ಕರಾವಳಿ

ಕಿವಿಗಳಲ್ಲಿ ಟಿನ್ನಿಟಸ್‌ ಕಾಯಿಲೆ ಉಂಟಾಗಲು ಮೂಲ ಕಾರಣ..ತಿಳಿಯಿರಿ.?

Pinterest LinkedIn Tumblr

ಕಿವಿಗಳಲ್ಲಿ ರಿಂಗಣಿಸುವಿಕೆಯು ಒಮ್ಮಿಂದೊಮ್ಮೆಗೆಯೇ ಆರಂಭವಾಗಬಹುದು ಅಥವಾ ಕಿವಿಯ ಪಕ್ಕದಲ್ಲಿಯೇ ಪಟಾಕಿ ಒಂದು ಸಿಡಿದಂತೆ ದೊಡ್ಡ ಸದ್ದು ಕೇಳಿಸಬಹುದು. ವೈದ್ಯಕೀಯವಾಗಿ ಇದಕ್ಕೆ ಟಿನ್ನಿಟಸ್‌ ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ನಾವು ಇದಕ್ಕೆ ಕಿವಿಯಲ್ಲಿ ರಿಂಗಣಿಸುವುದು ಅಥವಾ ಮೊರೆಯುವುದು ಎಂದು ಹೇಳುತ್ತೇವೆ. ಈ ಟಿನ್ನಿಟಸ್‌ ಅಥವಾ ರಿಂಗಣಿಸುವುದರ ಹಿಂದೆ ಹಲವಾರು ಮಿಥ್ಯೆಗಳು ಮತ್ತು ವಾಸ್ತವಗಳು ಇವೆ. ಕೆಳಗೆ ನೀಡಲಾಗಿರುವ ಕೆಲವು ವಾಸ್ತವ‌ ಅಂಶಗಳ ಮೂಲಕ ನಾವು ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು.

1.ಟಿನ್ನಿಟಸ್‌ ಎನ್ನುವುದು ಒಂದು ಕಾಯಿಲೆಯೇ?
ಅಲ್ಲ, ಟಿನ್ನಿಟಸ್‌ ಅನ್ನುವುದು ಕಿವಿಯಲ್ಲಿ ಇರಬಹುದಾದ ಅನೇಕ ಕಾಯಿಲೆಗಳ ಒಂದು ಚಿಹ್ನೆಯಷ್ಟೆ ಹೊರತು, ದೇಹದ ಯಾವುದಾದರೂ ಒಂದು ಭಾಗದಲ್ಲಿ ಇರುವ ಸೋಂಕು ದೇಹದ ತಾಪಮಾನ ಹೆಚ್ಚಿಸಿದ ಹಾಗೆ ಇಡೀಯ ದೇಹಕ್ಕೆ ಹರಡಿಕೊಳ್ಳುವ ಹಾಗೆ, ಇದೇ ಒಂದು ಸ್ವತಂತ್ರ ಕಾಯಿಲೆ ಅಲ್ಲ.

2.ಟಿನ್ನಿಟಸ್‌ ಅನ್ನುವುದು ಒಂದು ಸಾಮಾನ್ಯ ಸಮಸ್ಯೆಯೇ?
ಹೌದು, ಸಾಮಾನ್ಯವಾಗಿ ಎಲ್ಲರಿಗೂ ಒಂದು ಬಾರಿ ಅಥವಾ ಕೆಲವರಿಗೆ ಆಗಾಗ ಅಲ್ಪಾವಧಿಗೆ ಕಿವಿಯಲ್ಲಿ ಸಣ್ಣಗೆ ಮೊರೆಯುವಂತಹ ಅನುಭವ ಆಗಬಹುದು. ಆದರೆ ಕೆಲವರನ್ನು ಎಡೆಬಿಡದೆ ಕಾಡುವ ಟಿನ್ನಿಟಸ್‌ ಕಿರಿಕಿರಿ ಉಂಟು ಮಾಡಬಹುದು. ಸುಮಾರು ಮೂರನೆ ಒಂದರಷ್ಟು ವಯಸ್ಕರು ತಮ್ಮ ಜೀವಿತಾವಧಿಯಲ್ಲಿ ಕೆಲವು ಬಾರಿಯದರೂ ಟಿನ್ನಿಟಸ್‌ ಅನ್ನು ಅನುಭವಿಸಿರುತ್ತಾರೆ. ಸುಮಾರು 10%-15% ನಷ್ಟು ವಯಸ್ಕರಿಗೆ ಸುದೀರ್ಘ‌ ಅವಧಿಯ ಟಿನ್ನಿಟಸ್‌ ಇರುತ್ತದೆ ಮತ್ತು ಅದಕ್ಕೆ ವೈದ್ಯಕೀಯ ವಿಶ್ಲೇಷಣೆಯ ಆವಶ್ಯಕತೆ ಇರುತ್ತದೆ. ಈ ಹಿಂದೆಯೇ ತಿಳಿಸಿದಂತೆ, ಕಿವಿಯಲ್ಲಿ ಇರುವ ಅನೇಕ ಸಮಸ್ಯೆಗಳ ಕಾರಣದಿಂದ ಟಿನ್ನಿಟಸ್‌ ಬರಬಹುದು. ಅದರೆ ಕೆಲವು ವ್ಯಕ್ತಿಗಳಲ್ಲಿ ಇರುವಂತಹ ನಿಖರ ಕಾರಣ ಏನು ಎಂಬುದು ಹೆಚ್ಚಾಗಿ ಗುರುತಿಸಲು ಅಸಾಧ್ಯ ಎನ್ನುವ ರೀತಿಯಲ್ಲಿರುತ್ತದೆ.

