ಮಂಗಳೂರು, ಮಾರ್ಚ್ 18 : ಶ್ರೀ ಗುರು ವೈದ್ಯನಾಥ ಶ್ರೀ ದೇವಿ ಚಾಮುಂಡೇಶ್ವರಿ ದೈವಸ್ಥಾನ ಬಿಜೈ ಕಾಪಿಕಾಡ್ ಮಂಗಳೂರು, ಇಲ್ಲಿನ ನೂತನ ಬಿಂಬ ಪುನ: ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ನೇಮೋತ್ಸವವು ಮಾಚ್ 20ರಿಂದ ಮಾರ್ಚ್ 25ರವರೆಗೆ ಜರಗಲಿದ್ದು, ಈ ಪ್ರಯುಕ್ತ ಕಾಪಿಕಾಡ್ ಫ್ರೆಂಡ್ಸ್, ಬಿಜೈ ಕಾಪಿಕಾಡ್ ಹಾಗೂ ಶ್ರೀ ಕಟೀಲೇಶ್ವರಿ ಎಂಟರ್‌ಪ್ರೈಸಸ್, ಬಿಜೈ ಕಾಪಿಕಾಡ್ ಇವರ ವತಿಯಿಂದ ಬಿಜೈ ಕಾಪಿಕಾಡ್ ಸರಕಾರಿ ಶಾಲಾ ಮುಂಭಾಗದಲ್ಲಿ ಹೊರೆಕಾಣಿಕೆ ಕೇಂದ್ರವನ್ನು ಆರಂಭಿಸಲಾಗಿದ್ದು, ಸೋಮವಾರ ಸಂಜೆ ಇದರ ಉದ್ಘಾಟನಾ ಸಮಾರಂಭ ನೆರವೇರಿತು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್, ಬಿಜೆಪಿಯ ವಾರ್ಡ್ ಅಧ್ಯಕ್ಷ ಸುರೇಶ್, ಡಿಎಸ್‌ಎಸ್ ಮುಖಂಡ ಸದಾಶಿವ ಉರ್ವಾಸ್ಟೋರ್, ನಮೋಬ್ರಿಗೇಡ್‍ನ ಕುಂಬ್ಳೆ ಸಾಗಾರ್ ಶೆಣೈ, ಶ್ರೀ ಗುರು ವೈದ್ಯನಾಥ ಶ್ರೀ ದೇವಿ ಚಾಮುಂಡೇಶ್ವರಿ ದೈವಸ್ಥಾನದ ಅರ್ಚಕ ನಾರಾಯಣ, ಉದ್ಯಮಿ ಮೊಹಮ್ಮದ್ ಶರೀಫ್ ಪಂಜಿಮೊಗರು, ಪ್ರಮುಖರಾದ ಪ್ರಶಾಂತ್ ಆಳ್ವ ಅನೆಗುಂಡಿ, ಸೋನಕ್ ರೈ ಕಾಪಿಕಾಡ್, ದಯನಂದ ಬಿಜೈ ಕಾಪಿಕಾಡ್, ಗುರು ಬಿಜೈ ಕಾಪಿಕಾಡ್, ಸೂರಜ್ ಕಾಪಿಕಾಡ್, ರೋಹಿತಾಶ್ವ, ರಾಧಕೃಷ್ಣ, ದಿವಾಕರ್ ಕೊಟ್ಟಾರ ಕ್ರಾಸ್ ಮುಂತಾದವರು ಅಥಿತಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಶ್ರೀ ಕಟೀಲೇಶ್ವರಿ ಎಂಟರ್‌ಪ್ರೈಸಸ್‌ನ ಮಾಲಕ ಅಶ್ವಿನ್ ರಾಜ್ ಪೂಜಾರಿ ಸ್ವಾಗತಿಸಿದರು. ಕಾಪಿಕಾಡ್ ಫ್ರೆಂಡ್ಸ್ ಅಧ್ಯಕ್ಷ ರಕ್ಷತ್ ರಾವ್ ವಂದಿಸಿದರು.
ಮಾರ್ಚ್ 21ರಂದು ಹ್ಮ ಕಲಶಾಭಿಷೇಕ:
ಶ್ರೀ ಗುರು ವೈದ್ಯನಾಥ ಶ್ರೀ ದೇವಿ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಮಾರ್ಚ್ 21ರಂದು ಬೆಳಿಗ್ಗೆ 9.50ರಿಂದ 10:30ರವರೆಗೆ ವೃಷಭ ಲಗ್ನ ಸುಮುಹೂರ್ಥದಲ್ಲಿ ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ನಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ.
__ಸತೀಶ್ ಕಾಪಿಕಾಡ್
Comments are closed.