ಕಿವಿ ಪ್ರಮುಖವಾಗಿ ಆಲಿಸುವ ಮತ್ತು ಸಮತೋಲನ ಸಾಧಿಸುವ ಎರಡು ಕಾರ್ಯಗಳನ್ನು ಮಾಡುತ್ತದೆ. ಕಿವಿಯ ಅಥವಾ ಆಲಿಸುವ ಮಹತ್ವ ಕಿವಿ ಕೇಳದವರನ್ನು ನೋಡಿದಾಗ ಅರಿವಿಗೆ ಬರುತ್ತದೆ. ಕಿವಿ ಕೇಳದಿರುವುದರಿಂದ ಸಮರ್ಪಕ ಸಂವಹನ ಸಾಧ್ಯವಾಗುವುದಿಲ್ಲ. ಆದ್ದರಿಂದ ಕಿವಿಯ ರಕ್ಷಣೆಯಲ್ಲಿ ಖಾಳಜಿ ವಹಿಸುವುದು ಅಗತ್ಯ.
ಕಿವಿಯಲ್ಲಿ ವೆಸ್ಟಿಬುಲರ್ ಮತ್ತು ಕೋಚ್‍ಲಿಯರ್ ನರಗಳಿದ್ದು, ಎರಡು ನರಗಳು ಕೂಡಿ ವೆಸ್ಟಿಬುಲಾಕೊಕೊಲೆರ್ ಆಗಿ ಮೆದುಳಿನ ಆಲಿಕಾ ಕೇಂದ್ರಕ್ಕೆ (ಆಡಿಟರಿ ಕೋರ್ಟೆಕ್ಸ್) ಸಂಪರ್ಕ ಕಲ್ಪಿಸುತ್ತವೆ. ಆದ್ದರಿಂದ ಕಿವಿಗೆ ತೊಂದರೆಯಾದರೆ ಸಾಮಾನ್ಯವಾಗಿ ವರ್ಟಾಂಗ್ಯೋ ಎಂದು ಕರೆಯಲ್ಪಡುವ ಅಂಶದಿಂದ ಶ್ರವಣ ಸಮಸ್ಯೆ ಮತ್ತು ಅಸಮತೋಲನ ಕಾಡಬಹುದು.
ಕಿವಿಯನ್ನು ಬಾಹ್ಯ, ಮಧ್ಯಮ ಮತ್ತು ಒಳ ಕಿವಿಯೆಂದು 3 ವಿಧಗಳಾಗಿ ವಿಂಗಡಿಸಲಾಗಿದೆ. ಬಾಹ್ಯ ಕಿವಿಯು ಪಿನ್ನಾ, ಬಾಹ್ಯ ಶ್ರವಣೇಂದ್ರಿಯ ಕಾಲುವೆ ಮತ್ತು ಟಿಂಪಾನಿಕ್ ಮೇಂಬ್ರೇನ್ (ಕಿವಿ ಡ್ರಮ್) ಹೊಂದಿರುತ್ತದೆ. ಮಧ್ಯಮ ಕಿವಿಯು ಟಿಂಪಾನಿಕ್ ಮೇಂಬ್ರೇನ್‍ನ ಹಿಂದೆ ಗಾಳಿ ತುಂಬಿದ ಜಾಗ ಹೊಂದಿದ್ದು, 3 ಸಣ್ಣ ಮೂಳೆಗಳನ್ನು ಹೊಂದಿದೆ. ಒಳ ಕಿವಿಯು ಕೋಕ್ಲೀಯಾ ಎಂದು ಕರೆಯಲ್ಪಡುವ ಬಸವನ ಆಕಾರದ ರಚನೆ ಹೊಂದಿದ್ದು, ಶಬ್ಧವನ್ನು ಗ್ರಹಿಸಲುವಲ್ಲಿ ಪ್ರಮುಖವಾಗಿರುವ ಕೂದಲು ಜೀವಕೋಶಗಳೆಂದು ಕರೆಯಲ್ಪಡುವ ಸೂಕ್ಷ್ಮ ಜೀವಕೋಶಗಳನ್ನು ಹೊಂದಿದೆ. ಒಳಕಿವಿಯಲ್ಲಿರುವ ಚಕ್ರವ್ಯೂಹದ ರಚನೆಯಂತಿರುವ ಮತ್ತೊಂದ ಭಾಗ ದೇಹದ ಸಮತೋಲನ ಕಾಪಾಡುತ್ತದೆ. ಈ ರಚನೆ ಮತ್ತು ಕೋಕ್ಲಿಯಾ ವೆಸ್ಟಿಬುಲಾಕೊಕೊಲೆರ್ ಮೂಲಕ ಮೆದುಳಿನ ಸಂಪರ್ಕ ಸಾಧಿಸುತ್ತವೆ.
