ಕರಾವಳಿ

ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ನನ್ನು ನಮ್ಮ ದೇಹಕ್ಕೆ ಒದಗಿಸುವಲ್ಲಿ ಇದು ನಂ.1 ಆಹಾರ

Pinterest LinkedIn Tumblr

ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಅತ್ಯುತ್ತಮ ಗುಣಮಟ್ಟದ ಪ್ರೋಟೀನುಗಳನ್ನು ಒದಗಿಸುವಲ್ಲಿ ಮೊಟ್ಟೆ ಪ್ರಥಮ ಸ್ಥಾನ ಪಡೆದಿದೆ. ಪ್ರೋಟೀನ್ ಹೊರತಾಗಿ ಮೊಟ್ಟೆಯಲ್ಲಿ ಸುಮಾರು 18 ಅವಶ್ಯಕ ವಿಟಮಿನ್ನುಗಳು ಹಾಗೂ ಖನಿಜಗಳಿವೆ. ಅಲ್ಲದೇ ಖೋಲೈನ್, ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಮೊದಲಾದ ಅತಿ ಸೂಕ್ಷ್ಮ ಪೋಷಕಾಂಶಗಳೂ ಇದರಲ್ಲಿವೆ.

ಮೊಟ್ಟೆಯಲ್ಲಿರುವ ಹಳದಿ ಭಾಗದಲ್ಲಿ ಅಗತ್ಯಕ್ಕೂ ಕೊಂಚ ಹೆಚ್ಚೇ ಕೊಲೆಸ್ಟ್ರಾಲ್ ಇರುವ ಕಾರಣ ಇವನ್ನು ಹೆಚ್ಚಾಗಿ ಸೇವಿಸಬಾರದು. ಒಂದು ವೇಳೆ ಹಳದಿ ಭಾಗವನ್ನು ನಿವಾರಿಸಿ ಕೇವಲ ಬಿಳಿಭಾಗವನ್ನು ಸೇವಿಸಿದರೆ? ಹೌದು, ಇದರಿಂದ ಒಂದು ಮೊಟ್ಟೆಯ ಅರ್ಧದಷ್ಟು ಪ್ರೋಟೀನುಗಳನ್ನು ಪಡೆಯಬಹುದು ಹಾಗೂ ಇತರ ಪೋಷಕಾಂಶಗಳನ್ನು ಕಳೆದುಕೊಳ್ಳದೇ ರೈಬೋಫ್ಲೀವಿನ್ ಹಾಗೂ ಸೆಲೆನಿಯಂ ಮೊದಲಾದ ಪೋಷಕಾಂಶಗಳನ್ನೂ ಪಡೆದುಕೊಳ್ಳಬಹುದು. ಬಿಳಿಭಾಗದಲ್ಲಿ ಸುಮಾರು 54 ಮಿಲಿಗ್ರಾಂ ಪೊಟ್ಯಾಶಿಯಂ ಹಾಗೂ 55 ಮಿಲಿಗ್ರಾಂ ಸೋಡಿಯಂ ಇರುತ್ತದೆ.

ಒಂದು ಮೊಟ್ಟೆಯ ಬಿಳಿಭಾಗದಲ್ಲಿ ಕೇವಲ ಹದಿನೇಳು ಕ್ಯಾಲೋರಿಗಳಿವೆ ಹಾಗೂ ಪರ್ಯಾಪ್ತ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಆದ್ದರಿಂದ ಇದು ಎಲ್ಲಾ ವಯಸ್ಸಿನವರಿಗೂ, ಮಧುಮೇಹಿಗಳಿಗೂ, ಹೃದ್ರೋಗಿಗಳಿಗೂ ಯೋಗ್ಯವಾದ ಆಹಾರವಗಿದೆ. ಇವು ರುಚಿಕರ ಮಾತ್ರವಲ್ಲ, ಮೊಟ್ಟೆಯ ಎಲ್ಲಾ ಪೋಷಕಾಂಶಗಳೂ ದೊರಕುತ್ತವೆ. ಬನ್ನಿ, ಮೊಟ್ಟೆಯ ಬಿಳಿಭಾಗದ ಸೇವನೆಯ ಹತ್ತು ಪ್ರಮುಖ ಪ್ರಯೋಜನಗಳ ಬಗ್ಗೆ ಅರಿಯೋಣ.

