ಕರೀ ಜೀರಿಗೆ ಮತ್ತು ಬೇರುಗಳನ್ನು ಅರೆದು ಸಂಧಿವಾತದಲ್ಲಿ ಹೊರ ಲೇಪನವಾಗಿ ಬಳಸುತ್ತಾರೆ. ಎಲೆ ಮತ್ತು ಬೇರನ್ನು ಅರೆದು ಚೇಳು ಕಡಿದ ಜಾಗದ ಮೇಲೆ ಲೇಪಿಸುವುದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ.
ಕಾಡು ಜೀರಿಗೆ ಎಲೆಯ ರಸವನ್ನು ತೆಲೆಗೆ ಹಚ್ಚುವುದರಿಂದ ತಲೆಯ ಹೊಟ್ಟು ಮತ್ತು ಹೇನುಗಳು ನಿವಾರಣೆಯಾಗುತ್ತವೆ.ಬೀಜಗಳನ್ನು ನೀರಿನಲ್ಲಿ ಅರೆದು ಲೇಪಿಸುವುದರಿಂದ ಊತ, ನೋವು ಮತ್ತು ಹಲವಾರು ವಿಧದ ಚರ್ಮರೋಗಗಳು ನಿವಾರಣೆಯಾಗುತ್ತವೆ.
ಕಾಡು ಜೀರಿಗೆ 8 ಗುಂಜಿ ಮತ್ತು ಕರಿ ಎಳ್ಳು 8 ಗುಂಜಿ ಇವುಗಳನ್ನು ಬಿಸಿ ನೀರಿನಲ್ಲಿ ಅರೆದು ಕುಡಿಯುವುದರಿಂದ ಜ್ವರ ಮತ್ತು ಎಲ್ಲ ತರಹದ ಚರ್ಮ ವ್ಯಾದಿಗಳು ಗುಣವಾಗುತ್ತವೆ.
ಕಾಡು ಜೀರಿಗೆಯ ಸೇವನೆಯಿಂದ ಗರ್ಭಾಶಯ ಶುದ್ದಿಯಾಗುತ್ತದೆ. ಮತ್ತು ಎದೆ ಹಾಲು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಕಾಡು ಜೀರಿಗೆಯ ಬೀಜವನ್ನು ಅರೆದು ಮುಖಕ್ಕೆ ರಾತ್ರಿ ಲೇಪಿಸಿ ಬೆಳಗ್ಗೆ ತೊಳೆಯುವುದರಿಂದ ಮುಖ ಕಾಂತಿಯುಕ್ತವಾಗುತ್ತದೆ
Comments are closed.