ಈಗಿನ ಕಾಲದಲ್ಲಿ ಜನರು ಕೆಲಸದ ಒತ್ತಡದಲ್ಲಿ ಬೆಳಗ್ಗಿನ ಉಪಹಾರ ಸೇವಿಸಲು ಹಿಂದೇಟು ಹಾಕುತ್ತಾರೆ. ಆದರೆ ಬೆಳಗ್ಗೆ ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಬಳಹ ಮುಖ್ಯವಾಗುತ್ತದೆ. ಯಾಕೆಂದರೆ ಬೆಳಗ್ಗೆ ತಿಂಡಿ ಮಾಡಿಲ್ಲ ಅಂದರೆ ಮೆಟೋಬಾಲಿಸಂ(ಚಯಾಪಚಯ ಕ್ರಿಯೆ) ಕಡಿಮೆ ಆಗುತ್ತದೆ ಹಾಗೂ ದೇಹದ ತೂಕ ಹೆಚ್ಚಾಗುತ್ತದೆ. ಬೆಳಗ್ಗೆ ತಿಂಡಿ ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ ಅಲ್ಲದೆ, ರೋಗಗಳು ಕೂಡ ಬರುವುದಿಲ್ಲ. ಹಾಗಾಗಿ ಬೆಳಗ್ಗಿನ ಉಪಹಾರವನ್ನು ಸೇವಿಸಿದ್ರೆ ಒಳ್ಳೆಯದು.
ಬೆಳಗ್ಗಿನ ಉಪಹಾರ ಸೇವಿಸಿದರೆ ನೆನಪಿನ ಶಕ್ತಿ ಸುಧಾರಿಸುತ್ತದೆ. ಮೆದುಳಿಗೆ ಮುಖ್ಯವಾಗಿ ಕಾರ್ಬೋಹೈಡ್ರೆಟ್ ಬೇಕಾಗುತ್ತದೆ. ಈ ಕಾರ್ಬೋಹೈಡ್ರೆಟ್ ಬೆಳಗ್ಗಿನ ಉಪಹಾರ ಸೇವಿಸುವುದರಿಂದ ಸಿಗುತ್ತದೆ. ಹಾಗಾಗಿ ಬೆಳಗ್ಗಿನ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಹೇಳುತ್ತಾರೆ. ಬೆಳಗ್ಗಿನ ತಿಂಡಿ ಸೇವಿಸುವುದರಿಂದ ಟೆನ್ಷನ್ ದೂರವಾಗುತ್ತದೆ ಹಾಗೂ ಮನುಷ್ಯನ ಮೂಡ್ ನಲ್ಲೂ ಸುಧಾರಣೆ ಕಾಣುತ್ತದೆ.
ಇದರಿಂದ ಡಯಾಬಿಟಿಸ್(ಮಧುಮೇಹ)ದ ಭಯ ಇರುವುದಿಲ್ಲ. ನೀವು ಆರೋಗ್ಯಕರ ಉಪಹಾರ ಸೇವನೆ ಮಾಡುವುದರಿಂದ ಡಯಾಬಿಟಿಸ್ ಬರುವುದಿಲ್ಲ. ದಿನಾ ಬೆಳಗ್ಗೆ ಉಪಹಾರ ಸೇವಿಸಿಲ್ಲ ಎಂದರೆ ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಅಧ್ಯಯನದ ಪ್ರಕಾರ ಬೆಳಗ್ಗಿನ ಟಿಫಿನ್ ಸೇವಿಸಿದರೆ ದೇಹದ ತೂಕ ಹೆಚ್ಚಾಗುವುದಿಲ್ಲ ಎಂಬುದು ತಿಳಿದುಬಂದಿದೆ.
Comments are closed.