೧.ಗರ್ಭಾವಸ್ಥೆಯನ್ನು ಆರೋಗ್ಯಕರವಾಗಿರಿಸಲು ನೆರವಾಗುತ್ತದೆ
ಒಂದು ಮೊಟ್ಟೆಯ ಬಿಳಿಭಾಗದಲ್ಲಿ ಸುಮಾರು ನಾಲ್ಕು ಗ್ರಾಂ ಪ್ರೋಟೀನ್ ಇದೆ. ಗರ್ಭಿಣಿಯರಿಗೆ ಹೆಚ್ಚಿನ ಪ್ರೋಟೀನ್ ಬೇಕಾಗಿರುತ್ತದೆ ಹಾಗೂ ಗರ್ಭಾವಸ್ಥೆಯಲ್ಲಿ ಬೆಳವಣಿಗೆಗೆ ಹೆಚ್ಚಿನ ಪೋಷಕಾಂಶಗಳು ಬಳಕೆಯಾಗುವ ಕಾರಣ ಗರ್ಭಿಣಿಯರು ಸುಸ್ತು ಅನುಭವಿಸುತ್ತಾರೆ. ಈ ಸಮಯದಲ್ಲಿ ಸೇವಿಸುವ ಹೆಚ್ಚಿನ ಪ್ರೋಟೀನ್ ಈ ಸುಸ್ತು ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೇ ಮಗುವಿನ ಬೆಳವಣಿಗೆಗೂ ನೆರವಾಗುತ್ತದೆ ಹಾಗೂ ಅವಧಿ ಪೂರ್ವ ಜನನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಹುಟ್ಟಿದ ಸಮಯದಲ್ಲಿ ಮಗುವಿನ ತೂಕವೂ ಉತ್ತಮವಾಗಿರಲು ನೆರವಾಗುತ್ತದೆ.

೨.ಹೊಟ್ಟೆ ತುಂಬಿರುವ ಭಾವನೆ
ಒಂದು ಮೊಟ್ಟೆಯನ್ನು ಬೇಯಿಸಿ ಇದರ ಬಿಳಿಭಾಗವನ್ನು ಮುಂಜಾನೆಯ ಉಪಾಹಾರಕ್ಕಾಗಿ ಸೇವಿಸಿದರೆ ಮಧ್ಯಾಹ್ನದ ಊಟದವರೆಗೂ ಬೇರೇನೂ ಬೇಕಾಗಿಲ್ಲ. ಇದರ ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸುತ್ತದೆ ಹಾಗೂ ಊಟಕ್ಕೂ ಮುನ್ನ ಅನಾರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದ ತಡೆಯುತ್ತದೆ.

೩.ಸ್ನಾಯುಗಳ ಬೆಳವಣಿಗೆ
ಹುರಿಗಟ್ಟಿದ ಸ್ನಾಯುಗಳು ಬೇಕೆಂದರೆ ಪ್ರೋಟೀನು ಬೇಕೇ ಬೇಕು. ಇದು ಮೊಟ್ಟೆಯ ಬಿಳಿ ಭಾಗದಲ್ಲಿ ಯಧೇಚ್ಛವಾಗಿರುವ ಕಾರಣ ಮೊಟ್ಟೆಯ ಬಿಳಿಭಾಗದ ಸೇವನೆ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ. ಒಂದು ವೇಳೆ ನೀವು ನಿತ್ಯವೂ ವ್ಯಾಯಾಮ ಮಾಡುವ ವ್ಯಕ್ತಿಯಾಗಿದ್ದರೆ ಪ್ರತಿ ಬಾರಿಯ ವ್ಯಾಯಾಮ ಪೂರ್ಣಗೊಂಡು ಕೊಂಚ ವಿಶ್ರಾಂತಿ ಪಡೆದ ಬಳಿಕ ಮೊಟ್ಟೆಯ ಬಿಳಿಭಾಗದ ಖಾದ್ಯವನ್ನು ಸೇವಿಸುವ ಮೂಲಕ ಸ್ನಾಯುಗಳ ಸಂಖ್ಯೆಯನ್ನು ಹೆಚ್ಚಿಸಬಹುದು.

