ಕರಾವಳಿ

ಮಾತ್ರೆಗಳ ಮಧ್ಯೆ ಸ್ವಲ್ಪ ಖಾಲಿ ಪ್ರದೇಶ ಕೂಡಾ ಇದೆ… ಎಂದಾದರೂ ಗಮನಿಸಿದ್ದಿರಾ…!

Pinterest LinkedIn Tumblr

ಮಾತ್ರೆಗಳನ್ನು ಕೊಂಡುಕೊಳ್ಳುವಾಗ ಅವುಗಳನ್ನು ನೀವು ಯಾವತ್ತಾದರೂ ಗಮನಿಸಿದ್ದೀರಾ? ಇಷ್ಟಕ್ಕೂ ಅದರಲ್ಲಿ ಗಮನಿಸಬೇಕಾದದ್ದು ಏನಿದೆ? ಅಂತ ಕೇಳಲಿದ್ದೀರ? ಆದರೆ ಇದೆ. ನಿಜವಾಗಿಯೇ ಒಂದು ಸಲ ನೋಡಿ…. ನೋಡಿದಿರಾ? ಹೌದು ಮಾತ್ರೆಗಳೆಲ್ಲಾ ಪ್ಯಾಕಿನಲ್ಲಿ ಒಂದೊಂದು ಖಾಲಿ ಇರುವ ಕಡೆ ತುಂಬಿಸಿಡಲಾಗಿದೆ. ಅವುಗಳ ಮಧ್ಯೆ ಸ್ವಲ್ಪ ಖಾಲಿ ಪ್ರದೇಶ ಕೂಡಾ ಇದೆ. ಅಂತೀರಾ…! ಹೌದು ರೀ ಅದರ ಬಗ್ಗೆಯೇ ನಾವು ಹೇಳುತ್ತಿರುವುದು. ಆದರೆ ಮಾತ್ರೆಗಳೆಲ್ಲಾ ಪಕ್ಕ ಪಕ್ಕದಲ್ಲಿಯೇ ಅಲ್ಲದೆ ಸ್ವಲ್ಪ ಸ್ಥಳ ಬಿಟ್ಟು ಯಾಕೆ ಪ್ಯಾಕ್ ಮಾಡಿದ್ದಾರೆಯೋ ಗೊತ್ತಾ? ಗೊತ್ತಲ್ಲವಲ್ಲಾ? ಆದರೆ ಅದಕ್ಕೆ ಕೆಲವು ಕಾರಣಗಳಿವೆ. ಅವು ಯಾವುವೆಂದರೆ….

ಸಾಧಾರಣವಾಗಿ ಕೆಲವು ಮಾತ್ರೆಗಳನ್ನು ಬಾಟಲಿಗಳಲ್ಲಿ ಪ್ಯಾಕ್ ಮಾಡುತ್ತಾರೆ. ಅದನ್ನು ಪಕ್ಕಕ್ಕಿಟ್ಟರೆ ಕೆಲವು ಮಾತ್ರ ಬ್ಲಿಸ್ಟರ್ ಪ್ಯಾಕ್ಗಳಲ್ಲಿ ನೀಡುತ್ತಾರೆ. ಅಲ್ಲದೆ ಮಾತ್ರೆಗಳನ್ನು ಪ್ಯಾಕ್ ಮಾಡುವಾಗ ಅವುಗಳನ್ನು ಪಕ್ಕ ಪಕ್ಕದಲ್ಲಿಯೇ ಅಲ್ಲದೆ ಸ್ವಲ್ಪ ಸ್ಥಳ ಬಿಟ್ಟು ಪ್ಯಾಕ್ ಮಾಡುತ್ತಾರೆ. ಹೀಗೆ ಯಾಕೆ ಮಾಡುತ್ತಾರೆಂದರೆ ಮಾತ್ರೆಗಳ ಮಧ್ಯೆ ರಾಸಾಯನಿಕ ರಿಯಾಕ್ಷನ್ ಉಂಟಾಗಬಾರದೆಂದು. ಹೌದು, ನೀವು ಕೇಳಿದ್ದು ನಿಜ. ಪಕ್ಕ ಪಕ್ಕದಲ್ಲಿಯೇ ಇದ್ದರೆ ಆ ಮಾತ್ರೆಗಳು ಒಂದಕ್ಕೊಂದು ರಾಸಾಯನಿಕವಾಗಿ ಕಾರ್ಯ ನಿರ್ವಹಿಸಿ ಫಲಿತವಾಗಿ ಅವು ನಮಗೆ ಉಪಯೋಗವಿಲ್ಲದಂತೆ ಆಗುತ್ತವೆ. ಇದಕ್ಕೆ ಜೊತೆಯಾಗಿ ಮಾತ್ರೆಗಳನ್ನು ರವಾನಿಸುವಾಗ ಅವು ಒಡೆದುಹೋಗದಂತೆ ಇರುವುದಕ್ಕೆ ಆ ರೀತಿ ಪ್ಯಾಕ್ ಮಾಡುತ್ತಾರೆ.

