ಕರಾವಳಿ

ಮೂಳೆಗಳ ಬಲವರ್ಧನೆ, ರಕ್ತದೊತ್ತಡ ನಿಯಂತ್ರಣಕ್ಕೆ ಗಸಗಸೆ ಸೇವನೆ ಅರೋಗ್ಯಕರ

Pinterest LinkedIn Tumblr

ಒಣಕೊಬ್ಬರಿಯೊಂದಿಗೆ ಗಸೆ ಗಸೆಯನ್ನು ಜಗಿದು ತಿಂದರೆ ಬಾಯಿಯ ಹುಣ್ಣು ವಾಸಿಯಾಗುತ್ತದೆ.
ಗಸೆ ಗಸೆ ಯನ್ನು ಅರೆದು ಹಾಲಿನಲ್ಲಿ ಕುದಿಸಿ ವಾಯಸದಂತೆ ಮಾಡಿ ಕುಡಿಯುವುದರಿಂದ ದೇಹ ತಂಪಾಗುತ್ತದೆ. ನಿದ್ದೆಯೂ ಚೆನ್ನಾಗಿ ಬರುತ್ತದೆ.
ಗಸೆ ಗಸೆ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡಿ ಮಲಬದ್ದತೆಯನ್ನು ನಿರ್ಮೂಲನೆ ಮಾಡುತ್ತದೆ.
ಗಸ ಗಸೆ ಸೇವನೆಯಿಂದ ಅಸಿಡಿಟಿ, ಎದೆಯುರಿ, ಗ್ಯಾಸ್ ಟ್ರಬಲ್ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಗಸೆ ಗಸೆಯಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಗೆ ಮೂಳೆಗಳ ಬಲವರ್ಧನೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರಯೋಜನಕಾರಿಯಾಗಿದೆ.
ಗಸೆ ಗಸೆ ಸೇವನೆಯಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೇಹವು ಆರೋಗ್ಯವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ.
ಹೆಂಗಸರು ಗಸೆ ಗಸೆ ಸೇವನೆಯಿಂದ ಫಲವತ್ತತೆಗೆ ಸಹಕಾರಿಯಾಗುತ್ತದೆ. ಗರ್ಭಾಶಯವನ್ನು ಶುಚಿಗೊಳಿಸಿ ಗರ್ಭಾವಸ್ಥೆಯ ಸಮಯದಲ್ಲಿ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಗಸೆ ಗಸೆ ಪುಡಿಯನ್ನು ಮಿಶ್ರಣ ಮಾಡಿ ಕುಡಿದರೆ ಯಾವುದೇ ರೀತಿಯ ಕಾಯಿಲೆ ಕಡಿಮೆ ಮಾಡುವಲ್ಲಿ ಗಸೆ ಗಸೆ ಬಹಳ ಸಹಾಯಯಾಗುತ್ತದೆ.

Comments are closed.