3. ಟಿನ್ನಿಟಸ್‌ ಉಂಟಾಗಲು ಕಾರಣವೇನು?
ಟಿನ್ನಿಟಸ್‌ ರೋಗಿಗಳಲ್ಲಿ ಎರಡು ವರ್ಗದ ಜನರು ಸಿಗುತ್ತಾರೆ. ಹೆಚ್ಚು ಸಾಮಾನ್ಯ ವರ್ಗದವರು ಅಂದರೆ ಶ್ರವಣ ನಷ್ಟವಾಗಿರುವವರು ಅಥವಾ ಕಿವುಡುತನ ಇರುವವರು, ಅಂದರೆ ಒಳಕಿವಿಗಳ ಜೀವಕೋಶಗಳ ಹಾನಿ, ಜಖಂ ಅಥವಾ ಕಿವಿಯ ಒಳಭಾಗದ ನರಗಳಿಗೆ ಹಾನಿಯಾಗಿರುವ ಪರಿಸ್ಥಿತಿ ಇರುವವರು. ಸಾಮಾನ್ಯವಾಗಿ ವಯಸ್ಸಿಗೆ ಸಂಬಂಧಿಸಿದ ಕಿವುಡುತನ, ದೊಡ್ಡ ಶಬ್ದಕ್ಕೆ ಒಡ್ಡಿಕೊಂಡಿರುವ ಕಾರಣಕ್ಕೆ ಈ ರೀತಿ ಆಗುತ್ತದೆ. ಕೆಲವು ಔಷಧಿಗಳು ಸಹ ಟಿನ್ನಿಟಸ್‌ ಅನ್ನು ಉಂಟು ಮಾಡಬಹುದು ಅಥವಾ ಇರುವ ಟಿನ್ನಿಟಸ್‌ ತೊಂದರೆಯನ್ನು ಹೆಚ್ಚಿಸಬಹುದು. ಅವುಗಳೆಂದರೆ: ಆಂಟಿಬಯಾಟಿಕ್‌ಗಳು, ಕ್ಯಾನ್ಸರ್‌ ಔಷಧಿಗಳು, ವಾಟರ್‌ ಪಿಲ್‌ಗ‌ಳು(ಡೈಯುರೇಟಿಕ್ಸ್‌), ಕ್ವಿನೈನ್‌ ಔಷಧಿಗಳು, ಕೆಲವು ರೀತಿಯ ಶಾಮಕಗಳು, ಆಸ್ಪಿರಿನ್‌ ಇತ್ಯಾದಿ. ಟಿನ್ನಿಟಸ್‌ ಇರುವ ಇನ್ನೊಂದು ವರ್ಗದ ಜನರಲ್ಲಿ, ಈ ತೊಂದರೆ ಗಮನಾರ್ಹ ರೀತಿಯಲ್ಲಿ ಇರುವುದಿಲ್ಲ, ಆದರೂ ಅವರಿಗೆ ಟಿನ್ನಿಟಸ್‌ ಅನುಭವಾಗುತ್ತಿರುತ್ತದೆ. ಅಂದರೆ ಅವರ ಕಿವಿಯ ವಿಶೇಷ ಕೇಂದ್ರಗಳಲ್ಲಿನ ಕಾರ್ಯಶೀಲತೆಯು ಅಸಮರ್ಪಕವಾಗಿರುವ ಕಾರಣ ಅವರಲ್ಲಿ ಈ ಅಸಹಜತೆ ಕಾಣಿಸಿಕೊಂಡಿರುತ್ತದೆ.

