ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಸಾಕ್ಷಿನಾಶ ಮತ್ತು ಒಳಸಂಚು ರೂಪಿಸಿದ ಆರೋಪದಲ್ಲಿ ಕೋಟದ ಪ್ರಭಾವಿ ವ್ಯಕ್ತಿ, ರಾಜಕಾರಣಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆನ್ನಲಾಗಿದೆ.
ಪ್ರಕರಣದ ಆರೋಪಿ ರಾಜಶೇಖರ್ ರೆಡ್ಡಿ ಹಾಗೂ ಕುಂದಾಪುರ ಮೂಲದ ರವಿ ಎನ್ನುವರನ್ನು ಬಂಧಿಸಲಾಗಿದೆ. ಇಬ್ಬರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯಿದೆ. ಇವರಲ್ಲಿ ರಾಜಶೇಖರ್ ರೆಡ್ಡಿ ಪ್ರಕರಣದ ರುವಾರಿಯೆನ್ನಲಾದ ಹರೀಶ್ ರೆಡ್ಡಿ ಸೋದರ.
(ಆರೋಪಿ ರಾಜಶೇಖರ್ ರೆಡ್ಡಿ)
ಕೋಟ ಮಣೂರು ಲೋಹಿತ್ ಪೂಜಾರಿ ಮನೆ ಸಮೀಪ ಭರತ್ ಶ್ರೀಯಾನ್ ಹಾಗೂ ಯತೀಶ್ ಕಾಂಚನ್ ಎಂಬವರ ಹರೀಶ್ ರೆಡ್ಡಿ ಸಹೋದರರು ಹಾಗೂ ಸಹಚರರು ಕೊಚ್ಚಿ ಕೊಲೆ ಮಾಡಿದ್ದರು. ಜ.೨೬ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು ಬಳಿಕ ಆಪಾದಿತರು ನಾಪತ್ತೆಯಾಗಿದ್ದರು.
(ಕೊಲೆಯಾದ ಆಪ್ತಮಿತ್ರರು)
ಲೋಹಿತ್ ಪೂಜಾರಿ ಶನಿವಾರ ಮೆಹೆಂದಿ ಕಾರ್‍ಯಕ್ರಮ ಮುಗಿಸಿ ಮನೆಗೆ ಬರುತ್ತಿರುವಾಗ ತಮ್ಮ ಮೇಲೆ ಹಲ್ಲೆಗೆ ಸಂಚು ನಡೆದಿದೆ ಎನ್ನುವ ಅನುಮಾನದಲ್ಲಿ ಮನೆಗೆ ಬಂದ ನಂತರ ಭರತ್ ಹಾಗೂ ಯತೀಶ್ ಅವರಿಗೆ ಕರೆಮಾಡಿ ರಕ್ಷಣೆ ಮಾಡುವಂತೆ ವಿನಂತಿಸಿದ್ದ. ಅದರಂತೆಯೇ ಲೋಹಿತ್ ಮನೆಗೆ ಬಂದ ಇಬ್ಬರು ಆಪ್ತಮಿತ್ರರ ಮೇಲೆ ತಲವಾರು ದಾಳಿ ನಡೆಸಿ ಕೊಲ್ಲಲಾಗಿತ್ತು.
ಪ್ರಕರಣದ ಪ್ರಮುಖ ಆರೋಪಿ ಹರೀಶ್ ರೆಡ್ಡಿ, ಆತನ ಇನ್ನೋರ್ವ ಸಹೋದರ ಸೇರಿದಂತೆ ಇತರ ಸಹಚರರ ಬಂಧನಕ್ಕೆ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ತನಿಖಾ ತಂಡ ರಾತ್ರಿ ಹಗಲೆನ್ನದೆ ಶ್ರಮವಹಿಸುತ್ತಿದೆ.
ಇದನ್ನೂ ಓದಿರಿ:
ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)
ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)
ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು
ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ
ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ
ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!
ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್
ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)
ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!
Comments are closed.