ಕರಾವಳಿ

ಸಂತೋಷ್ ತಮ್ಮಯ್ಯ ಬಂಧನ – ಹಿಂದುತ್ವದ ಧ್ವನಿ ಅಡಗಿಸುವ ಯತ್ನ : ಸಂಸದ ನಳಿನ್ ಕುಮಾರ್

Pinterest LinkedIn Tumblr

ಮಂಗಳೂರು : ಟಿಪ್ಪು ಜಯಂತಿಗೆ ವಿರೋಧ ವ್ಯಕ್ತ ಪಡಿಸಿದ ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಹಿಂದೂಗಳ ಧ್ವನಿ ಅಡಗಿಸಲು ಪ್ರಯತ್ನಿಸಿದೆ. ಹಿಂದೂ ದೇವರನ್ನು ನಿರಂತರ ಅವಹೇಳನ ಮಾಡುತ್ತಿರುವ ಕೆಲವು ಸಾಹಿತಿಗಳನ್ನು ರಕ್ಷಿಸುವ ಸರ್ಕಾರ ಹಿಂದುತ್ವದ ಬಗ್ಗೆ ಮಾತನಾಡಿದ ಪತ್ರಕರ್ತನನ್ನು ಬಂಧಿಸಿರುವುದು ಖಂಡನೀಯ ಎಂದು ದ.ಕ.ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

ಸಂತೋಷ್ ತಮ್ಮಯ್ಯರ ಮನೆಗೆ ಮಧ್ಯ ರಾತ್ರಿ ನುಗ್ಗಿ ವಿನಾಕಾರಣ ಅವರ ಮೇಲೆ ಧರ್ಮ ನಿಂದನೆಯ ಕೇಸು ಹಾಕಲಾಗಿದೆ. ಸಿದ್ಧರಾಮಯ್ಯ ಸರ್ಕಾರ ಆರಂಭಿಸಿದ ಹಿಂದೂ ವಿರೋಧಿ ನೀತಿಯನ್ನು ಈಗ ಕುಮಾರಸ್ವಾಮಿ ಸರ್ಕಾರ ಮುಂದುವರಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

ಅಭಿವ್ಯಕ್ತಿ ಸ್ವಾತಂತ್ರೃದ ಬಗ್ಗೆ ಭಾಷಣ ಬಿಗಿಯುವ ಬುದ್ಧಿಜೀವಿಗಳು ಕೂಡಾ ಈ ಬಗ್ಗೆ ಮೌನ ವಹಿಸಿದ್ದಾರೆ. ಸರ್ಕಾರದ ಹಿಂದೂ ವಿರೋಧಿ ನೀತಿಯ ಸಂಘಟಿತ ಹೋರಾಟ ಅನಿವಾರ್ಯವಾಗಬಹುದೆಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.