4. ಟಿನ್ನಿಟಸ್‌ ಜೀವನ ಗುಣಮಟ್ಟಕ್ಕೆ ಹೇಗೆ ಬಾಧೆಯನ್ನುಂಟು ಮಾಡುತ್ತದೆ?
ಟಿನ್ನಿಟಸ್‌ ಅನ್ನುವುದು ವ್ಯಕ್ತಿಗಳನ್ನು ವಿವಿಧ ರೂಪದಲ್ಲಿ ಬಾಧಿಸಬಹುದು. ಟಿನ್ನಿಟಸ್‌ ಇದ್ದಲ್ಲಿ, ನಿಮಗೂ ಸಹ ಆಯಾಸ, ಒತ್ತಡ, ನಿದ್ರಿಸಲು ತೊಂದರೆ ಆಗುವುದು, ಏಕಾಗ್ರತೆಯ ತೊಂದರೆ, ನೆನಪಿನ ತೊಂದರೆ, ಖನ್ನತೆ, ಆತಂಕ ಮತ್ತು ಕಿರಿಕಿರಿಯಂತಹ ಅನುಭವಗಳಾಗಬಹುದು.

5.ಟಿನ್ನಿಟಸ್‌ನ ತೀವ್ರತೆಯನ್ನು ತಗ್ಗಿಸಲು ಏನು ಮಾಡಬಹುದು?
ದೊಡª ಶಬ್ದಗಳಿಗೆ ಕಿವಿಗಳನ್ನು ಒಡ್ಡಿಕೊಳ್ಳುವುದರಿಂದ ತಪ್ಪಿಸಿಕೊಳ್ಳಿ, ಉಪ್ಪು$ ಮತ್ತು ಪ್ರೇರಕಗಳ ಸೇವನೆಯನ್ನು ತಗ್ಗಿಸಿಕೊಳ್ಳಿ. ಕಾಫಿ, ಚಹಾ ಕೋಲಾ ಮತ್ತು ಅಧಿಕ ತಂಬಾಕು ಸೇವನೆಯೂ ಸಹ ಟಿನ್ನಿಟಸ್‌ ತೊಂದರೆಯನ್ನು ಕೆರಳಿಸುತ್ತದೆ. ನಿತ್ಯವೂ ವ್ಯಾಯಾಮ ಮಾಡಲು ಪ್ರಯತ್ನಿಸಿ, ನಿಶ್ಯಕ್ತಿಯನ್ನು ಕಡಿಮೆ ಮಾಡಲು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಿ ಮತ್ತು ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳುವ ಸಂದರ್ಭ ಇದ್ದಲ್ಲಿ ಕಿವಿಗಳಿಗೆ ಸೂಕ್ತ ಸಂರಕ್ಷಕಗಳನ್ನು ಧರಿಸಿ ಮತ್ತು ಆಗಬಹುದಾದ ಆಘಾತಗಳನ್ನು ತಗ್ಗಿಸಿಕೊಳ್ಳಿ.

6.ಕೆಲವು ಚಿಕಿತ್ಸಾ ಆಯ್ಕೆಗಳು ಯಾವುವು?
ಆಡಿಯೋಲಾಜಿಸ್ಟ್‌ಗಳು ಅಂದರೆ ನುರಿತ ಶ್ರವಣ ತಜ್ಞರು. ಇವರು ಟಿನ್ನಿಟಸ್‌ಗೆ ಕೆಲವು ರೀತಿಯ ಛೇದನಾ-ರಹಿತ ಚಿಕಿತ್ಸೆಗಳನ್ನು ಸೂಚಿಸುತ್ತಾರೆ. ಅವುಗಳೆಂದರೆ ಸೌಂಡ್‌ ಥೆರಪಿಗಳು ಅಂದರೆ ಮಾಸ್ಕಿಂಗ್‌, ಖೀಖಖೀ (ಟಿನ್ನಿಟಸ್‌ ರಿಟ್ರೆ„ನಿಂಗ್‌ ಥೆರಪಿ). ಟಿನ್ನಿಟಸ್‌ ಮತ್ತು ಕಿವುಡುತನ ಇರುವ ವ್ಯಕ್ತಿಗಳು ಉಭಯ ಉದ್ದೇಶಗಳನ್ನು ಪೂರೈಸುವ ಶ್ರವಣ ಸಾಧನಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಈ ಸಾಧನಗಳು ಕೇಳಿಸಿಕೊಳ್ಳುವಿಕೆಯನ್ನು ಉತ್ತಮಪಡಿಸುವುದಷ್ಟೇ ಅಲ್ಲದೆ ಟಿನ್ನಿಟಸ್‌ಗೆ ಪರಿಹಾರವನ್ನೂ ಸಹ ನೀಡುತ್ತವೆ. ಔಷಧಿ ಚಿಕಿತ್ಸೆ ಎನ್ನುವುದು ಇನ್ನೊಂದು ರೀತಿಯ ಚಿಕಿತ್ಸಾ ಕ್ರಮ, ಆದರೆ ಪ್ರಸ್ತುತ ಅವು ಇನ್ನೂ ಸುಧಾರಿತವಲ್ಲದವುಗಳಾಗಿರುವ ಕಾರಣ ಅವುಗಳ ಯಶಸ್ಸಿನ ದರವು ಬಹಳ ಕಡಿಮೆ ಇದೆ.

Comments are closed.