ಜೀವನದಲ್ಲಿ ಅತಿ ದೊಡ್ಡ ವರ ಅಥವಾ ಸುಖ ಎಂದರೆ ಆರೋಗ್ಯಪೂರ್ಣವಾದ ಅಲೋಚನೆ. ಈ ಸುಂದರವಾದ ಜೀವನವನ್ನು ಅನುಭವಿಸಲು ಇದು ಅತೀ ಮುಖ್ಯ. ಪ್ರಕೃತಿ ನಮಗೆ ಬೇಕಾಗಿರುವ ಎಲ್ಲವನ್ನೂ ಕೊಟ್ಟಿದೆ. ಆರೋಗ್ಯಕರವಾದ ನೀರು, ಆಹಾರ, ಸರಳ, ಸುಂದರ ಜೀವನ ಶೈಲಿ ಇತ್ಯಾದಿ. ಆದರೆ, ನಮ್ಮದೇ ಕೆಟ್ಟ ಅಲೋಚನೆಗಳಿಂದಾಗಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡುತ್ತಿದ್ದೆವೆ.ಅದಕ್ಕಾಗಿ ಇನ್ನೂ ಮುಂದೆ ನಮ್ಮಿಂದ ಯಾವುದೇ ತಪ್ಪುಗಳು ನಡೆಯದಂತೆ ನಾವೇ ಜಾಗರೂಕರಾಗಿರಿ ಹಾಗೂ ಸದಾ ಇದನ್ನ ನೆನಪಿಟ್ಟುಕೊಳ್ಳಿ….
ಗೌರವಿಸಬೇಕಾದ ಮೂರು ವಿಷಯಗಳು
ತಾಯಿ,
ತಂದೆ,
ಗುರು.
ಜಾಗ್ರತೆ ವಹಿಸಬೇಕಾದ ಮೂರು ವಿಷಯಗಳು
ಪತ್ನಿ
ಐಶ್ವರ್ಯ,
ಬುದ್ಧಿವಂತಿಕೆ
ಮರೆಯಬಾರದ ಮೂರು ವಿಷಯಗಳು
ಸಾಲ,
ಕರ್ತವ್ಯ,
ಖಾಯಿಲೆ
ನಿಯಂತ್ರಣದಲ್ಲಿಡಬೇಕಾದ ಮೂರು ವಿಷಯಗಳು
ಆಸೆ,
ನಾಲಿಗೆ,
ಕಾಮ
ಸಂತೋಷಕ್ಕಾಗಿ ಬಿಡಬೇಕಾದ ಮೂರು ವಿಷಯಗಳು
ಕೋಪ,
ಅಸೂಯೆ
ಮತ್ಸರ
ದೂರವಿಡಬೇಕಾದ ಮೂರು ವಿಷಯಗಳು
ಕೆಟ್ಟವರ ಸಹವಾಸ,
ಸ್ವಾರ್ಥ
ದುರಾಳತನ
ಸಮೃದ್ಧಿ ಹೊಂದುವ ಮೂರು ವಿಷಯಗಳು
ದೇವರು,
ವಿದ್ಯೆ,
ಕಠಿಣ ಪರಿಶ್ರಮ
ಎಲ್ಲರೂ ಕಾಯಬೇಕಾದ ಮೂರು ವಿಷಯಗಳು
ಸಮಯ,
ಸಾವು,
ಗಿರಾಕಿ
ಅರಿವಿನ ಮೂರು ವಿಷಯಗಳು
ಕ್ಷಮೆ
ಮರೆಯುವಿಕೆ
ಗೆಳೆತನ
ಜೀವನದಲ್ಲಿ ಪಾಠ ಕಲಿಸುವ ಮೂರು ವಿಷಯಗಳು
ಖಾಲಿ ಜೇಬು,
ಹಸಿದ ಹೊಟ್ಟೆ,
ಒಡೆದ ಹೃದಯ
ಹಿಂದಕ್ಕೆ ಬಾರದ ಮೂರು ವಿಷಯಗಳು
ಕಳೆದು ಹೋದ ಸಮಯ,
ಆಡಿದ ಮಾತು,
ಹೋದ ಪ್ರಾಣ
ಬಿಡುವು ದೊರೆತರೆ, ಕಾಡುವುದು ಚಿಂತೆ-ಭಯ.
ಬಿಡುವಿಲ್ಲದವನೇ ಭಾಗ್ಯಶಾಲಿ.ಏಕೆಂದರೆ, ಅವನಿಗೆ ಯೋಚಿಸುವುದಕ್ಕೂ ಅವಕಾಶವಿರುವುದಿಲ್ಲ.
Comments are closed.