ಕರಾವಳಿ

ವಿವೇಕ್ ಪ್ರಕರಣದಲ್ಲಿ ಪೊಲೀಸರು ‘ರಿಸ್ಕ್’ ತೆಗೆದುಕೊಂಡು ಕೆಲಸ ಮಾಡಲಿ: ಶೋಭಾ ಕರಂದ್ಲಾಜೆ

Pinterest LinkedIn Tumblr

ಕುಂದಾಪುರ: ಉಘ್ರ ಸಂಘಟನೆಯಿಂದ ಬೆದರಿಕೆಯಿದೆಯೆಂದು ಡೆತ್‌ನೋಟ್ ಬರೆದಿಟ್ಟು ಅ.15 ಸಂಜೆ ಆತ್ಮಹತ್ಯೆ ಮಾಡಿಕೊಂಡ ಕುಂದಾಪುರ ಕೋಟೇಶ್ವರ ನಿವಾಸಿ ವಿವೇಕ್ ಮೊಗವೀರ ಮನೆಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶೋಭಾ, ಡೆತ್ ನೋಟ್ ಬರೆದಿಟ್ಟು ವಿವೇಕ್ ಮೊಗವೀರ ಆತ್ಮಹತ್ಯೆ ಮಾಡಿಕೊಂಡು ನಾಲ್ಕು ದಿನ ಕಳೆದಿದೆ. ಈ ಡೆತ್ ನೋಟಿನಲ್ಲಿ ಉಘ್ರ ಸಂಘಟನೆ ಚಟುವಟಿಕೆ ಬಗ್ಗೆ ಉಲ್ಲೇಕಿಸಿದ್ದು ಕಳೆದ ವರ್ಷ ಆತ ಅದೇ ಸಿ‌ಐ‌ಎಂಎಸ್ ಸಂಘಟನೆ ಮಾಡುತ್ತಿರುವ ದೇಶದ್ರೋಹದ ಬಗ್ಗೆ ಪೋಸ್ಟ್ ಮಾಡಿದ್ದ. ಈ ಪತ್ರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಕೇಸ್ ಮುಚ್ಚಿ ಹಾಕಬಾರದು. ಗಂಗೊಳ್ಳಿ ಮತ್ತು ಕುಂದಾಪುರ ಭಾಗದಲ್ಲಿ ಇಂತಹ ಕೋಮು ಭಾವನೆ ದಕ್ಕೆ ಪಡಿಸುವ ವಿಚಾರಗಳು ಹಾಗೂ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಗಲಭೆ ನಡೆಸಿದ್ದಾರೆ. ಈ ಹಿನ್ನಲೆ ಸರಕಾರ ಕರಾವಳಿ ಭಾಗದಲ್ಲಿ ನಡೆಯುವ ಇಂತಹ ಸಮಾಜದ್ರೋಹಿ ಸಂಘಟನೆ ವಿರುದ್ಧ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆಯಿದ್ದು ಉಡುಪಿ ಎಸ್ಪಿ ಬಳಿ ಈ ಬಗ್ಗೆ ಮಾತನಾಡುವೆ ಎಂದರು.

ಪೊಲೀಸರು ಕೆಲಸ ಮಾಡುತ್ತಿಲ್ಲ?!
ಘಟನೆ ನಡೆದ ದಿನ ಕುಂದಾಪುರ ಎಸೈ ಸ್ಥಳಕ್ಕೆ ಬಂದ ವೇಳೆಯೂ ವಿವೇಕ್ ಬರೆದ ಡೆತ್ ನೋಟ್ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಬಳಿಕ ಎಸ್ಪಿ ಸೂಚನೆ ಮೇರೆಗೆ ಹೆಚ್ಚುವರಿ ಎಸ್ಪಿ ಸ್ಥಳಕ್ಕೆ ಬಂದ ಬಳಿಕ ಪ್ರಕರಣ ಗಂಭೀರತೆ ತಾಳಿದೆ ಎಂದು ಬಿಜೆಪಿ ಕುಂದಾಪುರದ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಸಂಸದೆಗೆ ವಿವರಿಸಿದರು.

ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿ….
ಪೊಲೀಸರಿಗೆ ಸಹಜ ಸ್ಥಿತಿಯಲ್ಲಿ ಇಲಾಖೆ ಹಾಗೂ ಸರಕಾರ ನಡೆಯಬೇಕೆಂಬ ನಿಟ್ಟಿನಲ್ಲಿ ಕೆಲ ಪ್ರಕರಣದಲ್ಲಿ ಮುತುವರ್ಜಿ ವಹಿಸಲ್ಲ. ಆದರೆ ವಿವೇಕ್ ಪ್ರಕರಣದ ಬಗ್ಗೆ ರಿಸ್ಕ್ ತೆಗೆದುಕೊಂಡು ಈ ಬಗ್ಗೆ ತನಿಖೆ ನಡೆಸಬೇಕು. ಹೊಸ ಉಘ್ರ ಸಂಘಟನೆ ಕಾರ್ಯಾಚರಣೆ ಕರಾವಳಿ ಭಾಗದಲ್ಲಿ ಮಾಡುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಪೌರುಷ ಹಾಗೂ ಕಳಕಳಿ ಅವರಲ್ಲಿಲ್ಲವಾದರೆ ನಿಸ್ಪಕ್ಷಪಾತ ತನಿಖೆ ಬಗ್ಗೆ ಉನ್ನತಾಧಿಕಾರಿಗಳ ಗಮನಕ್ಕೆ ತರುವೆ ಎಂದರು. ಬಡ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆಯೂ ರಾಜ್ಯ ಸರಕಾರದ ಗ್ರಹ ಇಲಾಖೆಗೆ ಮಾತನಾಡುವೆ ಎಂದರು.

ವಿವೇಕ್ ಹೆತ್ತಬ್ಬೆ ರೋಧನೆ….
ಮನೆ ಭೇಟಿ ವೇಳೆ ವಿವೇಕ್ ತಾಯಿ ರೋಧನ ಮುಗಿಲು ಮುಟ್ಟಿತ್ತು. ನನ್ನ ಮಗ ಒಳ್ಳೆಯವಾನಿದ್ದ..ನಮ್ಮ ಬಳಿ ಏನು ಹೇಳಿಲ್ಲ…ಖರ್ಚಿಗೆ ನಾನೂ ಕೂಡ ಕೊಡುತ್ತಿದ್ದೆ. ಆತ್ಮಹತ್ಯೆ ದಿನದ ತನಕ ಏನೂ ಹೇಳಿಲ್ಲ. ನಮಗೆ ನೋವು ತಡೆಯಲು ಆಗುತ್ತಿಲ್ಲ ಎಂದು ಬಿಕ್ಕಿಬಿಕ್ಕಿ ಅತ್ತರು. ‘ದಯಮಾಡಿ ಅಳಬೇಡಿ’ ಎಂದು ಆ ತಾಯಿ ಬಳಿ ಕುಳಿತು ಶೋಭಾ ಕರಂದ್ಲಾಜೆ ಸಾಂತ್ವಾನ ಹೇಳಿದರು.

ಈ ಸಂದರ್ಭ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ರಾಜ್ಯ ಯುವಮೋರ್ಚಾದ ಮಹೇಶ್ ಕುಮಾರ್ ಪೂಜಾರಿ, ಮುಖಂಡರಾದ ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ, ಹಿಂದೂ ಸಂಘಟನೆಯ ಅಶೋಕ್ ಕಾಗೇರಿ ಮೊದಲಾದವರಿದ್ದರು.

(ವರದಿ-ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ: ಆತ್ಮಹತ್ಯೆಗೂ ಮೊದಲು ಯುವಕ ಬರೆದ ಡೆತ್‌ನೋಟ್‌ನಲ್ಲಿದೆ ಬೆಚ್ಚಿಬೀಳಿಸುವ ಸಂಗತಿಗಳು

ವಿವೇಕ್ ನಿಗೂಢ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆಯಾಗಲಿ, ಪರಿಹಾರ ಸಿಗಲಿ: ಕೋಟ ಆಗ್ರಹ

Comments are closed.