ಕರಾವಳಿ

ಉತ್ತಮ ಆರೋಗ್ಯಕ್ಕೆ ಹೆಚ್ಚು ಸತ್ವಯುಕ್ತ ಆಹಾರ ಪದಾರ್ಥಗಳ ಪಟ್ಟಿ

Pinterest LinkedIn Tumblr

ಇಲ್ಲಿ ಕೆಲವು ಆಹಾರ ಪದಾರ್ಥಗಳ ಲಿಸ್ಟ್ ಇದೆ. ಇವುಗಳನ್ನು ನಮ್ಮ ಆರೋಗ್ಯಕ್ಕಾಗಿ ಹೆಚ್ಚು ಹೆಚ್ಚು ಸೇವಿಸಬೇಕಾಗಿದೆ. ಆದರೆ, ಈಗಿನ ಪ್ರಪಂಚದಲ್ಲಿ ಇವೆಲ್ಲ ತಿನ್ನುದಿರಲಿ, ಯೋಚಿಸಲು ಪುರುಸೊತ್ತಿಲ್ಲದ ಹಾಗೆ ಆಗಿದೆ ನಮ್ಮವರಿಗೆ. ಕೊನೆಪಕ್ಷ ಈಗಲಾದರೂ ಮನಸ್ಸು ಮಾಡಿ, ದಿಢೀರ್ ತಿಂಡಿಳನ್ನ ಬಿಟ್ಟು ಹೆಚ್ಚು ಸತ್ವಯುಕ್ತ ಆಹಾರಗಳನ್ನು ತಿಂದು ಆರೋಗ್ಯವಂತರಾಗಿರಿ.

1. ಕುಂಬಳಕಾಯಿ : ನಾರು ನಾರಾಗಿದ್ದು, ಇದರಿಂದ ರೋಗದ ಸೋಂಕಿನಿಂದ ರಕ್ಷಣೆ ಕೊಡೆವುದು.

2. ದಾಳಿಂಬೆ ಹಣ್ಣು : ಇದರಲ್ಲಿ ಉತ್ಕರ್ಷಣ ನಿರೋಧಕ ಶಕ್ತಿಯಿದ್ದು, ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.ಹಲ್ಲು ಮತ್ತು ಮೂಳೆಗಳು ಸದೃಡಕ್ಕಾಗಿ ದಿನ ಬಿಟ್ಟು ದಿನ ಮುಂಜಾನೆಯ ವೇಳೆಯಲ್ಲಿ, ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಹಣ್ಣನ್ನು ಸೇವಿಸುತ್ತಾ ಬಂದರೆ, ಹಲ್ಲು ಮತ್ತು ಮೂಳೆಗಳು ಸುದ್ರುಡ ಗೊಳ್ಳುತ್ತವೆ.

3. ಅರಿಶಿನ : ಇದರಲ್ಲಿ ಉರಿಯೂತ ತಡೆಯುವ ಶಕ್ತಿಯಿದ್ದು, ಕ್ಯಾನ್ಸರ್‌ ಬರದಿರಲು ತಡೆಗಟ್ಟುತ್ತದೆ.

4. ಸೀಬೆಹಣ್ಣು : ಸೀಬೆಹಣ್ಣು ಜೀರ್ಣಾಂಗ ವ್ಯವಸ್ಥೆಗೆ ಒಳ್ಲೆಯದ್ದು. ಹಾಗೆಯೇ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ ಮತ್ತು ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳುತ್ತದೆ.

5. ಎಲೆ ಕೋಸು : ಎಲೆ ಕೋಸಿನಲ್ಲಿ sulforaphane ಎಂಬ ರಾಸಾಯನಿಕವಿದ್ದು, ಇದು ಕ್ಯಾನ್ಸರ್‌ರನ್ನು ತಡೆಗಟ್ಟಲು ಹೆಚ್ಚು ಪರಿಣಾಮಕಾರಿ.

6. ಚಕ್ಕೆ : ಈ ಸೂಪರ್ ಮಸಾಲೆಯು ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬುನ್ನು ನಿಯಂತ್ರಿಸುತ್ತದೆ.

7. ಬೀಟ್ರೂಟ್ : ಫೋಲೇಟ್‌ನ ಸಮೃದ್ಧ ಮೂಲ ಬ್ರೀಟ್ರೂಟ್. ಇದು ನೈಸರ್ಗಿಕ ರೀತಿಯಲ್ಲಿ ಕ್ಯಾನ್ಸರ್ ತಡೆಗಟ್ಟವುದಾಗಿದೆ.