ಮೆದುಳಿನ ಸಂಪರ್ಕ ಸಾಧಿಸುವಾಗ ಧ್ವನಿ ಅಲೆಯ ಹಾದಿ ಗಮನಸಿದರೆ ಮೊದಲು ಬಾಹ್ಯ ಶ್ರವಣೇಂದ್ರೀಯ ಕಾಲುವೆ, ನಂತರ ಟಿಂಪಾನಿಕ್ ಮೇಂಬ್ರೇನ್ (ಕಿವಿ ಡ್ರಮ್), ಮಧ್ಯ ಕಿವಿ, ಒಸ್ಕಿಕಲ್ಸ್, ಕೊಕ್ಲೀಯಾ ವೆಸ್ಟಿಬುಲಾಕೊಕೊಲೆರ್ ನರದಿಂದ ಕೊನೆಗೆ ಮೆದುಳಿನ ಆಲಿಕಾ ಕೇಂದ್ರವನ್ನು ತಲುಪುತ್ತದೆ.
ಕಿವಿ ಕೇಳದಿರುವುದಕ್ಕೆ ಸಾಮಾನ್ಯ ಕಾರಣಗಳು:
1. ಹೆಚ್ಚಿನ ಕಿವಿಯ ತ್ಯಾಜ್ಯ, ಊತದ ಸೋಂಕಿನಿಂದ ಬಾಹ್ಯ ಶ್ರವಣೇಂದ್ರಿತ ಕಾಲುವೆಗೆ ತೊಂದರೆಯಾಗಿ ಕಿವುಡು ಬರುತ್ತದೆ.
2. ಟಿಂಪಾನಿಕ್ ಮೇಂಬ್ರೇನ್‍ನಲ್ಲಿ (ಕಿವಿ ಡ್ರಮ್) ರಂಧ್ರ ಉಂಟಾಗುವುದು.
3. ಮಧ್ಯಮ ಕಿವಿಯಲ್ಲಿ ದ್ರವ ಬರುವುದು ಶ್ರವಣ ಸಮಸ್ಯೆಗೆ ಕಾರಣವಾಗುತ್ತದೆ.
4. ಬಿಗಿಯಾದ ಹಾಗೂ ನಿರಂತರವಲ್ಲದ ಓಸಿಕಲ್ಸ್‍ನಿಂದ ಕಿವುಡುತನ ಬರಬಹುದು.
5. ಕೊಕ್ಲೀಯಾದಲ್ಲಿನ ಅಬ್ನಾರ್ನಲ್ ದ್ರವ ಸಂಗ್ರಹ, ಕೂದಲು ಜೀವಕೋಶಗಳ ಹಾನಿಯಿಂದ ವಯಸ್ಸಿನ ಆಧಾರದಲ್ಲಿ ಮತ್ತು ಸಹಜ ಕಿವುಡು ಬರಬಹುದು.
6. ವೆಸ್ಟಿಬುಲಾಕೊಕೊಲೆರ್ ನರದಲ್ಲಿ ಉತ್ಪತ್ತಿಯಾಗುವ ಗೆಡ್ಡೆಗಳಿಂದ ಶ್ರವಣ ಸಮಸ್ಯೆ ಉಂಟಾಗುತ್ತದೆ.
7. ಆಡಿಟರಿ ಕಾರ್ಟೆಕ್ಸ್ ಕೇಂದ್ರೀಯ ನರ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯಿಂದಲೂ ಕಿವಿ ಕೇಳದಿರಬಹುದು.
8. ವಯಸ್ಸಾಗುವುದು: ಸಾಮಾನ್ಯವಾಗಿ ಪ್ರತಿಯೊಬ್ಬರಿಗು 60 ವರ್ಷ ವಯಸ್ಸಾಗುತ್ತಿದ್ದಂತೆ, ಕೇಳುವ ಸಾಮರ್ಥ್ಯ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಹಲವಾರು ವರ್ಷಗಳಿಂದ ಕೇಳಿಕೊಂಡು ಬಂದಿರುವ ಶಬ್ದಗಳು ಸಾಮಾನ್ಯವಾಗಿ ಕಿವಿಯ ಒಳಗಿನ ಕೋಶಗಳನ್ನು ಹಾನಿಗೊಳಿಸುತ್ತವೆ.
