ಕೊಳ್ಕೆರೆ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಹಾಗು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಬಸ್ರೂರು ಇವರು ಕೊಡಮಾಡುವ ‘ಕೊಳ್ಕೆರೆ ರತ್ನಾಕರ ಶೆಟ್ಟಿ ಸ್ಮಾರಕ ಸಾಧಕ ಪ್ರಶಸ್ತಿ 2018-19’ ಗೆ ಕಂದಾವರ ಸತೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕುಂದಾಪುರ ತಾಲೂಕಿನ ಬಲ್ಕೂರು ಗ್ರಾಮದ ಪ್ರತಿಷ್ಠಿತ ಬಂಟ ನಾಡ ಕುಟುಂಬವಾಗಿರುವ ಕಂದಾವರದವರಾಗಿದ್ದು, ತಂದೆ ಮೊಳಹಳ್ಳಿ ಗೋಪಾಲ ಕೃಷ್ಣ ಶೆಟ್ಟಿ ಹಾಗು ತಾಯಿ ಕಂದಾವರ ದೇವಕಿ ಶೆಟ್ಟಿ ಅವರ ಮಗನಾಗಿರುವ ಕಂದಾವರ ಸತೀಶ್ ಶೆಟ್ಟಿ ಅವರು ‘ಕೊಳ್ಕೆರೆ ರತ್ನಾಕರ ಶೆಟ್ಟಿ ಸ್ಮಾರಕ ಸಾಧಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಕಂದಾವರ ಸತೀಶ್ ಶೆಟ್ಟಿ ಅವರ ವಿಭಿನ್ನ ಸಾಧನೆಗಾಗಿ ಯುಎಇ ಸರಕಾರದ 2017ರ ಏನೋಕ್ ಎನರ್ಜಿ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಯುಎಇ ಫ್ಯುಯಲ್ ಸ್ಟೇಶನ ಡಿಸೈನ್ ಮತ್ತು ಎಂಜಿನಿಯರಿಂಗ್ ಎನರ್ಜಿ ಸ್ಟ್ಯಾಂಡರ್ಡ್ ತಯಾರಿ ಮಾಡಿದ್ದಕ್ಕಾಗಿ ದುಬೈ ರೋಟನನಲ್ಲಿ ನಡೆದ ಎಕ್ಸ್ ಕ್ಲ್ಯೂಸಿವ್ ಸಭೆಯಲ್ಲಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಧ್ಯಪ್ರಾಚ್ಯದ ಕೈಗಾರಿಕಾ ಕಂಪೆನಿಗಳಲ್ಲಿ ಪ್ರತಿಷ್ಠಿತವಾಗಿರುವ ‘ಕ್ಲೈಮೇಟ್ ಕಂಟ್ರೋಲ್ ಅವಾರ್ಡ್-2017’ ರ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಯುಎಇ ಸರಕಾರದಿಂದ ಕಂದಾವರ ಸತೀಶ್ ಶೆಟ್ಟಿ ನಾಮನಿರ್ದೇಶನ ಗೊಂಡಿದ್ದಾರೆ.
Comments are closed.