8. ರಾಗಿಯ ಗಂಜಿಯನ್ನು ನಿತ್ಯವೂ ಸೇವಿಸಿದರೆ ದೇಹ ತಂಪಾಗುತ್ತದೆ. ರಕ್ತವೃದ್ದಿಯಾಗುತ್ತದೆ.ಕ್ಯಾಲ್ಸಿಯಂ , ಖನಿಜಾಂಶಗಳು , ಪ್ರೊಟೀನ್ ಹೇರಳವಾಗಿರುವ ರಾಗಿ ಪೋಷಕಾಂಶಗಳ ಆಗರ . ಅಬಾಲವೃದ್ಧರಿಗೆ ಆದರ್ಶಪ್ರಾಯ ಆಹಾರ . ವೈದ್ಯರು ಕೊಡುವ ವಿಟಮಿನ್ ಮಾತ್ರೆಗಳನ್ನು ನುಂಗುವ ಬದಲು ರಾಗೀ ಗಂಜಿಯನ್ನು ನಿಯಮಿತವಾಗಿ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ . ಬಳಲಿಕೆ ಮಾಯವಾಗಿ ಶರೀರವೂ ಹಾಯೆನಿಸುವುದು . ಇದರಲ್ಲಿರುವ ಪೋಷಕಾಂಶಗಳು ಬಹು ಬೇಗನೆ ಜೀರ್ಣವಾಗುವಂಥವು . ಹಾಗಾಗಿ ಪುಟ್ಟ ಮಗುವಿಗೆ 6 ತಿಂಗಳಾದೊಡನೆ ರಾಗೀಮಣ್ಣಿ ಕೊಡಬಹುದಾಗಿದೆ .ರಾಗಿಯ ಸೇವನೆಯಿಂದ ಆರೋಗ್ಯರಾಗಿ ತಂಪು ಗುಣ ಹೊಂದಿರುವ ಸಾತ್ವಿಕ ಆಹಾರ. ಮುಖ್ಯವಾಗಿ ಇದು ಪಿತ್ತಹರ.

ಚಮಚ ರಾಗಿಹುಡಿಯನ್ನು 1 ಕಪ್ ನೀರಿನೊಂದಿಗೆ ಕುದಿಸಿ ರಾಗಿ ಗಂಜಿ ತಯಾರಿಸಿ.
1 ಚಮಚ ಬಾದಾಮ್ ಹುಡಿ ಸೇರಿಸಿ.
2 ಚಮಚ ಸಕ್ಕರೆ ಸೇರಿಸಿ.
1 ಕಪ್ ಬಿಸಿ ಹಾಲು ಸೇರಿಸಿ.
ಈಗ ಬಿಸಿಬಿಸಿ ರಾಗಿ ಪೆಯ ಸಿದ್ಧ. ಇದನ್ನು ನೀವೂ ಕುಡಿಯಿರಿ. ಮುದ್ದು ಮಕ್ಕಳಿಗೂ ಕುಡಿಸಿ. ವಯಸ್ಸಾದವರಿಗೂ ಹಿತಕರ.

ರಾಗೀ ಸೂಪ್ :
ಮೇಲೆ ಹೇಳಿದಂತೆ ರಾಗಿ ಗಂಜಿ ತಯಾರಿಸಿ.
1 ಈರುಳ್ಳಿ ಸಣ್ಣಗೆ ಹಚ್ಚಿ ತುಪ್ಪದಲ್ಲಿ ಹುರಿಯಿರಿ.
ರುಚಿಗೆ ಉಪ್ಪು, ಚಿಟಿಕೆ ಕಾಳುಮೆಣಸಿನ ಹುಡಿ ಸೇರಿಸಿ ಊಟಕ್ಕೆ ಮೊದಲು ಈ ರಾಗೀ ಸೂಪ್ ಸವಿಯಿರಿ.

ರಾಗಿ ಪಾನಕ :
1 ಚಮಚ ರಾಗಿ ಹುಡಿ.
1 ಚಮಚ ಬಾದಾಮ್ ಹುಡಿ.
3 ಚಮಚ ಸಕ್ಕರೆ.
1 ಚಿಟಿಕೆ ಏಲಕ್ಕಿ ಹುಡಿ.
1ದೊಡ್ಡ ಲೋಟ ನೀರು.
ಎಲ್ಲವನ್ನೂ ಚೆನ್ನಾಗಿ ಬೆರೆಸಿ 1ತುಂಡು ಐಸ್ ಹಾಕಿ ಕುಡಿಯಿರಿ, ಅಥವಾ ಫ್ರಿಜ್ ನಲ್ಲಿ ಅರ್ಧ ಗಂಟೆ ಇಟ್ಟು ಕುಡಿಯಿರಿ.
ವೈನ್ ತಯಾರಿಕೆಗೂ ಇದನ್ನು ಬಳಸುತ್ತಾರೆ.

9.ಗೋಧಿಯ ಪ್ರಯೋಜನಗಳು
ಗೋಧಿ ಸಾತ್ವಿಕ ಮತ್ತು ಪೌಷ್ಟಿಕ ಆಹಾರವಾಗಿದ್ದು ಅಕ್ಕಿಗಿಂತ ಉಷ್ಣ. ಗೋಧಿ ತರಿಯ ಗಂಜಿ ಮಧುಮೇಹ ರೋಗಿಗಳಿಗೆ ಒಳ್ಳೆಯದು.
ಗೋಧಿ ಹಿಟ್ಟಿನ ತಂಬಿಟ್ಟು ಸೇವಿಸಿದರೆ ಮೂಳೆಗಳು ಗಟ್ಟಿಯಾಗುತ್ತದೆ. ಸಂಧಿ ನೋವು ಕಡಿಮೆಯಾಗುತ್ತದೆ.

