ಉಡುಪಿ: ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಚುನಾವಣ ಅಕ್ರಮ ತಡೆಯಲು ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಲೋಕಸಭಾ ಕ್ಷೇತ್ರದ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ.
ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಣಿ ಕೊರ್ಲಪಟಿ ಹಾಗೂ ಉಡುಪಿ ಜಿಲ್ಲಾ ಪೊಲೀಸರ ತಂಡ ಅಲ್ಲಲ್ಲಿ ದಿಡೀರ್ ಚೆಕ್ ಪೋಸ್ಟ್ ಭೇಟಿ ಕಾರ್ಯ ನಡೆಸುತ್ತಿದೆ. ಜಿಲ್ಲೆಯ ಗಡಿ ಭಾಗವಾದ ಶೀರೂರು ಚೆಕ್ ಪೋಸ್ಟ್ ಗೆ ಅನಿರೀಕ್ಷಿತವಾಗಿ ಕಾರ್ಕಳ ಎಎಸ್ಪಿ ಜೊತೆ ಭೇತಿ ನೀಡಿ, ಪರಿಶೀಲನೆಯನ್ನು ನಡೆಸಿದರು. ಅಲ್ಲದೇ ಕೊಲ್ಲೂರು ಚೆಕ್ ಪೋಸ್ಟ್ ಗೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಜೊತೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆಯನ್ನುನಡೆಸಿದರು.
Comments are closed.