ಮಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವ ಮಂಗಳೂರಿನ ಇನ್ನರ್ ವ್ಹೀಲ್ ಕ್ಲಬ್ ಸಹಯೋಗದೊಂದಿಗೆ ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ (ಸಿಐಎಲ್) ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕರ ಮಹಿಳಾ ಸಿಬ್ಬಂದಿಗೆ ಒತ್ತಡ ನಿರ್ವಹಣೆಗಾಗಿ ನೃತ್ಯ ಥೆರಪಿ ಕಾರ್ಯಾಗಾರವನ್ನು ಇತ್ತೀಚೆಗೆ ನಗರದ ರೋಟರಿ ಬಾಲಭವನದಲ್ಲಿ ಆಯೋಜಿಸಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಲಕ್ಷ್ಮಿ ಎಂ. ಕುಮಾರನ್ ಅವರು, ಕೆಲಸ ಮಾಡುವ ಮಹಿಳೆ ಅಪಾರ ಒತ್ತಡವನ್ನು ಎದುರಿಸುತ್ತಾಳೆ. ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಮಾನಸಿಕವಾಗಿ ಸಧೃಢವಾಗಬೇಕು. ವೃತ್ತಿಪರ ಕರ್ತವ್ಯಗಳನ್ನು ಮತ್ತು ಕೌಟುಂಬಿಕ ಕೆಲಸಗಳನ್ನು ಸಮಾನವಾಗಿ ಸ್ವೀಕರಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಬೇಕಾಗುವುದು ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚುಂತಾರ ಅವರು ಲೇಡಿ ಹೋಮ್ ಗಾರ್ಡುಗಳ ಸೇವೆಯನ್ನು ಶ್ಲಾಘಿಸಿದರು.
ಬಿಸಿಲು ಮಳೆ ಲೆಕ್ಕಿಸದೆ ಟ್ರಾಫಿಕ್ ಸಿಗ್ನಲುಗಳಲ್ಲಿ ಮತ್ತು ವಿವಿಧ ತುರ್ತು ಪರಿಸ್ಥಿತಿಗಳ ಕಾಲದಲ್ಲಿಯೂ ಅವರು ಯಾವುದೇ ಪರಿಸ್ಥಿತಿಯಲ್ಲೂ ಸೇವೆ ಸಲ್ಲಿಸಲು ಸಿದ್ಧರಾಗಿರುತಚ್ತಾರೆ. ಮನೆಯಲ್ಲಿ ತಾಯಿ, ಹೆಂಡತಿ, ಮಗಳು, ಸೊಸೆಯಾಗಿ ಕರ್ತವ್ಯ ನಿರ್ವಹಿಸುವ ಈ ಮಹಿಳೆಯರ ಸೇವಾ ಮನೋಭಾವನೆ ಅನನ್ಯ ಎಂದು ಚೂಂತಾರು ಹೇಳಿದರು.
ಈ ಕಾರ್ಯಾಗಾರವನ್ನು ನಡೆಸಿಕೊಟ್ಟ ನೃತ್ಯ ಥೆರಪಿ ತರಬೇತುದಾರರಾದ ಸಚಿತಾ ನಂದಗೋಪಾಲ್ ಅವರು ಒತ್ತಡವನ್ನು ನಿಭಾಯಿಸಲು ಮತ್ತು ಸಾವಧಾನತೆ ಸಾಧಿಸಲು ತಮ್ಮ ಸ್ವಯಂ ಸಾಮರ್ಥ್ಯವನ್ನು ಉತ್ತಮಗೊಳಿಸಲು ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಸಾಧಕರಾದ ಹೋಮ್ ಗಾರ್ಡ್ ಸಿಬ್ಬಂದಿ ಭವಾನಿ ಕುಮಾರಿ ಅವರನ್ನು ಅವರಕ್ಷೇತ್ರಗಳಲ್ಲಿ ನೀಡಿರುವ ಗಮನಾರ್ಹ ಸೇವೆಗಾಗಿ ಗೌರವಿಸಿ ಅಭಿನಂದಿಸಲಾಯಿತು. ಮಂಗಳೂರು ನಾರ್ತ್ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ನೀನಾ ಶೆಟ್ಟಿ ಉಪಸ್ಥಿತರಿದ್ದರು.
Comments are closed.