9. ಉಚ್ಚ ಸ್ವರದ ಶಬ್ಧಗಳು: ನಿರ್ಮಾಣದ ಅಥವಾ ಕಾರ್ಖಾನೆಯ ಕೆಲಸದಂತಹ ವ್ಯಾವಹಾರಿಕ ಶಬ್ದಗಳು, ಸಂಗೀತ ಕಚೇರಿಗಳಲ್ಲಿನ ಜೋರಾದ ಸಂಗೀತದ ಶಬ್ಧ, ಸ್ನೊಮೊಬೈಲ್ ಅಥವಾ ಮೋಟಾರ್ ಸೈಕಲ್ನ ಎಂಜಿನ್ಗಳು, ವಿಮಾನ ಹಾರುವ ಶಬ್ಧದಂತಹ ಉಚ್ಚ ಸ್ವರದ ಶಬ್ಧಗಳು ಕಿವುಡುತನಕ್ಕೆ ಕಾರಣವಾಗಬಹುದು. ಬಾಂಬ್ ಸ್ಫೋಟ, ದೀಪಾವಳಿಯ ಪಟಾಕಿಗಳ ಶಬ್ಧದಂತಹ ಹಠಾತ್ತಾದ ಶಬ್ದಗಳು ಶಾಶ್ವತವಾದ ಕಿವುಡುತನವನ್ನು ಉಂಟುಮಾಡಬಹುದು.
10. ಅನುವಂಶೀಯತೆ: ಅನುವಂಶಿಕ ಕಿವುಡುತನದಿಂದಲೂ ಸಹ ಕಿವಿ ಹಾನಿಗೆ ಒಳಗಾಗಬಹುದು. ವಯಸ್ಸಿಗೆ ಸಂಬಂಧಿತ ಕಿವುಡುತನವು ಕೂಡಾ ಬೇಗ ಪ್ರಾರಂಭವಾಗಬಹುದು.
11. ಔಷಧಿಗಳು: ಆ್ಯಂಟಿಬಯೋಟಿಕ್ ಜೆಂಟಾಮಿಸಿನ್ಗಳಂತಹ ಒಟೊಟಾಕ್ಸಿಕ್ ಔಷಧಗಳು ಒಳ ಕಿವಿಯನ್ನು ಬೇಗ ಹಾನಿಗೊಳಗಾಗಿಸುತ್ತವೆ. ಅತಿ ಹೆಚ್ಚು ವಿಕಿರಮ ಪ್ರಮಾಣ (ಡೋಸೆಸ್) ಹೊಂದಿರುವ ಆಸ್ಪಿರಿನ್ಗಳನ್ನು ತೆಗೆದುಕೊಳ್ಳುವುದರಿಂದಲೂ ಸಹ ಕಿವಿ ಅಥವಾ ಕೇಳುವ ಸಾಮರ್ಥ್ಯದಲ್ಲಿ ಪರಿಣಾಮಗಳು ಉಂಟಾಗಬಹುದು.
12. ಕೆಲವು ಅನಾರೋಗ್ಯಗಳು: ಮೆದುಳು ಪೊರೆಯುರಿತದಂತಹ ಹೆಚ್ಚಿನ ಜ್ವರ ಅಥವಾ ಅನೇಕ ಕಾಯಿಲೆಗಳು ಕೊಕ್ಲಿಯಾವನ್ನು ಹಾನಿಗೊಳಿಸುತ್ತವೆ. ಮಂಗನಬಾವು ಮತ್ತು ದಡಾರದಂತಹ ರೋಗಗಳು ಕಿವುಡುತನಕ್ಕೆ ಕಾರಣವಾಗಬಹುದು.
ಕಿವಿ ಕೇಳದಿರುವ ಸಮಸ್ಯೆಗೆ ಕಾರಣವಾಗಿರುವ ಅಂಶವನ್ನು ಚಿಕಿತ್ಸೆ ಅವಲಂಬಿಸಿರುತ್ತದೆ. ಹಲವು ಸಮಸ್ಯೆಗಳಿಗೆ ಕಿವಿಯಲ್ಲಿನ ವ್ಯಾಕ್ಸ್ ತೆಗೆಯುವಂತಹ ಸರಳ ಕ್ರಮಗಳು ಸಾಕಾಗುತ್ತವೆ. ಮತ್ತೊಂದಿಷ್ಟಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಬೇಕಾಗುತ್ತದೆ.
Comments are closed.