ಕರಾವಳಿ

ಅಕ್ಟೋಬರ್.19: ಕಲ್ಕೂರ ಪ್ರತಿಷ್ಠಾನದಿಂದ‌ ಅಕ್ಷರಾಭ್ಯಾಸ- ವಿದ್ಯಾರಂಭ

Pinterest LinkedIn Tumblr

ಮಂಗಳೂರು : ಅಕ್ಷರಾಭ್ಯಾಸ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ವಾದ್ಯ ಸಂಗೀತ (ಕೊಳಲು, ವೀಣೆ, ಪಿಟೀಲು, ಚೆಂಡೆ, ಮೃದಂಗ, ತಬಲಾ ಇತ್ಯಾದಿ) ವಿದ್ಯೆಯನ್ನು‌ಆರಂಭಿಸುವ ಮಕ್ಕಳಿಗಾಗಿ, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಆರ್ಶೀವಾದದೊಂದಿಗೆ, ಕಲ್ಕೂರ ಪ್ರತಿಷ್ಠಾನವು ಅ. 19ನೇ ಶುಕ್ರವಾರ ವಿಜಯದಶಮಿಯಂದು‌ಅಕ್ಷರಾಭ್ಯಾಸ- ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಂಡಿದೆ.

(ಕಡತ ಚಿತ್ರ)

ಬೆಳಿಗ್ಗೆ 8 ರಿಂದ ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜುಪ್ರಾಸಾದದಲ್ಲಿನ ವಾದಿರಾಜ ಮಂಟಪದಲ್ಲಿ ಕಾರ್ಯಕ್ರಮ ಜರಗಲಿದ್ದು ಭಾಗವಹಿಸುವ ಮಕ್ಕಳಿಗಾಗಿ ಒಂದು ತುದಿ ಬಾಳೆ ಎಲೆ, ಒಂದು ಸೇರು ಬೆಳ್ತಿಗೆ ಅಕ್ಕಿ, 2 ತೆಂಗಿನಕಾಗಳನ್ನು ತರಬೇಕಾಗುತ್ತದೆ. ವೇದಮೂರ್ತಿಗಣಪತಿ‌ಆಚಾರ್ಯ ಮತ್ತುಕದ್ರಿಪ್ರಭಾಕರ‌ಅಡಿಗರ ಮಾರ್ಗದರ್ಶನದಲ್ಲಿ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಗುವುದು.ಎಂದು ಪ್ರತಿಷ್ಠಾನದ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ (9845083736) ತಿಳಿಸಿದ್ದಾರೆ.

ಈ ಸಂದರ್ಭ ಶ್ರೀಮತಿ ಸುಮಿತ್ರಾ‌ಆಚಾರ್ ಮತ್ತು ಬಳಗದವರಿಂದ ಭಜನೆಜರಗಲಿದೆ. ಹೆಚ್ಚಿನ ವಿವರಗಳಿಗೆ ದಯಾನಂದಕಟೀಲು ಶಾರದಾ ವಿದ್ಯಾಲಯ (9448545578) ಸುಧಾಕರರಾವ್ ಪೇಜಾವರ, ಕದ್ರಿ ನವನೀತ ಶೆಟ್ಟಿ, ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ (9448163607)ಇವರನ್ನು ಸಂಪರ್ಕಿಸಬಹುದು.

Comments are closed.