ಕರಾವಳಿ

ತೆಂಗಿನ ಎಣ್ಣೆ ದೇಹದ ತೂಕ ಇಳಿಸಿಕೊಳ್ಳಲು ಸಹಕಾರಿ, ಹೇಗೆ.. ಗೋತ್ತೇ ?

Pinterest LinkedIn Tumblr

ಅಯ್ಯೋ ಇದೇನಪಾ ಇವರು ಉಲ್ಟಾ ಹೇಳುತ್ತಿದ್ದಾರೆ ಎಂದುಕೊಳ್ಳಬಹುದು ನೀವು. ಎಣ್ಣೆ ಸೇವಿಸಿದರೆ ದಪ್ಪ ಆಗುತ್ತೇವೆ ಎಂದು ಕೇಳಿದ್ದೀವಿ, ಇದೇನಿದು ಸಣ್ಣ ಆಗಬಹುದು ಎಂದು ಹೇಳುತ್ತಿದ್ದೀರ ಎಂದು ನೀವು ನಮಗೆ ಕೇಳಬಹುದು. ಆದರೆ ನಿಜಕ್ಕೂ ತೆಂಗಿನ ಎಣ್ಣೆಯಲ್ಲಿನ ಕೊಬ್ಬಿನಂಶ ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲಿಕ್ಕೆ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ ನುರಿತ ಆಹಾರತಜ್ಞ, “ದಿ ಮಿರಾಕಲ್ ಆ ಕೊಕೊನಟ್ ಆಯಿಲ್” ಪುಸ್ತಕದ ಲೇಖಕ, ಕೊಕೊನಟ್ ರಿಸರ್ಚ್ ಸೆಂಟರ್ ಅಧ್ಯಕ್ಷರಾದ ಬ್ರೂಸ್ ಫಿಫ್ ಅವರು.

ದೇಹದಲ್ಲಿನ ಕೊಲೆಸ್ಟ್ರಾಲ್ ಅಲ್ಲಿ ಎರಡು ವಿಧಗಳಿರುತ್ತವೆ – ಒಂದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್. ಒಂದು ವೇಳೆ ಒಟ್ಟಾರೆ ಕೊಲೆಸ್ಟ್ರಾಲ್ ಅಲ್ಲಿ ಹೈ-ಡೆನ್ಸಿಟಿ ಕೊಲೆಸ್ಟ್ರಾಲ್ (ಅಂದರೆ ಕೆಟ್ಟ ಕೊಲೆಸ್ಟ್ರಾಲ್) ಪ್ರಮಾಣ ಜಾಸ್ತಿ ಇದ್ದರೆ, ಹೃದಯ ರೋಗ ಉಂಟಾಗುವ ಸಾಧ್ಯತೆಗಳು ಕೂಡ ಹೆಚ್ಚು. ಹೀಗಾಗಿ ಪರಿಷ್ಕ್ರಿತ ಕಾರ್ಬೋಹೈಡ್ರೇಟ್ಸ್ ಬದಲಿಗೆ ಅಧಿಕ ಕೊಬ್ಬಿನಂಶವಿರುವ ಆರೋಗ್ಯಕರ ಆಹಾರಗಳು – ಉದಾಹರಣೆಗೆ ತೆಂಗಿನ ಎಣ್ಣೆ – ಬಳಸಿ ಈ ಪ್ರಮಾಣವನ್ನ ಕಡಿಮೆ ಮಾಡಿಕೊಳ್ಳಬಹುದು.

ನೀವು ತೂಕವನ್ನ ಇಳಿಸಿಕೊಳ್ಳಲು ತೆಂಗಿನ ಎಣ್ಣೆ ಹೇಗೆ ಸಹಾಯ ಮಾಡುತ್ತದೆ ಎಂದು ನೋಡೋಣ ಬನ್ನಿ :

೧. ಹಸಿವು-ಕೋಪದ ನಿರ್ವಹಣೆ
ಇತರೆ ಕೊಬ್ಬುಗಳಿಗೆ ಹೋಲಿಸಿದರೆ ತೆಂಗಿನ ಎಣ್ಣೆಯು ನಿಮ್ಮ ಹಸಿವನ್ನು ಬಹಳಷ್ಟು ಹೆಚ್ಚಿಗೆ ಸಮಯದವರೆಗೆ ನೀಗಿಸುತ್ತದೆ. ಕೇವಲ ನಿಮ್ಮ ತಿಂಡಿಗೆ ಸ್ವಲ್ಪ ತೆಂಗಿನ ಎಣ್ಣೆ ಬೆರೆಸುವುದರಿಂದ, ಒಂದು ಸಣ್ಣ ಚಮಚದಷ್ಟು ತೆಂಗಿನೆಣ್ಣೆಯನ್ನ ಕಾಫಿ ಅಲ್ಲಿ ಬೆರೆಸುವುದರಿಂದ, ನೀವು ಬಹಳ ಸಮಯದವರೆಗೆ ನಿಮ್ಮ ಹಸಿವನ್ನು ತಡೆದು ನಿಲ್ಲಿಸುತ್ತದೆ. ಹೀಗೆ ಮಾಡಿದರೆ ನಿಮಗೆ ತಿಂಡಿ ಮತ್ತು ಊಟದ ನಡುವೆ ಇನ್ನೇನಾದರೂ ತಿನ್ನಬೇಕು ಎನಿಸುವುದಿಲ್ಲ ಮತ್ತು ನಿಮಗೆ ಹೆಚ್ಚು ಹಸಿವು ಆಗದ ಕಾರಣ, ಊಟದ ಸಮಯದಲ್ಲಿ ಸಿಕ್ಕಾಪಟ್ಟೆ ತಿನ್ನುವುದಿಲ್ಲ.