೩.ನರಗಳು ಹಾಗೂ ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ
ಇದರಲ್ಲಿರುವ ಖೋಲೈನ್ ಎಂಬ ಅತಿಸೂಕ್ಷ್ಮ ಪೋಷಕಾಂಶ ಮೀಥೈಲೀಕರಣ (methylation) ಎಂಬ ಕ್ರಿಯೆಗೆ ನೆರವಾಗುತ್ತದೆ. ಈ ಕ್ರಿಯೆಯ ಮೂಲಕ ಜೀವಕೋಶಗಳ ಡಿ ಎನ್ ಎ. ರಚನೆ ಸುಲಭವಾಗುತ್ತದೆ. ಈ ಮೂಲಕ ಮೊಟ್ಟೆಯ ಬಿಳಿಭಾಗ ನರವ್ಯವಸ್ಥೆ ಹಾಗೂ ಮೆದುಳಿನ ಕ್ಷಮತೆ ಹೆಚ್ಚಿಸಲು ಹಾಗೂ ರಕ್ತದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

೪.ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ
ಮೊಟ್ಟೆಯ ಬಿಳಿಭಾಗದಲ್ಲಿರುವ ಕೊಲ್ಯಾಜೆನ್ ಎಂಬ ಪೋಷಕಾಂಶ ವಾಸ್ತವವಾಗಿ ಮೊಟ್ಟೆಯ ಬಿಳಿಭಾಗದ ಹೊರಕವಚದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ತ್ವಚೆಯ ಆರೋಗ್ಯ ಉತ್ತಮವಾಗಿರಬೇಕೆಂದರೆ ಮೊಟ್ಟೆಯ ಬಿಳಿಭಾಗವನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಅನಿವಾರ್ಯ. ಇದರಿಂದ ಚರ್ಮದಲ್ಲಿ ನೆರಿಗೆ ಮೂಡುವುದನ್ನು ತಡವಾಗಿಸುವುದು ಮಾತ್ರವಲ್ಲ, ತ್ವಚೆಗೆ ಅಗತ್ಯವಾದ ಪೋಷಕಾಂಶಗಳನ್ನೂ ಒದಗಿಸಲು ಸಾಧ್ಯವಾಗುತ್ತದೆ.

೫.ಸುಸ್ತು ಕಡಿಮೆ ಮಾಡುತ್ತದೆ
ಮೊಟ್ಟೆಯ ಬಿಳಿಭಾಗದಲ್ಲಿ ಹಲವಾರು ಅವಶ್ಯಕ ಖನಿಜಗಳಿದ್ದು ದೈಹಿಕ ಚಟುವಟಿಕೆಗಳಿಗೆ ನೆರವಾಗುತ್ತದೆ. ಒಂದು ವೇಳೆ ನಿಮಗೆ ಇಡಿಯ ದಿನ ಸುಸ್ತು ಆವರಿಸಿದ್ದರೆ ಅಥವಾ ಕೊಂಚ ದೂರ ನಡೆದರೂ ದಣಿವು ಎದುರಾದರೆ ಮೊಟ್ಟೆಯ ಬಿಳಿಭಾಗವನ್ನು ಯಾವುದೇ ಬಗೆಯ ಖಾದ್ಯದ ರೂಪದಲ್ಲಿ ಸೇವಿಸಲು ತೊಡಗಿ. ಬೇಯಿಸಿ, ಹುರಿದು ಅಥವಾ ಇತರ ಖಾದ್ಯಗಳೊಂದಿಗೆ ಬೆರೆಸಿ ಸೇವಿಸಿದರೆ ದಣಿವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

೬.ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ
ನಿತ್ಯವೂ ಮೊಟ್ಟೆಯ ಬಿಳಿಭಾಗವನ್ನು ಆಹಾರದಲ್ಲಿ ಅಳವಡಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಹಾಗೂ ಈ ಮೂಲಕ ಎದುರಾಗುವ ತೊಂದರೆಗಳ ಸಾಧ್ಯತೆಯನ್ನೂ ಕಡಿಮೆ ಮಾಡಬಹುದು. ಇದರಲ್ಲಿರುವ RVPSL ಎಂಬ ಪೆಪ್ಟೈಟ್ (ಒಂದು ಬಗೆಯ ಪ್ರೋಟೀನಿನ ಅಂಶ) ರಕ್ತದ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಆರೋಗ್ಯಕರ ಮಟ್ಟದಲ್ಲಿರಲು ನೆರವಾಗುತ್ತದೆ.

Comments are closed.