ಕರಾವಳಿ

ಕೆಂಪಕ್ಕಿಯಿಂದ ತಯಾರಿಸಿದ ಗಂಜಿ ಡೆಂಗ್ಯೂ ಜ್ವರ ಕಡಿಮೆಯಾಗಲು ಸಹಕಾರಿ

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ದಂತಹ ಮರಣಾತಿಕ ರೋಗಗಳು ಬರುತ್ತಿವೆ. ಈ ರೋಗಗಳು ಕೆಲವೊಮ್ಮೆ ಆಸ್ಪತ್ರೆಗೆ ಹೋದರೂ ವಾಸಿಯಾಗದೆ ಸಾವು ಸಂಭಿಸುತ್ತಿವೆ ಆದ್ದರಿಂದ ಈ ಡೆಂಗ್ಯೂ ಬಂದ ಆರಂಭಿಕ ದಿನಗಳಲ್ಲಿ ಮನೆಯ ಬಳಿ ಸಿಗುವ ಈ ಮದ್ದುಗಳ ಮೂಲಕ ಡೆಂಗ್ಯೂವನ್ನು ಗುಣಪಡಿಸಿಕೊಳ್ಳಿ.

ಕಹಿ ಬೇವಿನ ಎಲೆ:ಕಹಿ ಬೇವಿನ ಎಲೆಯರಸ ಕೂಡ ಡೆಂಗ್ಯೂ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಕೊತ್ತಂಬರಿಸೊಪ್ಪು:ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿ, ಇದರ ಎಲೆಯಿಂದ ರಸವನ್ನು ಹಿಂಡಿ ಟಾನಿಕ್ ರೀತಿ ಬಳಸಬಹುದು.

ಪರಂಗಿ ಬೀಜ:ಪರಂಗಿ ಬೀಜವನ್ನು ಆಹಾರದ ಜೊತೆ ತಿನ್ನಿ, ಇದರಲ್ಲಿರುವ ಆಂಟಿಬ್ಯಾಕ್ಟೀರಿಯಾ ಗುಣ ಡೆಂಗ್ಯೂಜ್ವರವನ್ನು ಕಮ್ಮಿ ಮಾಡುತ್ತದೆ. ಪರಂಗಿ ಎಲೆಯ ರಸ:ಎಳೆಯ ಪರಂಗಿ ಎಲೆಯನ್ನು ಶುದ್ಧ ಮಾಡಿ ಅದನ್ನು ಹಿಂಡಿ ರಸತೆಗೆದು ದಿನಕ್ಕೆ ಎರಡು ಚಮಚದಂತೆ ಕೊಟ್ಟರೆ ಬೇಗನೆ ಕಡಿಮೆಯಾಗುವುದು ಅಥವಾ ಪರಂಗಿ ಎಳೆಯ ಪುಡಿಯನ್ನು ನೀರಲ್ಲಿ ಹಾಕಿ ಕುದಿಸಿ ಸೋಸಿ ಕುಡಿಯಿರಿ.

ಈರುಳ್ಳಿ ಮತ್ತು ವಿನೆಗರ್:ಈರುಳ್ಳಿಯನ್ನು ಕತ್ತರಿಸಿ ಮಿಕ್ಸಿಗೆ ಹಾಕಿ ಅದಕ್ಕೆ ವಿನೆಗರ್ ಹಾಕಿ ಮಿಕ್ಸಿಯಲ್ಲಿ ರುಬ್ಬಿ ಇದನ್ನು ಊಟದ ಜೊತೆ ಕಾಯಿಲೆಯಿಂದ ಗುಣಮುಖವಾಗುವವರೆಗೆ ತಿನ್ನಿ. ವಿಟಮಿನ್ ಸಿ ಹಣ್ಣುಗಳು: ವಿಟಮಿನ್ ಸಿ ಇರುವ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ನೆಲ್ಲಿಕಾಯಿ, ಕಿತ್ತಳೆರಸ ತಿನ್ನಿ.

ತುಳಸಿ ಎಲೆ :ಕುಡಿಯುವ ನೀರಿಗೆ ತುಳಸಿ ಎಲೆ ಹಾಕಿ ಕುದಿಸಿ, ಆ ನೀರನ್ನು ಕುಡಿಯುವುದು ಒಳ್ಳೆಯದು. ಬಿಸಿನೀರಿಗೆ ೧ ಚಮಚ ತುಳಸಿ ರಸ ಮತ್ತು ಸ್ವಲ್ಪ ಕರಿಮೆಣಸಿನ ಪುಡಿ ಹಾಕಿ ಮಿಕ್ಸ್ಮಾಡಿ ಕುಡಿಯುವುದು ಕೂಡ ಒಳ್ಳೆಯದು. ಮೆಂತೆಸೊಪ್ಪು:ಮೆಂತೆಸೊಪ್ಪನ್ನು ತಿಂದರೆ ಡೆಂಗ್ಯೂಜ್ವರ ಕಡಿಮೆಯಾಗುವುದು.

ಕೆಂಪಕ್ಕಿಯ ಗಂಜಿ: ಕೆಂಪಕ್ಕಿಯಿಂದ ತಯಾರಿಸಿದ ಗಂಜಿ ಕುಡಿಯುವುದರಿಂದ ಡೆಂಗ್ಯೂ ಜ್ವರ ಬೇಗನೆ ಕಮ್ಮಿಯಾಗುವುದು ಅಲ್ಲದೆ ಗಂಜಿ ದೇಹಕ್ಕೆಶಕ್ತಿಯನ್ನೂತುಂಬುವುದು.

Comments are closed.