ಕರಾವಳಿ

ನಿಂಬೆಹಣ್ಣಿನ ಮಹತ್ವ ಹಾಗೂ ಅದರ ಉಪಯೋಗಗಳು

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಮಾಮೂಲಿಯಾಗಿ ಕಾಣಿಸಿಕೊಳ್ಳುವ ಕೆಲವು ಸಮಸ್ಯೆಗಳೆಂದರೆ ಗ್ಯಾಸ್ಟ್ರಿಕ್, ಬೊಜ್ಜು ಹಾಗೂ ಹೆಚ್ಚಾದ ದೇಹದ ತೂಕದ ಸಮಸ್ಯೆಗಳು. ಇವುಗಳಿಂದ ಇನ್ನೂ ಅನೇಕ ಕಾಯಿಲೆಗಳು ದೇಹದಲ್ಲಿ ನೆಲೆಸಲು ಅವಕಾಶಗಳು ಹೆಚ್ಚಾಗಿರುತ್ತವೆ. ಪ್ರತಿದಿನ ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಅರಿವಿಲ್ಲದೆ ಸಿಕ್ಕಿದ್ದನ್ನೆಲ್ಲ ತಿನ್ನುವ ಬಾಯಿಚಪಲ. ಇದರಿಂದ ದೇಹದಲ್ಲುಂಟಾಗುವ ಅನೇಕ ಬದಲಾವಣೆಗಳು ಅನೇಕ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತವೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೆಲ್ಲ ಆಸ್ಪತ್ರೆ ಮೆಟ್ಟಿಲೇರಲಾಗುವುದಿಲ್ಲ. ಮನೆಯಲ್ಲಿಯೇ ಅವುಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಿಂಬೆಹಣ್ಣು ಅನೇಕ ಕಾಯಿಲೆಗಳಿಗೆ ಒಂದು ಉತ್ತಮ ಮನೆಮದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಂಬೆಹಣ್ಣಿನ ಮಹತ್ವ ಹಾಗೂ ಅದರ ಉಪಯೋಗಗಳ ಬಗ್ಗೆ ತಿಳಿದುಕೊಂಡಿರುವುದು ಒಳಿತು.

ಏಕೆಂದರೆ ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಮನೆಯಲ್ಲಿಯೇ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು. ನಿಂಬೆ ರಸವು ಶೇಕಡ 5 ರಷ್ಟು ಸಿಟ್ರಿಕ್ ಎಂಬ ಹುಳಿಯನ್ನು ಒಳಗೊಂಡಿದ್ದು ಇದು ನಿಂಬೆಗೆ ಅದ್ಭುತ ರುಚಿಯನ್ನು ನೀಡಿದೆ. ಅದೂ ಅಲ್ಲದೆ ನಿಂಬೆ ತನ್ನಲ್ಲಿ ವಿಟಮಿನ್ ‘ಸಿ’ ಅಂಶವನ್ನು ಹೇರಳವಾಗಿ ಪಡೆದುಕೊಂಡಿದೆ. ಲಿಂಬೆ ರಸವನ್ನು ಜ್ಯೂಸ್ ಮಾಡಿ ಪ್ರತಿದಿನ ಮುಂಜಾನೆ ಕುಡಿಯುವುದರಿಂದ ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ನಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಹಲವಾರು ವಿಧದ ಖಾಯಿಲೆಗಳು ತಟ್ಟನೆ ಮಾಯವಾಗುತ್ತವೆ. ಇದು ವಾಕರಿಕೆ, ಎದೆಯುರಿಗೆ ಉತ್ತಮ ಔಷಧವಾಗಿದೆ. ನಿಂಬೆಯ ಜೀರ್ಣಕ್ರಿಯೆ ಗುಣಗಳಿಂದಾಗಿ, ಅಜೀರ್ಣದ ಲಕ್ಷಣಗಳಾದಂತಹ ಎದೆಯುರಿ, ಹೊಟ್ಟೆ ಉಬ್ಬರ ಮತ್ತು ತೇಗು ಮಾಯವಾಗುತ್ತದೆ. ನಿಂಬೆ ರಸವನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ, ಕರುಳು ಬೇಡವಾದ ಉತ್ಪನ್ನಗಳನ್ನು ಸುಲಭವಾಗಿ ಹೊರಹಾಕುತ್ತದೆ. ಗಂಟಲಿನ ಹಲವಾರು ತೊಂದರೆಗಳಿಗೆ ನಿಂಬೆ ರಸವು ರಾಮಬಾಣ. ಒಡೆದ ಗಂಟಲು ಹಾಗೂ ಬ್ಯಾಕ್ಟೀರಿಯಾ ಅಂಶಗಳನ್ನು ಹೊಂದಿರುವ ಗ್ರಂಥಿಯ ಉರಿಯೂತಕ್ಕೂ ಇದು ಉತ್ತಮ ಔಷಧವಾಗಿದೆ.

