ಕುಂದಾಪುರ: ಕರ್ತವ್ಯದಲ್ಲಿದ್ದ ಪೊಲೀಸ್ ತಳ್ಳಿಹಾಕಿ ಕೋಟ ಪೊಲೀಸ್ ಠಾಣೆಯಿಂದ ಆಪಾಧಿತ ಪರಾರಿಯಾಗಿದ ಘಟನೆ ನಡೆದಿದೆ.
ಶಿಕಾರಿಪುರ ತಾಲೂಕು, ಹೊಸೂರು ಹೋಬಳಿ, ಕೆಂಗಟ್ಟ ಗ್ರಾಮ ನಿವಾಸಿ ಪ್ರಸಕ್ತ ಹಂಗಾರುಕಟ್ಟೆ ಬಾಳ್ಕುದ್ರು ಗಾಮದಲ್ಲಿರುವ ಮಂಜು ತಪ್ಪಿಸಿಕೊಂಡ ಆಪಾಧಿತ. ಈತನ ಮೇಲೆ ಅಕ್ರಮ ಮರಳು ಸಾಗಾಟದ ಆರೋಪವಿತ್ತು.
ಕೋಟ ಠಾಣೆ ಹೆಚ್‌ಸಿ ರಾಮ ದೇವಾಡಿಗ ಎಂಬವರು ಮಂಜ ಎಂಬವರ ದಸ್ತಗಿರಿ ಮಾಡಿ, ಕಸ್ಟಡಿಯಲ್ಲಿ ಇಟ್ಟಿದ್ದರು. ವಿಧಿಬದ್ದ ಕಸ್ಟಡಿಯಲ್ಲಿದ್ದ ಆಪಾಧಿತ ಮಂಜು ಭದ್ರಿಕೆಯಲ್ಲಿದ್ದ ಕರ್ತವ್ಯದ ಸಿಬ್ಬಂದಿ ಹೆಚ್‌ಸಿ ರಾಮ ದೇವಾಡಿಗರ ತಳ್ಳಿ ಠಾಣೆಯಿಂದ ಓಡಿ ಹೋಗಿದ್ದಾನೆ.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.