ಕಡಲೆ ಕಾಯಿಯಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆಲಕಡಲೆ ಸಹಕಾರಿ. ಯೌವ್ವನದ ಗುಟ್ಟು ಕಡಲೆ ಕಾಯಿಯಲ್ಲಿದೆ. ಕಡಲೆಕಾಯಿ ಸೇವನೆಯಿಂದ ಇನ್ನೂ ಅನೇಕ ಅನುಕೂಲಗಳಿವೆ.
ಕಡಲೆ ಕಾಯಿ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ ನೆಲಗಡಲೆ ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ. ಪ್ರತಿ ದಿನ ಪುರುಷ ಹಾಗೂ ಮಹಿಳೆ ನೆಲಗಡಲೆ ಸೇವನೆ ಮಾಡುವುದರಿಂದ ಸೆಕ್ಸ್ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಇದರಿಂದಾಗಿ ಲೈಂಗಿಕ ಜೀವನ ಸುಖಮಯವಾಗಿರುತ್ತದೆ. ಗರ್ಭಿಣಿಯರಿಗೆ ಕಡಲೆ ಕಾಯಿ ಜೋತೆಗೆ ಬೆಲ್ಲ ಸೇರಿಸಿ ತಿನ್ನುವುದರಿಂದ ರಕ್ತದ ಕೊರತೆ ನಿವಾರಣೆಯಾಗಿ ದೇಹಕ್ಕೆ ಉತ್ತಮ ಪೋಷಕಾಂಶ ಸಿಗುವುದು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಇದು ಸಹಕಾರಿ.
ಚರ್ಮದ ಕಾಂತಿಗೆ ಕಡಲೆ ಕಾಯಿ ಒಳ್ಳೆಯದು. ಇದ್ರಲ್ಲಿ ಒಮೆಗಾ -6 ಕೊಬ್ಬಿನಂಶವಿರುತ್ತದೆ.ವಾರದಲ್ಲಿ ಐದು ದಿನ ನೀವು ಕಡಲೆ ಕಾಯಿ ಸೇವಿಸಿದ್ರೆ ಹೃದಯ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
ರಕ್ತ ಹೀನತೆ ಇರುವವರು ಅವಶ್ಯವಾಗಿ ಕಡಲೆ ಕಾಯಿ ಸೇವನೆ ಮಾಡಬೇಕು. ಪ್ರತಿದಿನ ಅದನ್ನು ತಿನ್ನುವುದರಿಂದ ರಕ್ತದ ಸಮಸ್ಯೆ ಎದುರಾಗುವುದಿಲ್ಲ.
Comments are closed.