ಕರಾವಳಿ

ಕುಂದಾಪುರದ ನೇರಳಕಟ್ಟೆಯಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆ

Pinterest LinkedIn Tumblr

ಕುಂದಾಪುರ: ಸತತ ನಾಲ್ಕು ಗಂಟೆ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್‍ಯಾಚರಣೆ ಮೂಲಕ ಕರ್ಕುಂಜೆ ಗ್ರಾಮ ನೇರಳಕಟ್ಟೆ ಮದಗ ಬಳಿ ಶನಿವಾರ ಬಾವಿಗೆ ಬಿದ್ದ ಚಿರತೆ ರಕ್ಷಣೆ ಮಾಡಲಾಗಿದೆ.

ನೇರಳಕಟ್ಟೆ ಮದಗ ಬಳಿ ಶಂಕರ್ ಎಂಬವರ ಬಾವಿಗೆ ಚಿರತೆ ಬಿದ್ದಿದ್ದು ನೀರಿನಲ್ಲಿ ಮುಳಿಗೇಳುತ್ತಿತ್ತು. ಬಾವಿ ಗೋಡೆ ಆಶ್ರಯ ಪಡೆದ ಚಿರತೆ ಮುಖಮಾತ್ರ ನೀರಿನಿಂದ ಸ್ವಲ್ಪ ಮೇಲಕ್ಕೆ ಇತ್ತು. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಮಯೋಚಿತ ಪ್ರಯತ್ನ ಚಿರತೆ ಜೀವ ಉಳಿಸಿದೆ.

ಬೇಟೆ ಅರಸಿಕೊಂಡ ಬಂದ ಚಿರತೆ ಓಡುವ ಭರದಲ್ಲಿ ಬಾವಿಗೆ ಬಿದ್ದಿತ್ತು. ಚಿರತೆ ಬಾವಿಗೆ ಬಿದ್ದ ಸಂಗತಿ ಮನೆಯವರಿಗೆ ನೀರೆತ್ತುವಾಗ ಗಮನಕ್ಕೆ ಬಂದಿತ್ತು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದು, ಕುಂದಾಪುರ ಅರಣ್ಯ ಅಧಿಕಾರಿ ಪ್ರಭಾಕರ ಕುಲಾಲ್ ನಿತೃತ್ವದಲ್ಲಿ ಬಾವಿಗೆ ಬೋನಿ ಇಳಿಸಿ, ಸತತ ನಾಲ್ಕು ಗಂಟೆ ಕಾರ್‍ಯಚರಣೆ ಮೂಲಕ ಮೇಲಕ್ಕೆ ಇತ್ತಿ, ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಅರಣ್ಯ ಅಧಿಕಾರಿ ದಿಲೀಪ್, ನೇರಳಕಟ್ಟೆ ವಲಯ ಅರಣ್ಯ ಅಧಿಕಾರಿ ಹೇಮಾ, ಅರಣ್ಯ ಅಧಿಕಾರಿಗಳಾದ ಉದಯ್, ಶಿವು, ಬಸವರಾಜ್, ಬಂಗಾರಪ್ಪ, ನಯನ, ವಿ.ಮಂಜು, ಅಶೊಕ್, ರಾಜು ಕಾರ್‍ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.