ಟ್ಯಾಂಕ್ ನೀಡಿದ್ದರು. ಇದಕ್ಕೆ ಸ್ಥಳೀಯ ದಲಿತರ್‍ಯಾರು ವಿರೋಧ ಮಾಡಿರಲಿಲ್ಲ. ಈ ವಿಚಾರದಲ್ಲಿ ಪಿಡಿ‌ಓ ಯಾವುದೇ ತಪ್ಪನ್ನು ಮಾಡಿಲ್ಲ. ದಲಿತ ಮುಖಂಡರು ಮಾಡಿರುವ ಆರೋಪಗಳನ್ನು ತನಿಖೆ ಮಾಡಿ ಬಳಿಕ ಕಾನೂನುಕ್ರಮ ಜರುಗಿಸಿ. ಏಕಾ‌ಏಕಿಯಾಗಿ ಪಿಡಿ‌ಓ ಕುಮಾರಿ ಅನಿತಾ ಅವರನ್ನು ಅಮಾನತುಗೊಳಿಸಿದರೆ ಸ್ಥಳೀಯ ದಲಿತರನ್ನು ಸೇರಿಸಿಕೊಂಡು ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Comments are closed.