ದೇವರೇ ಏನು ಬೇಕಾದರೂ ಕೊಡು ಆದರೆ ಹಲ್ಲು ನೋವು ಮಾತ್ರ ಕೊಡಬೇಡ ಎನ್ನುವ ಪ್ರಾರ್ಥನೆ ಹಲ್ಲು ನೋವು ಅನುಭವಿಸಿರುವ ಪ್ರತಿಯೊಬ್ಬರೂ ಮಾಡಿರುತ್ತಾರೆ. ಯಾಕೆಂದರೆ ಹಲ್ಲು ನೋವಿನಷ್ಟು ಸಂಕಟ ನೀಡುವ ನೋವು ಮತ್ತೊಂದು ಇಲ್ಲವೆನ್ನಬಹುದು. ಹಲ್ಲು ನೋವಿನ ಸಮಯದಲ್ಲಿ ಯಾವುದೇ ರೀತಿಯ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಸರಿಯಾಗಿ ಆಹಾರ ಸೇವಿಸುವುದು ಕೂಡ ಕಷ್ಟವಾಗಿ ಬಿಡುತ್ತದೆ.. ಇದಕ್ಕೆಲ್ಲಾ ಪ್ರಮುಖ ಕಾರಣ ಹಲ್ಲು ನೋವಿಗೆ ಪ್ರಮುಖವಾಗಿ ಬ್ಯಾಕ್ಟೀರಿಯಾ ಸೋಂಕು, ವಸಡಿನ ರೋಗ, ದುರ್ಬಲ ಹಲ್ಲುಗಳು ಪ್ರಮುಖ ಕಾರಣವಾಗಿದೆ. ಅದರಲ್ಲೂ, ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಆಹಾರದ ತುಣುಕುಗಳು ಬ್ಯಾಕ್ಟೀರಿಯಾಗಳಿಗೆ ರಸದೌತಣವಾಗಿದ್ದು ಕೆಲವೇ ದಿನಗಳಲ್ಲಿ ಈ ಬ್ಯಾಕ್ಟೀರಿಯಾಗಳು ಭಾರೀ ವೇಗದಲ್ಲಿ ತಮ್ಮ ಪಡೆಯನ್ನು ಹೆಚ್ಚಿಸಿಕೊಂಡು ಉಂಡ ಮನೆಗೆ ದ್ರೋಹ ಬಗೆಯುವ ಹುನ್ನಾರದಲ್ಲಿರುತ್ತವೆ.
ಅತಿಯಾದ ಹಲ್ಲುನೋವಿಗೆ ಪ್ರಮುಖವಾಗಿ ಹಲ್ಲಿನ ಬುಡದಲ್ಲಿ ಆದ ಸೋಂಕು ಕಾರಣವಾಗಿದೆ. ಪಲ್ಪ್ ಎಂದು ಕರೆಯಲಾಗುವ ಈ ಭಾಗದಲ್ಲಿ ಅತಿ ಹೆಚ್ಚಿನ ನರಾಗ್ರಗಳಿದ್ದು ಇವು ಅತಿ ಸಂವೇದನಾಶೀಲವಾಗಿರುತ್ತವೆ. ಬನ್ನಿ ಈ ನೋವನ್ನು ಕಡಿಮೆಗೊಳಿಸಲು ಕೆಲವು ಮನೆಮದ್ದುಗಳಿದ್ದು ಈ ಲೇಖನದಲ್ಲಿ ತಿಳಿಸಿದ್ದೇವೆ, ಮುಂದೆ ಓದಿ….
ಹಲ್ಲು ನೋವು ನಿಯಂತ್ರಣಕ್ಕೆ ಮನೆಔಷಧಿಗಳು
ಉಪ್ಪು ಮತ್ತು ಕಾಳುಮೆಣಸು
ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.
*ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ
*ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.
*ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.