ನಿಂಬೆಹಣ್ಣಿನಿಂದಾಗುವ ಆರೋಗ್ಯಕರ ಲಾಭಗಳು
* ಕಿಡ್ನಿಯಲ್ಲಿನ ಹರಳುಗಳನ್ನು ತೆಗೆಯಲು ಇದು ಸಹಾಯಕಾರಿ
* ಸಕ್ಕರೆ ಮತ್ತು ರಕ್ತದೊತ್ತಡ ಕಾಪಾಡುವ ಸಾಮಥ್ರ್ಯವಿದೆ
* ಕಣ್ಣಿನ ಸಮಸ್ಯೆಗೆ ಉಪಯುಕ್ತವಾಗಿದೆ.
* ಕ್ಯಾನ್ಸರ್ ರೋಗ ಗುಣಪಡಿಸುವ ಅಂಶ ನಿಂಬೆಹಣ್ಣಿನಲ್ಲಿದೆ
* ನಿಂಬೆಹಣ್ಣಿನ ರಸದ ಸೇವನೆಯಿಂದ ಬೊಜ್ಜು ಕರಗಿಸಬಹುದು
* ನಿಂಬೆರಸ ಪರಿಣಾಮಕಾರಿ ಪಿತ್ತವನ್ನು ದೂರ ಮಾಡುತ್ತದೆ
* ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ.
* ಹೃದಯ, ಹೊಟ್ಟೆಯ ಒಳ ಭಾಗಗಳನ್ನು ಶುದ್ಧೀಕರಿಸಬಲ್ಲದು
* ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯಿದೆ. ಇದು ಕ್ಯಾನ್ಸರನ್ನು ತಡೆಗಟ್ಟಬಲ್ಲದು.
* ನೆಗಡಿ, ಫ್ಲೂ ಜ್ವರಗಳನ್ನು ನಿಯಂತ್ರಿಸಬಲ್ಲದು
* ಬೆಳಗ್ಗೆ ನೀರಿನಲ್ಲಿ ನಿಂಬೆರಸವನ್ನು ಸೇವಿಸಿದರೆ ಲಿವರ್ ಶುದ್ಧೀಕರಿಸುವ ವಿಶೇಷ ಶಕ್ತಿ ಇದಕ್ಕಿದೆ.

ಹಲ್ಲಿನ ರಕ್ಷಣೆಗೆ:
ಹಲ್ಲಿನ ರಕ್ಷಣೆಯಲ್ಲೂ ನಿಂಬೆಯ ರಸ ಪರಿಣಾಮ ಕಾರಿಯಾದುದು. ಹಲ್ಲುನೋವಿನ ಭಾಗದಲ್ಲಿ ಇದರ ರಸವನ್ನು ಲೇಪಿಸುವುದರಿಂದ, ಹಲ್ಲುನೋವಿನ ಬಾಧೆಯಿಂದ ಕೂಡಲೇ ನೀವು ಉಪಶಮನವನ್ನು ಪಡೆಯುವಿರಿ. ದವಡೆಯಿಂದ ರಕ್ತಒಸರುವ ಸಮಸ್ಯೆಗೂ ಇದು ಉತ್ತಮವಾದುದು. ಮತ್ತು ಬಾಯಿಯ ವಾಸನೆಯನ್ನು ಹೋಗಲಾಡಿಸಿ ಉಸಿರನ್ನು ತಾಜಾತನದಿಂದಿರಿಸುತ್ತದೆ. ಹಳದಿಯಾಗಿ ಕಾಣುವ ಹಲ್ಲುಗಳನ್ನು ನಿಂಬೆ ಜ್ಯೂಸ್‍ನಿಂದ ಬಾಯಿ ಮುಕ್ಕಳಿಸುವುದರಿಂದ ಹೊಳಪಾಗಿಸಬಹುದು.

ಚರ್ಮದ ಕಾಂತಿಗೆ :
ಚರ್ಮದ ಹಲವಾರು ಬಗೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಿಂಬೆ ಬಹುಪ್ರಯೋಜನಕಾರಿ. ಇದು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಉತ್ತಮ ಪ್ರಭಾವವನ್ನು ಬೀರುತ್ತದೆ. ಲಿಂಬೆ ರಸದಿಂದ ಮುಖವನ್ನು ಪ್ರತಿನಿತ್ಯ ತೊಳೆಯುವುದರಿಂದ ಮುಖದ ಕಾಂತಿ ವೃದ್ಧಿಸುತ್ತದೆ.

Comments are closed.