ಹೌದು ನಮ್ಮ ದೇಹಕ್ಕೆ ಇತ್ತೀಚಿನ ಆಹಾರ ಪದಾರ್ಥಗಳ ಬಳಕೆಯಿಂದ ಮತ್ತು ಮಾಲಿನ್ಯದಿಂದ ವಿಷಕಾರಿ ಅಂಶಗಳು ದೇಹ ಸೇರುತ್ತಿವೆ ಆದ್ದರಿಂದ ಇಂತಹ ವಿಷಕಾರಿ ಅಂಶಗಳನ್ನು ದೇಹದಿಂದ ಮುಕ್ತಿಗೊಳಿಸಲು ಇಂತಹ ಜ್ಯುಸ್ ಗಳನ್ನೂ ಕುಡಿಯುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ನಿಂಬೆ ಜ್ಯೂಸ್: ಇದರಲ್ಲಿರುವ ವಿಟಮಿನ್ ಸಿ ಮತ್ತು ಫೈಬರ್ ಅಂಶಗಳು ನಿಂಬೆಯನ್ನು ಉತ್ತಮ ಕ್ಲೆನ್ಸರ್ ಮತ್ತು ರಕ್ತ ಶುದ್ಧಿಕಾರಕವನ್ನಾಗಿಸಿದೆ. ಜೊತೆಗೆ ನಿಂಬು ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ, ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ , ಗಂಟು ನೋವಿನಂತಹ ಸಮಸ್ಯೆ ದೂರವಾಗಿಸುತ್ತದೆ.
ಕ್ಯಾರೆಟ್: ಕ್ಯಾರೆಟ್ನಲ್ಲಿ ಬೆಟಾ ಕ್ಯಾರೊಟಿನ್, ಫೊಲಿಕ್ ಆ್ಯಸಿಡ್ ಮತ್ತು ಕ್ಯಾಲ್ಸಿಯಂ ಅಂಶಗಳು ಸಮೃದ್ಧವಾಗಿವೆ ಹೀಗಾಗಿ ಇವು ಆಹಾರವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತವೆ. ಇದರಲ್ಲಿ ವಿಟಮಿನ್ ಎ ಇರುವುದರಿಂದ ಇದನ್ನು ಪರಿಣಾಮಕಾರಿ ಡೀಟಾಕ್ಸಿಫೈಯರ್ ಎಂದು ಕರೆಯಲಾಗುತ್ತದೆ. ಕ್ಯಾರೇಟ್ ಜ್ಯೂಸ್, ಲೀವರ್ ವಿಷಕಾರಿ ಪದಾರ್ಥಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ದೇಹದಲ್ಲಿ ಪಿಹೆಚ್ ಮಟ್ಟವನ್ನು ನಿಯಂತ್ರಿಸಲು ಕ್ಯಾರೆಟ್ ಜ್ಯೂಸ್ ಸಹಕಾರಿ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಮತ್ತು ಆ್ಯಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿರುವುದರಿಂದ ಅನೇಮಿಯಾ, ಮತ್ತು ಬೇಗನೆ ವಯಸ್ಸಾಗುವ ಲಕ್ಷಣಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಪಾಲಕ್ ಸೊಪ್ಪು ರಕ್ತಶುದ್ಧಿಕರಣ ಮಾಡುವ ಮೂಲಕ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿಯಾಗಿದೆ.
Comments are closed.