ಕರಾವಳಿ

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ : ರಥೋತ್ಸವದೊಂದಿಗೆ ನವರಾತ್ರಿ ಉತ್ಸವ ಸಂಪನ್ನ

Pinterest LinkedIn Tumblr

ಮಂಗಳೂರು : ನವರಾತ್ರಿ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅ.10ರಿಂದ ನವರಾತ್ರಿ ಉತ್ಸವವನ್ನು ವಿವಿಧ ಕಾರ್ಯಕ್ರಮಗಳೋಂದಿಗೆ ಆಚರಿಸಲಾಗಿದ್ದು, ವಿಜಯದಶಮಿ ದಿನವಾದ ಶುಕ್ರವಾರ ರಾತ್ರಿ ಮಂಗಳಾದೇವಿಯ ರಥೋತ್ಸವದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡಿತ್ತು.

ಇದಕ್ಕೂ ಮುನ್ನ ಮಾದ್ಯಹ್ನ ಅಪಾರ ಜನಸ್ತೋಮದ ಸಮಕ್ಷ ವಿಜಯ ದಶಮಿ ಪ್ರಯುಕ್ತ ಮಂಗಳಾದೇವಿಯಲ್ಲಿ ಹಗಲು ರಥೋತ್ಸವ ನಡೆಯಿತು. ಬಳಿಕ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ನಡೆದ ಮಂಗಳಾದೇವಿ ನವಾರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಜೆ.ಆರ್. ಲೋಬೊ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದರು.

ಶನಿವಾರ ದೇವರ ಅವಭೃತ ಮಂಗಳ ಸ್ನಾನ ನಡೆಯಿತು ಇಂದು ಮಂಗಳಾದೆವಿಯಲ್ಲಿ ಸತ್ಯನಾರಾಯಣ ಪೂಜೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಶುಕ್ರವಾರ ವಿಜಯದಶಮಿ ದಿನಂದು ಮಂಗಳಾದೇವಿ ದೇವಾಲಯದಲ್ಲಿ ಮಕ್ಕಳ ಅಕ್ಷರಾಭ್ಯಾಸ ಪೂಜೆಯು ಬೆಳಗ್ಗೆ 9 ಗಂಟೆಯಿಂದ ಶುರುವಾಗಿ ಮಧ್ಯಾಹ್ನ 12 ಗಂಟೆವೆರೆಗೂ ನಡೆಯಿತು. ಈ ಸಂದರ್ಭ ಸುಮಾರು 300 ಪುಟಾಣಿ ಮಕ್ಕಳು ಅಕ್ಷರಾಭ್ಯಾಸ ಪೂಜೆಯಲ್ಲಿ ಭಾಗವಹಿಸಿ, ತಮ್ಮ ವಿದ್ಯಾಭ್ಯಾಸವನ್ನು ಆರಂಭಿಸಿದರು. 12 ಪುರೋಹಿತರು ಈ ಅಕ್ಷರಾಭ್ಯಾಸದ ಪೌರೋಹಿತ್ಯ ವಹಿಸಿದ್ದರು.

ನವರಾತ್ರಿಯ ಕಡೆಯ ದಿನ ವಿಜಯದಶಮಿ ಆಚರಿಸಲಾಗುತ್ತದೆ. ಶುಭಕಾರ್ಯಗಳಿಗೆ ಈ ದಿನ ಸೂಕ್ತವೆಂಬ ನಂಬಿಕೆಯಿದೆ. ಅದರಲ್ಲೂ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಪ್ರಶಸ್ತವಾದ ದಿನ ಎಂಬ ಪ್ರತೀತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಂಗಳಾದೇವಿ ದೇವಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.

ಅಕ್ಷರಾಭ್ಯಾಸದ ಹಿನ್ನೆಲೆ:

ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಪ್ರಾರ್ಥನೆಯೊಂದಿಗೆ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಮುಂದೆ ಮಕ್ಕಳು ಜ್ಞಾನವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಸರಸ್ವತಿ ಪೂಜೆ ಮಾಡಿ, ಮಕ್ಕಳ ಬೆರಳ ತುದಿಯನ್ನು ಅವರ ತಾಯಿ- ತಂದೆ ಹಿಡಿದು ಅಕ್ಕಿಯ ಮೇಲೆ ಓಂ ನಾಮ, ಶ್ರೀನಾಮ ಹಾಗೂ ವರ್ಣಮಾಲೆಯ ಮೊದಲ ಅಕ್ಷರವನ್ನು ಬರೆಸಲಾಗುತ್ತದೆ

Comments are closed.