ಕರಾವಳಿ

ಚಳಿಗಾಲದಲ್ಲಿ ಉಂಟಾಗುವಂತಹ ಒಡೆದ ತುಟಿಗಳ ಪರಿಹಾರಕ್ಕೆ ಇದು ಒಳ್ಳೆಯ ಮದ್ದು.

Pinterest LinkedIn Tumblr

ಸಾಮಾನ್ಯವಾಗಿ ವಾತಾವರಣದ ಏರುಪೇರಿನಿಂದಾಗಿ ತುಟಿ ಒಡೆಯುವಂತಹ ಸಮಸ್ಯೆ ಕಾಣಿಸುವುದು ಹೆಚ್ಚು. ಯಾಕೆಂದರೆ ವಾತಾವರಣದಲ್ಲಿ ತೇವಾಂಶವು ಕಡಿಮೆಯಾಗಿ ತುಟಿಗಳಿಗೆ ಹಾನಿ ಮಾಡಲಿದೆ.

ಹೆಚ್ಚಿನ ಪೋಷಕಾಂಶವನ್ನು ಹೊಂದಿರುವಂತಹ ತುಪ್ಪವನ್ನು ಹಿಂದಿನಿಂದಲೂ ಭಾರತೀಯ ಅಡುಗೆಗಳಲ್ಲಿ ಬಳಸುತ್ತಲೇ ಬರುತ್ತಿದ್ದಾರೆ. ತುಪ್ಪದಲ್ಲಿ ಕೊಬ್ಬಿನಾಂಶ ಹೆಚ್ಚಿಗೆ ಇರುವುದರಿಂದ ಬೊಜ್ಜು ದೇಹದವರು ಅದನ್ನು ದೂರವೇ ಇರಿಸಿದ್ದಾರೆ. ಆದರೆ ಇದರ ಆರೋಗ್ಯ ಲಾಭಗಳು ಅಪಾರ..

ಅದರಲ್ಲೂ ಚಳಿಗಾಲದಲ್ಲಿ ಉಂಟಾಗುವಂತಹ ಒಡೆದ ತುಟಿಗಳ ಪರಿಹಾರಕ್ಕೆ ತುಪ್ಪವು ಒಳ್ಳೆಯ ಮದ್ದು. ಇದು ಚರ್ಮಕ್ಕೆ ತೇವಾಂಶವನ್ನು ನೀಡಿ ಒಡೆದ ತುಟಿಗಳನ್ನು ಶಮನಗೊಳಿಸುತ್ತದೆ. ಒಡೆದ ತುಟಿಗೆ ಕೊಬ್ಬರಿ ಎಣ್ಣೆಯ ಉತ್ತಮ ಆರೈಕೆ ಸಾಮಾನ್ಯವಾಗಿ ವಾತಾವರಣದ ಏರುಪೇರಿನಿಂದಾಗಿ ತುಟಿ ಒಡೆಯುವಂತಹ ಸಮಸ್ಯೆ ಕಾಣಿಸುವುದು ಹೆಚ್ಚು. ಯಾಕೆಂದರೆ ವಾತಾವರಣದಲ್ಲಿ ತೇವಾಂಶವು ಕಡಿಮೆಯಾಗುತ್ತದೆ.

ಒಂದೆರಡು ಚಮಚ ತುಪ್ಪವನ್ನು ಬಿಸಿ ಮಾಡಿ, ಇದಕ್ಕೆ ಒಂದು ಹನಿ ಜೇನುತುಪ್ಪ ಹಾಕಿ, ಚೆನ್ನಾಗಿ ಕಲಿಸಿಕೊಳ್ಳಿ ಇನ್ನು ಈ ಮಿಶ್ರಣ ತಣಿದ ನಂತರ ತುಟಿಗಳಿಗೆ ಸರಿಯಾಗಿ ಮಸಾಜ್ ಮಾಡಿ. ಪ್ರತಿ ದಿನ ನಿದ್ರೆ ಮಾಡುವ ಮೊದಲು ಈ ವಿಧಾನವನ್ನು ಅನುಸರಿಸಿ, ಇದು ಒಡೆದ ತುಟಿಗಳನ್ನು ಆದಷ್ಟು ಬೇಗನೆ ನಿವಾರಣೆ ಮಾಡುತ್ತದೆ. ಬೆಳಿಗ್ಗೆ ಎದ್ದ ಬಳಿಕ ನೀರಿನಿಂದ ತೊಳೆಯಿರಿ.

Comments are closed.