ಬೆಳ್ಳುಳ್ಳಿ
ಇದರ ಪ್ರತಿಜೀವಕ ಮತ್ತು ಔಶಧೀಯ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ಶಕ್ತವಾಗಿವೆ.
*ಹಸಿ ಬೆಳ್ಳುಳ್ಳಿ ಜಜ್ಜಿ ಅಥವಾ ಪುಡಿಯನ್ನು ಉಪಯೋಗಿಸಿ ಕೊಂಚ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊಂಚ ನೀರು ಸೇರಿಸಿ ದಪ್ಪನೆಯ ಲೇಪನವನ್ನಾಗಿಸಿ.
*ಈ ಲೇಪನವನ್ನು ಬಾಧಿತ ಹಲ್ಲಿನ ಮೇಲೆ ಇರಿಸಿ. ಸಾಧ್ಯವಾದರೆ ಹಸಿ ಬೆಳ್ಳುಳ್ಳಿಯ ಎಸಳನ್ನು ಬಾಧಿತ ಹಲ್ಲಿನ ಮೇಲೆ ಇಟ್ಟು ಜಗಿಯಿರಿ.
*ಈ ವಿಧಾನವನ್ನು ದಿನಕ್ಕೆರಡು ಬಾರಿಯಂತೆ ಕೆಲವು ದಿನ ಅನುಸರಿಸಿ.
ಲವಂಗ
*ಎರಡು ಲವಂಗಗಳನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ ಅಥವಾ ಬೇರಾವುದಾದರೂ ಅಡುಗೆ ಎಣ್ಣೆ ಬೆರೆಸಿ ಸೋಂಕು ತಗುಲಿದ ಭಾಗಕ್ಕೆ ಹಚ್ಚಿ
*ಪರ್ಯಾಯವಾಗಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ.
*ಇನ್ನೊಂದು ವಿಧಾನದಲ್ಲಿ ಕೊಂಚ ಬಿಸಿನೀರಿಗೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ ಮುಕ್ಕಳಿಸಿ.
‘ಲವಂಗ’ದ ಜಬರ್ದಸ್ತ್ ಪವರ್‌ಗೆ ಮೆಚ್ಚಲೇಬೇಕು…
ಕಹಿ ಬೇವಿನ ಎಲೆ
ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿ ಅದರೆ ರಸಕ್ಕೆ, ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.
ಆಲಿವ್ ಎಣ್ಣೆ
ಬಳಸಿ ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಮುಳುಗಿಸಿ ನೋವಿರುವ ಒಸಡಿಗೆ ನಯವಾಗಿ ಹಚ್ಚಿರಿ. ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ ಆಲಿವ್ ಎಣ್ಣೆ ಹಲ್ಲುನೋವನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ಆಲಿವ್ ಎಣ್ಣೆಯ ಉರಿಯೂತ ನಿವಾರಕ ಗುಣ ಹಲ್ಲುನೋವು ಶಮನಗೊಳಿಸಲು, ಬಾವು ಕಡಿಮೆಗೊಳಿಸಲು ಹಾಗೂ ಶೀಘ್ರವಾಗಿ ಗಾಯ ಮಾಗಲು ನೆರವಾಗುತ್ತದೆ
ತೆಂಗಿನೆಣ್ಣೆ
