ಮಂಗಳೂರು : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2019 ರಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ನಿರ್ಮಯ್ ವೈ.ಎನ್ ಒಂದು ಚಿನ್ನದ ಪದಕ ಪಡೆದಿದ್ದಾರೆ. ಇವರು 9 ರಿಂದ 11 ವರ್ಷ ವಿಭಾಗದ 500 ಮೀ ರೋಡ್ ರೇಸ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ನಿರ್ಮಯ್ ವೈ.ಎನ್ (9 ವರ್ಷ) ಇವರು ನಗರದ ಉರ್ವ ಹೊಯ್ಗೆಬೈಲು ನಿವಾಸಿಯಾದ ಯದುನಂದನ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರನಾಗಿದ್ದು, ನಗರದ ಡೊಂಗರಿಕೇರಿಯ ಕೆನರಾ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ. ಅವರು ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಹೊಯ್ಗೆಬೈಲು ತರಬೇತಿದಾರರಾದ ಜಯರಾಜ್ ಹಾಗೂ ಮೋಹನ್ ಕೆ. ರವರಿಂದ ತರಬೇತಿ ಪಡೆದಿದ್ದಾರೆ.
Comments are closed.