10.ಗಸಗಸೆ ಉಪಯೋಗಗಳು
1. ಗಸಗಸೆಯನ್ನು ಅರೆದು ಹಾಲಿನಲ್ಲಿ ಕುದಿಸಿ ಪಾಯಸದಂತೆ (ರುಚಿಗೆ ಸ್ವಲ್ಪ ಸಕ್ಕರೆ ಹಾಕಿಕೊಳ್ಳಬಹುದು) ಮಾಡಿ ಕುಡಿಯುವುದರಿಂದ ದೇಹ ತಂಪಾಗುತ್ತದೆ, ಮತ್ತು ನಿದ್ರೆಯೂ ಚೆನ್ನಾಗಿ ಬರುತ್ತದೆ.
2. ಒಣಕೊಬ್ಬರಿಯೊಂದಿಗೆ ಗಸಗಸೆಯನ್ನು ಜಗಿದು ತಿಂದರೆ ಬಾಯಿಯ ಹುಣ್ಣು ವಾಸಿಯಾಗುತ್ತದೆ.
3. ಗಸಗಸೆ ಆಹಾರಕ್ಕೆ ವಿಶಿಷ್ಟ ಪರಿಮಳ ನೀಡುತ್ತದೆ. ಇದು ಶೀತ ಗುಣವನ್ನು ಹೊಂದಿದೆ. ನಿದ್ರಾಜನಕವಾಗಿದೆ.

11.ಏಲಕ್ಕಿ ಉಪಯೋಗಗಳು
1. ತಲೆ ಸುತ್ತು, ಸುಸ್ತು, ಬಾಯಾರಿಕೆ ಉಂಟಾದಾಗ ನಿಂಬೆಯ ಶರಬತ್ತು ಮಾಡಿ ಅದಕ್ಕೆ 3 ಚಿಟಿಕೆ ಏಲಕ್ಕಿ ಬೆರೆಸಿ ಕುಡಿದರೆ ಕಡಿಮೆಯಾಗುತ್ತದೆ.
2. ಏಲಕ್ಕಿ ವಿಷಹರವಾಗಿದೆ. ಆದ್ದರಿಂದ ತಾತ್ಕಾಲಿಕ ಕ್ರಮವಾಗಿ ವಿಷ ಪ್ರಾಶನಕ್ಕೆ ಏಲಕ್ಕಿಯನ್ನು ಮನೆಮದ್ದಾಗಿ ಬಳಸಬಹುದು.
ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಏಲಕ್ಕಿ ಸಹಕಾರಿ
ಉಸಿರಾಟದಲ್ಲಿ ತಾಜಾತನ ಇರಬೇಕೆಂದರೆ ಏಲಕ್ಕಿಯನ್ನು ಅಗಿಯಬಹುದು. ಇದು ಶ್ವಾಸಕೋಶ ಸಂಬಂಧೀ ಕಾಯಿಲೆಗಳನ್ನೂ ನಿವಾರಿಸುವ ಶಕ್ತಿಯನ್ನು ಹೊಂದಿದೆ. ಮೂತ್ರಸಂಬಂಧಿಕಾಯಿಲೆಗಳನ್ನೂ ಇದು ನಿವಾರಿಸುವ ಶಕ್ತಿಯನ್ನು ಹೊಂದಿದೆ.
ಏಲಕ್ಕಿ ಚಹ ಸೇವಿಸುವುದರಿಂದ ಖಿನ್ನತೆ ಮಾಯವಾಗುತ್ತದೆಯಂತೆ! ಇದು ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ ಆಯುರ್ವೇದವಂತೂ ಇದನ್ನು ಒಪ್ಪಿಕೊಂಡಿದೆ.
ನೆಗಡಿ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಇದಕ್ಕಿದೆ.
ಸಂಶೋಧನೆಗಳ ಪ್ರಕಾರ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಲಕ್ಕಿಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿವೆ.
ಅತೀ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಏಲಕ್ಕಿ ಸಹಕಾರಿ
ಶ್ವಾಸಕೋಶದಲ್ಲಿ ನೋವುಂಟಾದರೆ ಏಲಕ್ಕಿ ಸೇವನೆಯಿಂದ ನಿವಾರಣೆಯಾಗುತ್ತದೆ.
ಆ್ಯಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ.
ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಇದು ತಡೆಗಟ್ಟುತ್ತದೆ. ರಕ್ತ ಸಂಚಾರ ಸರಾಗವಾಗಲು ಸಹಾಯಮಾಡುತ್ತದೆ.
ಹೃದಯದ ಆರೋಗ್ಯವನ್ನೂ ಸಮಸ್ಥಿತಿಯಲ್ಲಿಡಲು ಇದು ಸಹಕಾರಿ.
ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು.
ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.
ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದೂ ಸಂಶೋಧನೆಯಿಂದ ಸಾಬೀತಾಗಿದೆ.

Comments are closed.