ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ಬಲತ್ಕಾರ: ಅಪರಾಧ ಸಾಭೀತು, ನ.9 ಶಿಕ್ಷೆ ಪ್ರಕಟ

Pinterest LinkedIn Tumblr

ಕುಂದಾಪುರ: ಸುಮಾರು 6 ವರ್ಷಗಳ ಹಿಂದೆ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಕೊಲ್ಲೂರಿಗೆ ಕರೆತಂದು ಅಲ್ಲಿನ ವಸತಿಗೃಹವೊಂದರಲ್ಲಿ ಬಲತ್ಕಾರ ನಡೆಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ವಿರುದ್ಧದ ದೋಷಾರೋಪಣೆಗಳು‌‌ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಸಾಭೀತಾಗಿದ್ದು ಅಪರಾಧಿಗೆ ನ.9 ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಇಲ್ಲಿನ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ತೀರ್ಪು ಪ್ರಕಟಿಸಿದ್ದಾರೆ.

ಕುಮಟಾ ದಾರೇಶ್ವರ ನಿವಾಸಿ ನಾಗರಾಜ ಮಹಾದೇವ ಹರಿಕಾಂತ ಅಪರಾಧಿ.

ನಾಗರಾಜ ಹೊನ್ನಾವರ ಮೂಲದ ಯುವತಿಯೋರ್ವಳ ಜೊತೆ ಅದ್ಯೇಗೋ ಗೆಳೆತನ ಬೆಳೆಸಿಕೊಂಡಿದ್ದು ಬಳಿಕ ಪ್ರೀತಿಗೆ ತಿರುಗಿತ್ತು. ಆಕೆಯನ್ನು ಮದುವೆಯಾಗುವ ಭರವಸೆಯನ್ನು ನಾಗರಾಜ ನೀಡಿದ್ದ. 2013ರ ಜನವರಿ ತಿಂಗಳಿನಲ್ಲಿ‌ ಕೊಲ್ಲೂರಿಗೆ ಆಕೆಯ ಜೊತೆ ಆಗಮಿಸಿದ್ದು ಅವಳನ್ನು ವಸತಿಗೃಹವೊಂದಕ್ಕೆ ಕರೆದೊಯ್ದು ಆಕೆಯ ಇಚ್ಚೆಗೆ ವಿರುದ್ಧವಾಗಿ ಬಲತ್ಕಾರ ನಡೆಸಿದ್ದ. ಆದರೆ ಒಂದು ತಿಂಗಳಿನ ಬಳಿಕ ನಾಗರಾಜ ಆಕೆಯನ್ನು ತಿರಸ್ಕರಿಸಿ ಇನ್ನೋರ್ವಳೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು ತಿಳಿಯುತ್ತಿದ್ದಂತೆ ಸಂತ್ರಸ್ತ ಯುವತಿ ತನಗಾದ ಅನ್ಯಾಯದ ವಿರುದ್ಧ ಕೊಲ್ಲೂರು ಪೊಲೀಸರಿಗೆ ದೂರು ‌ನೀಡಿದ್ದಳು.

ಸಾಕ್ಷ್ಯಾಧಾರಗಳ ವಿಚಾರಣೆ ಬಳಿಕ ನಾಗರಾಜ ಮೇಲಿನ ಆರೋಪಗಳು‌ ಸಾಭೀತಾದ ಹಿನ್ನೆಲೆ ಆತ ದೋಷಿಯೆಂದು ಪ್ರಕಟಿಸಿದೆ. ಬಲತ್ಕಾರ, ನಂಬಿಕೆ ದ್ರೋಹ ಪ್ರಕರಣದಡಿ ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಲಾಗುತ್ತದೆ.

ಪ್ರಾಸಿಕ್ಯೂಷನ್ ಪರವಾಗಿ‌ ಜಿಲ್ಲಾ‌ ಸರಕಾರಿ‌ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.

Comments are closed.