ಕರಾವಳಿ

ಶಿವಮೊಗ್ಗ ಲೋಕಸಭಾ ಚುನಾವಣೆ: ಬೈಂದೂರು ಕ್ಷೇತ್ರದಲ್ಲಿ ಶಾಂತ ಮತದಾನ

Pinterest LinkedIn Tumblr

 

ಕುಂದಾಪುರ: ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಲೋಕಸಭಾ ಮಧ್ಯಂತರ ಚುನಾವಣೆ ಮತದಾನ ಶಾಂತವಾಗಿ ಶೇ. ರಷ್ಟು ನಡೆದಿದ್ದು, ಎಲ್ಲೂ ಅಹಿತಕರ ಘಟನೆ ಸಂಭವಿಸಿಲ್ಲ.

ಲೋಕಸಭೆ ಚುನಾವಣೆ ಬಹಿಷ್ಕಾರ ಹಾಕಿದ ಬಿಜೂರು ಮತದಾರರ ಮನ ಒಲಿಸಿದ ಅಧಿಕಾರಿಗಳು ಮತದಾನ ಮಾಡುವಂತೆ ಮಾಡಲು ಯಶಸ್ವಿಯಾಗಿದ್ದು, ಎಲ್ಲಾ ಕಡೆ ಭತ್ತ ಕಟಾವು ಕೃಷಿ ಕಾಯಕ ಹಿನ್ನೆಲೆಯಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಲ್ಲೂರು ಹೊರತು ಪಡಿಸಿ ಮತ್ತೆಲ್ಲಾ ಮತ ಕೇಂದ್ರದಲ್ಲೂ ಸರತಿ ಸಾಲು ಕಂಡುಬರಲಿಲ್ಲ. ಸಶಸ್ತ್ರ ಮೀಸಲು ಪಡೆ ಕಟ್ಟೆಚ್ಚರದಲ್ಲಿ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ ಚುರುಕಿನಿಂದ ನಡೆದಿದೆ.

ನಾಡಾ ಗ್ರಾಮ ಕೋಣ್ಕಿ ಸರ್ಕಾರಿ ಶಾಲೆ ಮತಘಟ್ಟೆಯಲ್ಲಿ ಮತದಾನ ತಾಂತ್ರಿಕೆ ಸಮಸ್ಯೆಯಿಂದ ಅರ್ಧ ಗಂಟೆ ವಿಳಂಬವಾಗಿ ಆರಂಭವಾಗಿದ್ದು, ಮತ್ತೆಲ್ಲೂ ಚುನಾವಣೆಗೆ ಅಡ್ಡಿಯಾದ ಘಟನೆ ಸಂಭವಿಸಿಲ್ಲ. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಬೆಳ್ಳಾಲ ಮತಗಟ್ಟೆಯಲ್ಲಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಟ್‌ಬೇಲ್ತೂರು ಮತಕೇಂದ್ರದಲ್ಲಿ ಮತದಾನ ಮಾಡಿದರು. ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಧ್ಯಂತರ ಚುನಾವಣೆ ವಿಶೇಷ.

 

ಇನ್ನು ಪ್ರತಿವಾರದ ಕುಂದಾಪುರದ ಸಂತೆ ಮತದಾನ ನೀತಿ ಸಂಹಿತೆ ಹಿನ್ನೆಲೆ ಬಂದ್ ಆಗಿತ್ತು. ಆದರೂ ಇದನ್ನರಿಯದ ಕೆಲವು ವ್ಯಾಪಾರಸ್ಥರು ದೂರದಿಂದ ಬಂದಿದ್ದು ಸಂತೆ ಮಾರ್ಕೇಟ್ ಆವರಣದಲ್ಲಿ ಮಧ್ಯಾಹ್ನದವರೆಗೆ ವ್ಯಾಪಾರ ಮಾಡಿದರು.

ಗಮನ ಸೆಳೆದ ಬುಡಕಟ್ಟು ಮತಗಟ್ಟೆ
ಜಿಲ್ಲಾಡಳಿತ ಮತದಾರರ ಸೆಳೆಯಲು ನಡೆಸಿದ ವಿಭಿನ್ನ ಪ್ರಯತ್ನ ಬೈಂದೂರು ವಿಧಾನ ಸಭಾ ಕ್ಷೇತ್ರದ ಹೈಲೈಟ್. ಬುಡಕಟ್ಟು ಜನರೇ ಹೆಚ್ಚಿರುವ ಕೆರಾಡಿ ಗ್ರಾಮ ಮತಗಟ್ಟೆ 133ರಲ್ಲಿ ಬುಕಟ್ಟು ಮತದಾನ ಕೇಂದ್ರ ಮತದಾರರ ಸೆಳೆಯಲು ಸಫಲವಾಗಿದ್ದು, ಜನ ಉತ್ಸಾಹದಿಂದ ಮತದಾನ ಮಾಡಿದರು. ಬುಡಕಟ್ಟು ಜನರ ಜೀವನಾದಾರವಾಗಿದ್ದ, ಗುಡಿ ಕೈಗಾರಿಕಾ ವಸ್ತುಗಳ ಮೂಲಕ ಮತಕೇಂದ್ರ ಶೃಂಗರಿಸಿ, ತಳಿರು ತೋರಣದಿಂದ ಅಲಂಕರಿಸಿ, ರಂಗೋಲಿ ಬಿಡಿಸಿ ಮತಕೇಂದ್ರ ಸಿದ್ದ ಪಡಿಸಲಾಗಿತ್ತು. ಹೆಚ್ಚಿನ ಬುಡಕಟ್ಟು ಜನರ ಆವಾಸ ಸ್ಥಾನದ ಜತೆ ನಕ್ಸಲ್ ಪೀಡಿತ ಅತೀ ಸೂಕ್ಷ್ಮ ಮತಗಟ್ಟೆಯಾದರೂ ಮತದಾರರು ನಿಭಯ ಮತದಾನ ಮಾಡಿದರು.
ಮತಕೇಂದ್ರದ ಪ್ರವೇಶ ದ್ವಾರದಲ್ಲಿ ಬುಡಕಟ್ಟು ಜನರೇ ನೇದ, ಬುಟ್ಟಿ, ಮುಟ್ಟಾಳೆ, ಕಲ್ಲಿ, ಶಿಬಿಲು, ಕುಕ್ಕೆ, ಹೆಡಿಗೆ, ಡೋಲು, ಕೊಳಲಿಂದ ಅಲಂಕಾರ ಮಾಡಿದ್ದು, ಬೆಳಗ್ಗೆಯಿಂದಲೇ ಜನ ಸರತಿಯಲ್ಲಿ ನಿಂತು ಮತದಾನ ಮಾಡಿದರು.

ಒಟ್ಟು ಮತದಾರರು_2,21,972, ಪುರುಷರು_1,7,922, ಮಹಿಳೆಯರು_1.14,049,, ಇತರೆ-1

ಮತಘಟ್ಟೆ ಸಂಖ್ಯೆ 246, ಅತೀ ಸೂಕ್ಷ್ಮ-40, ಸೂಕ್ಷ್ಮ-95, ಚುನಾವಣೆ ಕರ್ತವ್ಯಕ್ಕೆ ನಿಯುಕ್ತ ಸಿಬ್ಬಂದಿ_1230

Comments are closed.