ಕರಾವಳಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಗಿಂತ ಹೆಂಡತಿಯೇ ಶ್ರೀಮಂತೆ

Pinterest LinkedIn Tumblr


ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಸ್ತಿ ಕಳೆದ 5 ವರ್ಷದಲ್ಲಿ 5.24 ಕೋಟಿಯಷ್ಟು ಹೆಚ್ಚಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಅವರ ಒಟ್ಟು ಆಸ್ತಿ 3.20 ಕೋಟಿ ಇತ್ತು. ಈ ಬಾರಿ ಅವರು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 8.45 ಕೋಟಿ ಆಸ್ತಿ ತೋರಿಸಿದ್ದಾರೆ. ಅನಂತಕುಮಾರ್‌ ಬಳಿ 35,36,136 ಮೌಲ್ಯದ ಚರಾಸ್ತಿ, 3,47,42,805 ಮೌಲ್ಯದ ಸ್ಥಿರಾಸ್ತಿ, ಪತ್ನಿ ಶ್ರೀರೂಪಾ ಬಳಿ 3,81,01,661 ಮೌಲ್ಯದ ಚರಾಸ್ತಿ, 1,81,50,000 ಮೌಲ್ಯದ ಸ್ಥಿರಾಸ್ತಿ ಇದೆ.

9.61 ಲಕ್ಷ ಹಾಗೂ 5.50 ಲಕ್ಷ ಮೌಲ್ಯದ ಎರಡು ಕಾರು ಹೊಂದಿದ್ದು, 1.27 ಕೋಟಿ ಸಾಲ, ಪತ್ನಿ ಹೆಸರಲ್ಲಿ 2.82 ಕೋಟಿ ಸಾಲವಿದೆ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

4 ಕೇಸ್‌: ಅನಂತ ಕುಮಾರ್‌ ಹೆಗಡೆ ಮೇಲೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ 4 ಪ್ರಕರಣ ದಾಖಲಾಗಿದ್ದು, ಎಲ್ಲಾ ಪ್ರಕರಣ ವಿಚಾರಣೆ ಹಂತದಲ್ಲಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಹೊನ್ನಾವರದಲ್ಲಿ ಎರಡು ಗುಂಪುಗಳ ನಡುವೆ ಅಶಾಂತಿಗೆ ಯತ್ನ ಹಾಗೂ ಶಿರಸಿಯಲ್ಲಿ ವೈದ್ಯರ ಮೇಲೆ ಹಲ್ಲೆ ಕುರಿತು ಪ್ರಕರಣವಿದೆ.

Comments are closed.