ಸಾಮಾನ್ಯವಾಗಿ ತಿಂದ ಆಹಾರವನ್ನು ಸುಲಭವಾದ ರೀತಿಯಲ್ಲಿ ಕರಗಿಸುವ ಕ್ರಿಯೆಯನ್ನು ಮಾಡುತ್ತದೆ. ಆದರೆ .ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಅಧಿಕವಾಗಿ ಆಮ್ಲ ಸ್ರವಿಕೆಯನ್ನು ಅಸಿಡಿಟಿ ಎಂದು ಕರೆಯಲಾಗಿದೆ.
ಅಸಿಡಿಟಿಯ ಲಕ್ಷಣಗಳು:
1. ಹೊಟ್ಟೆಯಲ್ಲಿ ಉರಿತದ ಅನುಭವ
2. ಎದೆಯ ಭಾಗದಲ್ಲಿ ಉರಿಯಾಗುವುದು
3. ಹುಳಿಯಾದ ದ್ರವ ಬಾಯಲ್ಲಿ ತುಂಬಿಕೊಳ್ಳುವುದು
4. ಹುಳಿತೇಗಿನಿಂದ ವಾಂತಿಯಾಗುವುದು
5. ಉಸಿರಾಟದ ತೊಂದರೆ ಉಂಟಾಗುವುದು
6. ಹೊಟ್ಟೆ ತುಂಬಿದ ಅನುಭವ
7. ಹೊಟ್ಟೆಯಲ್ಲಿ ಗ್ಯಾಸ್ ತುಂಬಿದ ಅನುಭವ ಹಾಗೂ ತೇಗುವುದು
8. ತಲೆ ನೋವು ಬರುತ್ತದೆ
9. ಆಯಾಸ
ಅಸಿಡಿಟಿಗೆ ಕಾರಣಗಳು:
1. ಸರಿಯಾದ ಊಟದ ಆಯ್ಕೆ ಹಾಗೂ ಕ್ರಮ ಇಲ್ಲದಿರುವುದು
2. ಜೀವನ ಕ್ರಮ ಸರಿಯಾಗಿಲ್ಲದಿರುವುದು
3. ಅತಿಯಾದ ಕಾಫಿ, ಟೀ ಸೇವನೆ ಮಾಡುವುದು
4. ಅತಿ ಖಾರದ ಖಾದ್ಯ ಸೇವನೆ
5. ಯಾವಾಗ ಬೇಕೆಂದರೆ ಅಥವಾ ಯಾವಾಗಲೂ ತಿನ್ನುವುದು
6. ಸರಿಯಾಗಿ ಬೇಯಿಸದ ಅಥವಾ ಹಳಸಿದ ಪದಾರ್ಥಗಳನ್ನು ತಿನ್ನುವುದು
7. ಸರಿಯಾಗಿ ನಿದ್ದೆ ಮಾಡದಿರುವುದು
8. ತಂಬಾಕು, ಸಿಗರೇಟು ಹಾಗೂ ಮದ್ಯ ಸೇವನೆಯಿಂದ
9. ದೇಹದ ಅತಿಯಾದ ತೂಕ
10. ಸರಿಯಾಗಿ ಆಹಾರವನ್ನು ಜಗಿದು ಸೇವಿಸದೇ ಇರುವುದರಿಂದ
11. ಉಪವಾಸ ಅಥವಾ ಆಹಾರ ಸೇವನೆಯನ್ನು ಮುಂದೂಡುವುದು
ಅಸಿಡಿಟಿ ನಿಯಂತ್ರಣಕ್ಕೆ ಮಾರ್ಗೋಪಾಯಗಳು:
1. ಮುಂಜಾನೆ ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ನಿಂಬೆ ಹಣ್ಣಿನ ರಸ ಬೆರಸಿದ ಬಿಸಿ ನೀರನ್ನು ಕುಡಿಯುವುದು. ಇದರಿಂದ ನಿಮ್ಮ ಹೊಟ್ಟೆ ಶುಚಿಯಾಗುವುದು ಹಾಗೂ ಅಧಿಕ ತೂಕ ನಿಯಂತ್ರಣವಾಗುವುದು.