ಆದರೆ ಕೆಲವು ಸಂದರ್ಭಗಳಲ್ಲಿ ರೋಗಿಗಳು ಪೂರ್ತಿ ಶೀಟನ್ನು ಕೊಂಡುಕೊಳ್ಳುವುದಿಲ್ಲ. ಒಂದೆರಡು ಮಾತ್ರೆಗಳನ್ನು ಮಾತ್ರ ಕೊಂಡುಕೊಳ್ಳುತ್ತಾರೆ. ಇದರಿಂದ ಅಂತಹ ಸಂದರ್ಭಗಳಲ್ಲಿ ಮಾತ್ರೆಗಳನ್ನು ಸುಲಭವಾಗಿ ಕತ್ತರಿಸಲು, ಅವುಗಳ ಹಿಂದೆ ಟ್ಯಾಬ್ಲೆಟ್ ಪ್ರಿಂಟ್ ವಿಷಯವನ್ನು ಹಂಚಿಕೆದಾರರಿಗೆ ಗೊತ್ತಾಗಲು ಕೂಡಾ ಮಾತ್ರೆಗಳ ಮಧ್ಯೆ ಗ್ಯಾಪ್ ಇಡುತ್ತಾರೆ. ಅಲ್ಲದೆ ಕೆಲವು ಪ್ಯಾಕ್ಗಳಲ್ಲಿ ಕೇವಲ ಒಂದೇ ಮಾತ್ರೆ ಇರುತ್ತದೆ. ಆದರೂ ಅದರ ನಡುವೆಯೂ ಕೆಲವು ಚಿಕ್ಕ ಚಿಕ್ಕ ಗ್ಯಾಪ್ ಅನ್ನು ಬಿಟ್ಟು ಪ್ಯಾಕ್ ಮಾಡುತ್ತಾರೆ. ಹೀಗೆ ಮಾಡುವುದು ಕೂಡ ಮೇಲೆ ಹೇಳಿದ ಕಾರಣಗಳಿಂದಲೇ. ಈಗ ಗೊತ್ತಾಯಿತೇ, ಮಾತ್ರೆಗಳ ನಡುವೆ ಯಾಕೆ ಜಾಗ ಬಿಟ್ಟು ಪ್ಯಾಕ್ ಮಾಡುತ್ತಾರೋ ಅಲ್ಲದೆ ಮಾತ್ರೆಗಳನ್ನು ಪ್ಯಾಕ್ ಮಾಡುವಾಗ ಅವುಗಳನ್ನು ಪಕ್ಕ ಪಕ್ಕದಲ್ಲಿಯೇ ಅಲ್ಲದೆ ಸ್ವಲ್ಪ ಸ್ಥಳ ಬಿಟ್ಟು ಪ್ಯಾಕ್ ಮಾಡುತ್ತಾರೆ. ಹೀಗೆ ಯಾಕೆ ಮಾಡುತ್ತಾರೆಂದರೆ ಮಾತ್ರೆಗಳ ಮಧ್ಯೆ ರಾಸಾಯನಿಕ ರಿಯಾಕ್ಷನ್ ಉಂಟಾಗಬಾರದೆಂದು

Comments are closed.