ವಿಪರೀತವಾದ ಹಲ್ಲು ನೋವಿಗೆ ಇದು ಸಹ ಒಂದು ಪ್ರಯೋಜನಕಾರಿ ಮನೆ ಪರಿಹಾರವಾಗಿದೆ. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಕೇವಲ ತೆಂಗಿನೆಣ್ಣೆ. ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಅನುಭವಿಸುವಿರಿ.ಇನ್ನು ದೀರ್ಘಕಾಲದ ಹಾಗೂ ಪದೇ ಪದೇ ಕಾಡುವಂತಹ ಹಲ್ಲುನೋವಿಗೆ ಆಯುರ್ವೇದವು ಹಲವಾರು ರೀತಿಯ ಔಷಧಿಗಳನ್ನು ಸಿದ್ಧಪಡಿಸಿದೆ. ಆಯುರ್ವೇದವು ಸಂಪೂರ್ಣವಾಗಿ ನೋವಿಗೆ ಏನು ಕಾರಣವೋ ಅದರ ಮೂಲದ ತನಕ ತಲುಪಿ, ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಪರಿಹಾರ ನೀಡುವುದು. ನೋವು ಮರಳಿ ಬರದಂತೆ ಕೂಡ ಇದು ತಡೆಯುವುದು. ತೀವ್ರ ಹಲ್ಲು ನೋವಿಗೆ ಕೆಲವೊಂದು ಆಯುರ್ವೇದದ ಚಿಕಿತ್ಸೆಗಳು ಇಲ್ಲಿದೆ ನೋಡಿ…
ಬೆಳ್ಳುಳ್ಳಿ ಮತ್ತು ಲವಂಗದ ಎಣ್ಣೆ
ಬೆಳ್ಳುಳ್ಳಿ ಮತ್ತು ಲವಂಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಮತ್ತು ಶಮನಕಾರಿ ಗುಣಗಳು ಇವೆ ಎಂದು ಆಯುರ್ವೇದವು ಹಿಂದಿನಿಂದಲೇ ಕಂಡುಕೊಂಡಿದೆ. ಲವಂಗದ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಹಲ್ಲಿನ ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಬೇಕು. ಇದು ನೋವು ನಿವಾರಣೆ ಮಾಡ, ಹಲ್ಲಿನ ಆರೋಗ್ಯ ಕಾಪಾಡುವುದು ಇದು ಹಲ್ಲುಗಳನ್ನು ಬಲಗೊಳಿಸಿ ನೋವಿನಿಂದ ಮುಕ್ತಿ ನೀಡುವುದು.
ಲಿಂಬೆ ಮತ್ತು ಇಂಗು
ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿಯು ಸೋಂಕು ನಿವಾರಕವಾಗಿ ಕೆಲಸ ಮಾಡುವುದು. ದಂತುಕುಳಿಗೆ ಒಳಗಾಗಿ ಸೂಕ್ಷ್ಮ ಅನುಭವ ನೀಡುವ ಹಲ್ಲನ್ನು ಶಮನಗೊಳಿಸುವುದು. ಲಿಂಬೆಯು ತೀವ್ರವಾದ ನೋವು ನಿವಾರಣೆ ಮಾಡಿ, ರಕ್ತಸ್ರಾವವಾಗುವ ಒಸಡು ಮತ್ತು ಅಲುಗಾಡುತ್ತಿರುವ ಹಲ್ಲಿಗೆ ಪರಿಹಾರ ನೀಡುವುದು. ಇಂಗು ಮತ್ತು ಸ್ವಲ್ಪ ಲಿಂಬೆರಸವನ್ನು ಹದವಾಗಿ ಬಿಸಿ ಮಾಡಿಕೊಂಡು ಅದನ್ನು ನೋವಿರುವಂತಹ ಹಲ್ಲಿನ ಭಾಗಕ್ಕೆ ಹಚ್ಚಿಕೊಳ್ಳಬೇಕು.
