ಕರಾವಳಿ

ಹರಳೆಣ್ಣೆ ಜೊತೆಗೆ ಜೊಜೊಬಾ ಎಣ್ಣೆಯ ಮಿಶ್ರಣದಿಂದ ಅಗುವ ಪ್ರಯೋಜನ ಗೋತ್ತೆ.?

Pinterest LinkedIn Tumblr

ಹೌದು ಕೆಲವರಿಗೆ ಹರಳೆಣ್ಣೆ ಅಂದರೆ ಅಲರ್ಜಿ ಅದರ ವಾಸನೆ ಸರಿ ಇಲ್ಲ ಎಂದು ಕೆಲವರು ಬಳಸುವುದೇ ಇಲ್ಲ ಆದರೆ ಹರಳನ್ನೇ ಬಳಸುವುದರಿಂದ ನಮಗೆ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳು ತಿಳಿಸುತ್ತವೆ.ಅದೇನೇನು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಚರ್ಮ ಒರಟಾಗಿ ಕಳಾಹೀನವಾಗಿದ್ದರೆ, ಕೂದಲು ಹೊಳಪು ಕಳೆದುಕೊಂಡಿದ್ದರೆ, ಪಾದ ಬಿರುಕು ಬಿಟ್ಟಿದ್ದರೆ ಹರಳೆಣ್ಣೆ ಹಚ್ಚುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ಹರಳೆಣ್ಣೆಯನ್ನು ವಾರಕ್ಕೊಮ್ಮೆ ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ತೊಳೆದುಕೊಳ್ಳುವುದರಿಂದ ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿಯಂತ್ರಿಸಬಹುದು.

ಉಗುರು ಬೆಚ್ಚಗೆ ಕಾಯಿಸಿದ ಹರಳೆಣ್ಣೆಯನ್ನು ವಾರಕ್ಕೊಮ್ಮೆ ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ಮೃದುವಾಗುತ್ತದೆ.ಮಲಗುವ ಮೊದಲು ಕಣ್ಣಿನ ರೆಪ್ಪೆ ಮತ್ತು ಹುಬ್ಬಿಗೆ ಹರಳೆಣ್ಣೆ ಹಚ್ಚುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.ಬಿಸಿ ಮಾಡಿದ ಹರಳೆಣ್ಣೆ ಮತ್ತು ಅರಿಶಿಣದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖ ತೊಳೆದುಕೊಳ್ಳುವುದರಿಂದ ಮೊಡವೆ ಕಲೆ ಗುಣವಾಗುತ್ತದೆ.

ಗರ್ಭಿಣಿಯರು ಹೊಟ್ಟೆಗೆ ಹರಳೆಣ್ಣೆ ಹಚ್ಚಿಕೊಳ್ಳುವುದರಿಂದ ಸ್ಟ್ರೆಚ್‌ ಮಾರ್ಕ್‌ ನಿಯಂತ್ರಿಸಬಹುದು.ತಲೆ ಸ್ನಾನಕ್ಕೂ ಒಂದು ಗಂಟೆಯ ಮುಂಚೆ ತಲೆಗೆ ಹರಳೆಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು.ಬಿಸಿಲಿಗೆ ಮುಖ ಕಳೆಗುಂದಿ, ಬಣ್ಣ ಕಳೆದುಕೊಂಡಿದ್ದರೆ (ಸನ್‌ ಟ್ಯಾನ್‌) ಈ ಎಣ್ಣೆ ಹಚ್ಚುವುದರಿಂದ ಚರ್ಮ ಸಹಜ ಬಣ್ಣಕ್ಕೆ ಬರುತ್ತದೆ.

ಹರಳೆಣ್ಣೆ ಜೊತೆಗೆ ಜೊಜೊಬಾ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.ಹರಳೆಣ್ಣೆ ಜೊತೆಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮುಖಕ್ಕೆ ಹಚ್ಚಿ, ಹತ್ತು ನಿಮಿಷದ ನಂತರ ತೊಳೆಯುವುದರಿಂದ ಚರ್ಮ ತಾಜಾವಾಗಿರುತ್ತದೆ.

Comments are closed.