ಕರಾವಳಿ

ಬೆಂಗರೆ ಕಳ್ಳತನ ಪ್ರಕರಣ : ನಗ,ನಗದು ಸಹಿತಾ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.19: ನಗರದ ಬೆಂಗರೆ ಪ್ರದೇಶದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪಣಂಬೂರು ಪೊಲೀಸರು ಆರೋಪಿಯ ವಶದಿಂದ ನಗ-ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ತೋಟಬೆಂಗರೆ ನಿವಾಸಿ ದೀಕ್ಷಿತ್ ನಾಯಕ್ (20) ಎಂದು ಗುರುತಿಸಲಾಗಿದೆ.

ಬೆಂಗರೆ ಗ್ರಾಮದ ಸ್ಯಾಂಡ್ಸ್ ಫಿಟ್ ಬೆಂಗರೆ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಗೀತಾಂಜಲಿ ಎಂಬವರ ಮನೆಯಿಂದ ದಿನಾಂಕ: 05-02-2019 ರಿಂದ 14-02-2019ರ ಅವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಮಾಡಿನ ಹಂಚು ತೆಗೆದು ಕಳವುಗೈಯಲಾಗಿತ್ತು. ಕಳ್ಳರು ಒಳಪ್ರವೇಶಿಸಿ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯಿಂದ ಎರಡು ಚಿನ್ನದ ಉಂಗುರ, ಬೆಳ್ಳಿಯ ಆಭರಣಗಳು, ಟಾರ್ಚ್‌ಲೈಟ್, ಎಂಟು ಸಾವಿರ ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಪಿಎಸ್ಸೈ ಉಮೇಶ್‌ಕುಮಾರ್ ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು

Comments are closed.