ಕರಾವಳಿ

ನೆಹರೂ ರಸ್ತೆ ಕಾಂಕ್ರೀಟಿಕರಣ ಮತ್ತು ತಡೆಗೋಡೆಗೆ ಶಾಸಕ ಕಾಮತ್ ರಿಂದ ಶಿಲಾನ್ಯಾಸ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 59 ನೇ ಜಪ್ಪು ವಾರ್ಡಿನ ನೆಹರೂ ರಸ್ತೆಯ ಕಾಂಕ್ರೀಟಿಕರಣ ಹಾಗೂ ದುರ್ಗಾ ಸ್ಟೋರಿನ ಬಳಿ ತಡೆಗೋಡೆ ನಿರ್ಮಾಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇಲ್ಲಿ ಚರಂಡಿಗೆ ತಡೆಗೋಡೆ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಜನರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಲು ತಡೆಗೋಡೆ ನಿರ್ಮಾಣ ಅಗತ್ಯವಾಗಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಲ್ಲಿನ ಚರಂಡಿಗೆ ತ್ಯಾಜ್ಯದ ನೀರು ಸೇರುತ್ತಿರುವುದನ್ನು ಸ್ಥಳೀಯ ಮಹಿಳೆಯರು ಶಾಸಕರ ಗಮನಕ್ಕೆ ತಂದರು. ಆ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಭರತ ಕುಮಾರ್ ಎಸ್, ಗಣೇಶ್, ಸುಧೀರ್, ಸ್ವಸ್ತಿಕ್, ಮಿನಿ ಮಂಜುನಾಥ, ಗಣೇಶ್ ಎಂಪಿ, ಗಣೇಶ್ ಶೇಟ್, ಚರಿತ್ ಪೂಜಾರಿ ಹಾಗೂ ಜೆಪ್ಪು ಮತ್ತು ಪಳ್ನೀರ್ ವಾರ್ಡಿನ ಪ್ರಮುಖರು ಉಪಸ್ಥಿತರಿದ್ದರು

Comments are closed.