ಉಡುಪಿ: ಮಲ್ಪೆ ಕಡಲ ಕಿನಾರೆಯನ್ನು ಸ್ಪೋಟಿಸುವುದಾಗಿ ಯುವಕನೋರ್ವ ಬೆದರಿಕೆವೊಡ್ಡಿರುವ ವೀಡಿಯೋ ತುಣಕುವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.ವೀಡಿಯೋ ಆರಂಭದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದು 1 ನಿಮಿಷ 24 ಸೆಕೆಂಡ್‍ನ ಈ ವೀಡಿಯೋದಲ್ಲಿ ಯುವಕ ಹಿಂದಿಯಲ್ಲಿ ಬೆದರಿಕೆ ಹಾಕಿದ್ದಾನೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೆಲ್ಫಿ ಚಿತ್ರೀಕರಣ ಮಾಡಿದ್ದಾನೆ.
ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್. ಅಲ್ಲಿನ ಜನರ ಬಹಳ ಕೆಟ್ಟವರು. ಅಲ್ಲಿ ಬಹಳ ದೊಡ್ಡ ಪ್ರಮಾಣದ ಬಾಂಬ್ ಸ್ಪೋಟಿಸುತ್ತೇವೆ. ಎಲ್ಲರನ್ನು ಮುಗಿಸುತ್ತೇವೆ. ರಸ್ತೆಯಲ್ಲಿ ಅಂಗಡಿ ಇಟ್ಟವರೆಲ್ಲ ಪಿಸ್‍ಪಿಸ್ ಆಗುತ್ತಾರೆ ಎಂದಿದ್ದು ಕೆಟ್ಟ ಶಬ್ದಗಳಿಂದ ಬೈದು ನಿಂದಿಸಿದ್ದಾನೆ.
ಈ ವೀಡಿಯೋ ಸದ್ಯ ಗ್ರೂಪ್‍ನಿಂದ ಗ್ರೂಪ್‍ಗೆ ಹರಿದಾಡುತ್ತಿದೆ. ಯುವಕ ತಮಾಷೆಗೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ, ಮಾ. 3 ರಂದು ಮಲ್ಪೆಯಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ಈ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments are closed.