ಕರಿಮೆಣಸು ಮತ್ತು ಕಲ್ಲುಪ್ಪು
ಆಯುರ್ವೇದದಲ್ಲಿ ಕರಿಮೆಣಸನ್ನು ಮರಿಚ ಎಂದು ಕರೆಯಲಾಗುತ್ತದೆ. ಇದು ಸೂಕ್ಷ್ಮ ಹಲ್ಲುಗಳ ಚಿಕಿತ್ಸೆಗೆ ತುಂಬಾ ಪರಿಣಾಮಕಾರಿಯಾಗಿರಲಿದೆ. ಕರಿಮೆಣಸಿನ ಹುಡಿಯನ್ನು ಕಲ್ಲುಪ್ಪಿನ ಜತೆಗೆ ಮಿಶ್ರಣ ಮಾಡಿಕೊಂಡು ನೋವು ಉಂಟುಮಾಡುವಂತಹ ಹಲ್ಲಿಗೆ ಹಚ್ಚಿಕೊಳ್ಳಿ. ಇದು ನೋವು ನಿವಾರಿಸಿ, ಸೆಳೆತ ಕಡಿಮೆ ಮಾಡುವುದು. ಇದು ಸಂಪೂರ್ಣ ಬಾಯಿಯ ಆರೋಗ್ಯ ಕಾಪಾಡುವುದು. ಇದನ್ನು ಲವಂಗದ ಎಣ್ಣೆಯೊಂದಿಗೂ ಬಳಸಿಕೊಳ್ಳಬಹುದು.
ಬೇವು ಮತ್ತು ಅಕೇಶಿಯಾ
ಬೇವು ಮತ್ತು ಅಕೇಶಿಯಾದ ಸಾರವು ಹಲ್ಲು ನೋವು ಮತ್ತು ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಈ ಆಯುರ್ವೇದ ಗಿಡಮೂಲಿಕೆಗಳು ನಂಜುನಿರೋಧಕ ಹಾಗೂ ಸೋಂಕುನಿವಾರಕ ಗುಣ ಹೊಂದಿದೆ. ಇದು ಹಲ್ಲಿನ ಕೊಳೆತ ನಿವಾರಣೆ ಮಾಡುವುದು ಮತ್ತು ನೋವಿನಿಂದ ಪರಿಹಾರ ನೀಡುವುದು. ಇದು ನೋವು ಶಮನ ಮಾಡಿ, ಹಲ್ಲು ಮತ್ತು ಒಸಡನ್ನು ಬಲಗೊಳಿಸುವುದು.
ಲವಂಗ
ಎರಡು ಲವಂಗಗಳನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ ಅಥವಾ ಬೇರಾವುದಾದರೂ ಅಡುಗೆ ಎಣ್ಣೆ ಬೆರೆಸಿ ಸೋಂಕು ತಗುಲಿದ ಭಾಗಕ್ಕೆ ಹಚ್ಚಿ, ಪರ್ಯಾಯವಾಗಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ. ಇನ್ನೊಂದು ವಿಧಾನದಲ್ಲಿ ಕೊಂಚ ಬಿಸಿನೀರಿಗೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ ಮುಕ್ಕಳಿಸಿ.
ಉಪ್ಪು
ಹಲ್ಲು ನೋವಿಗೆ ಉಪ್ಪು ತತ್‍ಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಇದಕ್ಕೆಲ್ಲ ಬೇಕಾಗಿರುವುದು ಕೇವಲ ಎರಡು ವಸ್ತುಗಳು ಒಂದು ಬೆಚ್ಚನೆಯ ನೀರು ಮತ್ತು ಎರಡು ಸ್ವಲ್ಪ ಉಪ್ಪು.ಇವೆರಡನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆ ಮಾಡಿಕೊಳ್ಳಿ.
ಈರುಳ್ಳಿ
ಇದರ ಕೀಟಾಣುವಿರೋಧಿ ಮತ್ತು ನಂಜುನಿರೋಧಕ ಗುಣಗಳು ಹಲ್ಲುನೋವು ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಉತ್ತಮವಾಗಿದೆ. ಹಸಿ ಈರುಳ್ಳಿಯನ್ನು ನೋವಿರುವ ಹಲ್ಲುಗಳ ಭಾಗದಲ್ಲಿ ಅಗಿಯಿರಿ. ಇಲ್ಲದಿದ್ದರೆ ಕೆಲವು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿ.
ಉಪ್ಪು ಮತ್ತು ಕಾಳುಮೆಣಸು
ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ. *ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ *ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ. *ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.
Comments are closed.