ಮಂಗಳೂರು ನವೆಂಬರ್ 02 : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್ ಅವರು ಶನಿವಾರ ಹಾಗೂ ಬಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವರು.
ನವೆಂಬರ್ 3 ರಂದು ಪೂರ್ವಾಹ್ನ 11.20 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮುಡಿಪುವಿಗೆ ಆಗಮಿಸಿ ಮುಡಿಪು ಇನ್ಫೋಸಿಸ್ ಕ್ಯಾಂಪಸ್‍ಗೆ ಭೇಟಿ ನಿಡಲಿದ್ದಾರೆ.
12.30 ಗಂಟೆಗೆ ಬೈಕಂಪಾಡಿ ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಸಭಾಂಗಣದಲ್ಲಿ ದ.ಕ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿ ಗಳೊಂದಿಗೆ ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿ ಕುರಿತಂತೆ ಚರ್ಚೆ. ಹಾಗೂ ದ.ಕ ಜಿಲ್ಲೆಯ ಛೇಂಬರ್ಸ್ ಆಫ್ ಕಾಮರ್ಸ್ ಹಾಗೂ ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳೊಂದಿಗೆ ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮಧ್ಯಾಹ್ನ 2.30 ಗಂಟೆಗೆ ಎಂ.ಆರ್.ಪಿ.ಎಲ್ ಘಟಕಕ್ಕೆ ಭೇಟಿ, 4ನೇ ಹಂತದ ವಿಸ್ತರಣಾ ಯೋಜನೆ ಬಗ್ಗೆ ಅದಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. 3.30 ಗಂಟೆಗೆ ಬಿಜೈ, ಕಾಪಿಕಾಡ್ ರಸ್ತೆಯ ಪ್ಲಾಮ ಸೆಂಟರ್ ನ 3ನೇ ಮಹಡಿಯಲ್ಲಿ ಮಂಗಳೂರಿನ ಕೆ-ಟೆಕ್ ಇನೋವೇಷನ್ ಹಬ್ ಉದ್ಘಾಟಿಸಲಿದ್ದಾರೆ.
4.30 ಗಂಟೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 5.30 ಗಂಟೆಗೆ ಪಿಲಿಕುಳ ತಾರಾಲಯಕ್ಕೆ ಭೆಟಿ ನೀಡುವರು, ಸಕ್ರ್ಯೂಟ್ ಹೌಸ್‍ನಲ್ಲಿ ವಾಸ್ತವ್ಯ.
ನವೆಂಬರ್ 4 ರಂದು ಪೂರ್ವಾಹ್ನ 9.30 ಗಂಟೆಗೆ ಮುಡಿಪು ಇನ್ಫೋಸಿಸ್ ಕ್ಯಾಂಪಸ್‍ನಿಂದ ಹೆಲಿಕಾಪ್ಟರ್ ಮೂಲಕ ವಾಪಾಸಾಗಲಿದ್ದಾರೆ.
Comments are closed.