ಕುಂದಾಪುರ: ಬಿಲ್ಲಾಡಿ ಗ್ರಾಮ ನೈಲಾಡಿ ಎಂಬಲ್ಲಿ ಸುಮಾರು 2 ವರ್ಷದಿಂದ ಸರ್ಕಾರಿ ಜಾಗದಲ್ಲಿ ಆಕ್ರಮ ಶಿಲೆ ಕಲ್ಲು ಗಣಿಗಾರಿಕೆ ಮೇಲೆ ಪೊಲೀಸರು ದಾಳಿ ನಡೆಸಿ, ಗಣಿ ಮಾಲೀಕನ ಬಂಧಿಸಿ ಅಪಾರ ಪ್ರಮಾಣದ ಸ್ಪೋಟಕ ಇತರ ವಸ್ತುಗಳ ವಶಕ್ಕೆ ಪಡೆಯಲಾಗಿದೆ. ಅಕ್ರಮ ಶಿಲೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಬೈಂದೂರು ದಿವಾಕರ ಶೆಟ್ಟಿ ಎಂಬವರ ಬಂಧಿಸಲಾಗಿದೆ.
ಗುಳಿ ತೆಗೆಯಲು ಉಪಯೋಗಿಸುವ ಕಬ್ಬಿಣದ ರಾಡ್, ಕಂಪ್ರೇಷರ್ ಜಾಕ್, ಟ್ಯಾಕ್ಟರ್, ಹಿಟೆಚ್ ಯಂತ್ರ ಟಿಪ್ಪರ್, ಡಿಟೋನೇಟರ್ ಇರುವ ಕಟ್ಟುಗಳು, 125ಡೆಟೋನೆಟರ್, ಹಸಿರು ಬಣ್ಣದ ಡಿಟೋನೇಟರ್ 5. ಜಿಲೆಟಿನ್ ಕಡ್ಡಿ 120 ಇನ್ನಿತರ ವಸ್ತುಗಳ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಜೈಶಂಕರ, ಬ್ರಹ್ಮಾವರ ಸಿಪಿಐ ಪೂವಯ್ಯ ಕೋಟ ಠಾಣೆ ಎಸ್ಸೈ ರಫೀಕ್ ಹಾಗೂ ಸಿಬ್ಬಂದಿ ಪ್ರದೀಪ್ ನಾಯಕ್, ದ್ಯಾಮನಗೌಡ ಪಾಟೀಲ್, ಅಶೋಕ, ರಾಘವೇಂದ್ರ ದಾಳಿ ನಡೆಸಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.