ಕರಾವಳಿ

ಕೇವಲ ಶಾಸ್ತ್ರ, ಶುಭ ಕಾರ್ಯಗಳಿಗೆ ಸೀಮಿತವಾಗದೆ ಈ ವಸ್ತು ಆರೋಗ್ಯಕ್ಕೂ ಸೈ

Pinterest LinkedIn Tumblr

ಹೌದು ನಾವು ಪ್ರತಿನಿತ್ಯ ನಮ್ಮ ಮನೆಯಲ್ಲಿ ಅಡಕೆಯನ್ನು ಕಾಣುತ್ತಿರುತ್ತೇವೆ ಮತ್ತು ನಾವು ಕೂಡ ಬೆಳೆಯುತ್ತೇವೆ ಅದು ನಮ್ಮ ನಾಡಿನ ಪ್ರಸಿದ್ಧ ಬೆಳೆಗಳಲ್ಲಿ ಕೂಡ ಒಂದಾಗಿದೆ, ಅಡಿಕೆ ಕೇವಲ ಶಾಸ್ತ್ರಗಳಿಗೆ ಶುಭ ಕಾರ್ಯಗಳಿಗೆ ಸೀಮಿತವಾಗದೆ, ಆದರೆ ಇದು ಹಲವಾರು ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಅದೇನೆಂದು ತಿಳಿಯಲು ಮುಂದೆ ಓದಿ.

ಇತ್ತೀಚಿನ ದಿನಗಳಲ್ಲಿ ನಮಗೆ ಒಂದಲ್ಲ ಒಂದು ರೀತಿಯಲ್ಲಿ ದೈಹಿಕ ಸಮಸ್ಯೆಗಳು ಕಾಡುತ್ತಿರುತ್ತವೆ, ಅಂತ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಈ ಮನೆಮದ್ದುಗಳು ತುಂಬಾನೇ ಸಹಕಾರಿಯಾಗುತ್ತಿವೆ ಆದರೆ ನಮಗೆ ತಿಳಿದಿರುವುದಿಲ್ಲ ಅಷ್ಟೇ,ಇದು ಮೂತ್ರ ಮಾರ್ಗದಲ್ಲಿ ಏನಾದರು ಸಮಸ್ಯೆ ಇದ್ದರೆ ಹಸುವಿನ ತುಪ್ಪದಲ್ಲಿ 2 -3 ಗ್ರಾಂ ನಷ್ಟು ಅಡಿಕೆ ಪುಡಿಯನ್ನು ಬೆರಸಿ ಸೇವಿಸುವುದರಿಂದ ನೋವು ಆ ಭಾಗದ ನಿವಾರಣೆಯಾಗುತ್ತದೆ ಮತ್ತು ಅಡಿಕೆ ನೀರು ಸೇವಿಸುವುದರಿಂದ ಮೂತ್ರ ಮಾರ್ಗದ್ಲಲಿ ನೋವು ನಿವಾರಣೆಯಾಗಿ ಮೂತ್ರ ಸಲೀಸಾಗಿ ಹೊರ ಹೋಗುತ್ತದೆ.

ಬಾಯಿಹುಣ್ಣು ಸಮಸ್ಯೆ ಇದ್ದರೆ ಅಡಿಕೆಯ ಕಷಾಯ ಮಾಡಿ ಈ ಕಷಾಯದಿಂದ ಮುಕ್ಕಳಿಸುವುದರಿಂದ ಬಾಯಿಹುಣ್ಣು ಸಮಸ್ಯೆಗೆ ಪರಿಹಾರ ಕಾಣಬಹುದು.ಹಲ್ಲು ನೋವು ಕಡಿಮೆಯಾಗಲು ಅಡಿಕೆಯನ್ನು ಸುಟ್ಟು, ಅದರ ಬೂದಿಯಿಂದ ಹಲ್ಲು ಉಜ್ಜಿದರೆ ಹಲವು ನೋವು ನಿವಾರಣೆಯಾಗುತ್ತದೆ.

ಸಂದು ನೋವು ಕಾಣಿಸಿಕೊಂಡರೆ ಎಳ್ಳೆಣ್ಣೆ ಜೊತೆ ಅಡಿಕೆ ಪುಡಿಯನ್ನು ಬೆರಸಿ ನೋವಿರುವ ಜಾಗಕ್ಕೆ ಮಸಾಜ್ ರೀತಿಯಲ್ಲಿ ಮಾಡೋದ್ರಿಂದ ನೋವು ಶಮವಾಗುತ್ತದೆ.ಚರ್ಮದಲ್ಲಿ ತುರಿಕೆ ಸಮಸ್ಯೆ ಬಂದ್ರೆ, ಸಾಸಿವೆ ಎಣ್ಣೆಯೊಂದಿಗೆ ಅಡಿಕೆಯನ್ನು ಸುಟ್ಟು ಬೂದಿ ಮಾಡಿ ಆ ಅದನ್ನು ಸಾಸಿವೆ ಎಣ್ಣೆ ಜೊತೆ ಲೇಪಿಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಗಾಯವಾಗಿ ಅತಿಯಾಗಿ ರಕ್ತ ಸೋರುತ್ತಿದ್ದರೆ, ಅಡಿಕೆ ಕಷಾಯದ ನೀರಿನಿಂದ ತೊಳೆದರೆ ರಕ್ತ ನಿಲ್ಲುತ್ತದೆ.

Comments are closed.