2. ಅತಿ ಖಾರದ, ಅತಿ ಎಣ್ಣೆಯ ಹಾಗೂ ರಸ್ತೆ ಬದಿಯ ಫಾಸ್ಟ್ ಫುಡ್ ಗಳನ್ನು ಸೇವಿಸದೇ ಇರುವುದು.
3. ಮನಸ್ಸನ್ನು ಉಲ್ಲಾಸ ಭರಿತವಾಗಿ ಇರಿಸಿಕೊಳ್ಳುವುದು
4. ಮುಂಜಾನೆಯ ಉಪಹಾರನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
5. ಆಹಾರವನ್ನು ಚೆನ್ನಾಗಿ ಜಗಿದು ಆಸ್ವಾದಿಸಿಸುತ್ತಾ ತಿನ್ನಬೇಕು. ಇದರಿಂದ ಲಾಲಾರಸ, ಪಿತ್ತ ರಸದ ಉತ್ಪಾದನೆ ಸರಿಯಾದ ಕ್ರಮದಲ್ಲಿ ಆಗುತ್ತದೆ.
6. ಹೆಚ್ಚಾಗಿ ನಾರು ಬೆರತ ಸೊಪ್ಪು ತರಕಾರಿ ಹಣ್ಣುಗಳ ಸೇವನೆ ಮಾಡಬೇಕು
7. ಕಾಫಿ, ಟೀ ಸೇವನೆಯನ್ನು ಕಡಿಮೆ ಮಾಡುವುದು.
8. ಆಹಾರ ಸೇವಿಸಿ ಕೂಡಲೇ ನಿದ್ದೆ ಮಾಡಬಾರದು.
9. ಆಹಾರ ಸೇವಿಸಿ ನಂತರ 30 ನಿಮಿಷದ ನಂತರ ಹೆಚ್ಚಾಗಿ ನೀರು (ಬಿಸಿ) ಕುಡಿಯಬೇಕು.
10. ಆಹಾರ ಸೇವಿಸುವ ಒಂದು ಗಂಟೆಯ ಮೊದಲು ಒಂದು ಗ್ಲಾಸ್ ನೀರು ಕುಡಿಯಬೇಕು.
11. ಮಾಂಸಾಹಾರವನ್ನು ಸೇವಿಸಿದ್ದರೆ ತಪ್ಪದೇ ಬಿಸಿ ನೀರನ್ನು ಕುಡಿಯ ಬೇಕು.
12. ಹೆಚ್ಚುಕಾಲ ಹಸಿದಿರುವುದು
13. ಟೊಮೆಟೋ, ಚಾಕೋಲೇಟ್ ಸೇವನೆ ಕಡಿಮೆ ಮಾಡುವುದು
14. ಮಲಗುವ ಮುಂಚೆ ತಣ್ಣನೆಯ ಹಸುವಿನ ಹಾಲನ್ನು ಕುಡಿಯುವುದು.
15. ಶುಂಠಿಯನ್ನು ಜಗಿಯುವುದು ಅಥವಾ ಆಹಾರದಲ್ಲಿ ಬೆರೆಸಿ ಸೇವಿಸುವುದು
16. ಸೀಬೆ ಹಣ್ಣಿನ ಸೇವನೆಯಿಂದ ಅಸಿಡಿಟಿ ನಿಯಂತ್ರಿಸಬಹುದು
ಅಸಿಡಿಟಿ ನಿಯಂತ್ರಣಕ್ಕೆ ಯೋಗ ಮತ್ತು ಪ್ರಾಣಾಯಾಮಗಳು:
1. ನಿಯಮಿತವಾದ ವಾಯುವಿಹಾರ
2. ಹಾಲಾಸನ
3. ಉಷ್ಟ್ರಾಸನ
4. ವಜ್ರಾಸನ
5. ಪವನ ಮುಕ್ತಾನಸ
6. ಅನುಲೋಮ ವಿಲೋಮ ಪ್ರಾಣಾಯಮ
7. ಭಸ್ತ್ರಿಕಾ ಪ್ರಾಣಾಯಾಮ
8. ಕಪಾಲಭಾತಿ ಪ್ರಾಣಾಯಾಮ
Comments are closed.