೨. ಅಡುಗೆ ಸಾಮಗ್ರಿಯಾಗಿ
ನೀವು ತರಕಾರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ ಉಪಯೋಗಿಸುತ್ತಿದ್ದರೆ, ಅವುಗಳಿಗೆ ಪರ್ಯಾಯವಾಗಿ ನೀವು ತೆಂಗಿನ ಎಣ್ಣೆಯನ್ನ ನಿಮ್ಮ ಅಡುಗೆಯಲ್ಲಿ ಬಳಸಬಹುದು. ಇದು ಬೇಡ ಎಂದರೆ ನೀವು ಪ್ರತಿದಿನ ಹಾಗೆಯೇ ಒಂದೆರೆಡು ಚಮಚಗಳಷ್ಟು ಕೊಬ್ಬರಿ ಎಣ್ಣೆಯನ್ನ ಸೇವಿಸಬಹುದು. ನೀವು ಹೆಚ್ಚುವರಿ ಕ್ಯಾಲೋರಿ ಸೇವಿಸದೇ ನಿಮ್ಮ ತೂಕವನ್ನ ಎಲ್ಲಿಯವರೆಗೆ ಇಳಿಸುತ್ತಿರುತ್ತೀರೋ, ಅಲ್ಲಿಯವರೆಗೆ ನೀವು ಸೇವಿಸುವ ತೆಂಗಿನೆಣ್ಣೆಯ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬಹುದು.

೩. ಹತಾಶೆಯ ಡಯಟ್ ಬೇಡ
ನೀವು ನಿಮ್ಮ ಕಡಿಮೆ ಕ್ಯಾಲೋರಿಯ ಡಯಟ್ ಅನ್ನು ಪರಿಣಾಮಕಾರಿಯಾಗಿ ಛಲಬಿಡದೆ ಮುಂದುವರೆಸಬೇಕು ಎಂದರೆ, ನಿಮ್ಮ ದೇಹವು ಈಗಾಗಲೇ ತನ್ನೊಳಗೆ ಬೇಕಿರುವಷ್ಟು ಕೊಬ್ಬು ಇದೆ ಎಂದು ಸುಮ್ಮನೆ ಅಂದುಕೊಳ್ಳುವಂತೆ ಮಾಡುವುದು. ನಮ್ಮ ದೇಹದಿಂದ ಕೊಬ್ಬನ್ನು ದೂರವಿಟ್ಟು, ತೂಕ ಇಳಿಸಿಕೊಳ್ಳಬೇಕು ಎಂದರೆ ನಮ್ಮ ದೇಹದಲ್ಲಿ ಈಗಾಗಲೇ ಉಪಯುಕ್ತ ಕೊಬ್ಬಿನಂಶ ಇರಬೇಕು. ಹೀಗಾಗಿ ಉಪಯುಕ್ತ ಕೊಬ್ಬನ್ನು ನಾವು ಸೇವಿಸಬೇಕು. ಇದು ನಮಗೆ ತೆಂಗಿನೆಣ್ಣೆ ಅಲ್ಲಿ ಸಿಗುತ್ತದೆ.

೪. ಸಲಾಡ್ ಅಲ್ಲಿ ತೆಂಗಿನೆಣ್ಣೆ
ತರಕಾರಿ ಅಥವಾ ಹಣ್ಣಿನ ಸಲಾಡ್ ಮೇಲೆ ಕೆಲವು ಹನಿಗಳಷ್ಟು ತೆಂಗಿನೆಣ್ಣೆ ಹಾಕಿಕೊಂಡು ಸೇವಿಸಿದರೆ, ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಮತ್ತು ಪೋಷಕಾಂಶಗಳ ಹೀರುವಿಕೆ ಮತ್ತಷ್ಟು ಹೆಚ್ಚುತ್ತದೆ.

೫. ಒಳ್ಳೆಯ ಅನ್ನ
ನಾವು ಅನ್ನವನ್ನ ತಯಾರಿಸುವಾಗ, ಅಕ್ಕಿಯನ್ನ ಬೇಯಿಸುವಾಗ ಒಂದು ಲೋಟ ಅಕ್ಕಿಗೆ ಒಂದು ಚಮಚ ತೆಂಗಿನೆಣ್ಣೆಯಂತೆ ನೀರಿಗೆ ಬೆರೆಸಿದರೆ, ನೀವು ತೆಂಗಿನೆಣ್ಣೆ ಬೆರೆಸದಂತೆ ತಯಾರಿಸಿದ ಅನ್ನವನ್ನ ತಿಂದಾಗ ನಿಮ್ಮ ದೇಹವು ಎಷ್ಟು ಕ್ಯಾಲೋರಿಗಳನ್ನ ಸೇರಿಸಿಕೊಳ್ಳುತ್ತಿತ್ತೋ, ಅದರ ಅರ್ಧದಷ್ಟು ಕ್ಯಾಲೋರಿಗಳು ಮಾತ್ರ ತೆಂಗಿನೆಣ್ಣೆ ಬೆರೆಸಿದಾಗ ನಿಮ್ಮ ದೇಹವು ಸೇರಿಸಿಕೊಳ್ಳುವುದು.

Comments are closed.